AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನಟಿ ಗ್ಲಾಮರಸ್ ಆಗಿದ್ರೆ ಮಾತ್ರ ನನ್ನ ಕಣ್ಣು ಬೀಳುತ್ತೆ’; ಓಪನ್ ಆಗಿ ಹೇಳಿದ ರವಿಚಂದ್ರನ್

‘ನಟಿ ಗ್ಲಾಮರಸ್ ಆಗಿದ್ರೆ ಮಾತ್ರ ನನ್ನ ಕಣ್ಣು ಬೀಳುತ್ತೆ’; ಓಪನ್ ಆಗಿ ಹೇಳಿದ ರವಿಚಂದ್ರನ್

ರಾಜೇಶ್ ದುಗ್ಗುಮನೆ
|

Updated on: May 05, 2025 | 10:48 AM

Share

ರವಿಚಂದ್ರನ್ ಅವರು ಗ್ಲಾಮರ್​​ಗೆ ಹೆಚ್ಚು ಆದ್ಯತೆ ನೀಡುತ್ತಾರೆ. ನಿರ್ದೇಶನ ಆರಂಭ ಆದಾಗಿನಿಂದಲೂ ರವಿಚಂದ್ರನ್ ಅವರು ಇದೇ ಟ್ರೆಂಡ್ ಫಾಲೋ ಮಾಡಿಕೊಂಡು ಬಂದಿದ್ದಾರೆ. ಈಗ ರವಿಚಂದ್ರನ್ ಅವರು ನೀಡಿರೋ ಹೇಳಿಕೆ ವೈರಲ್ ಆಗಿದೆ. ಗ್ಲಾಮರ್ ಆಗಿದ್ರೆ ಮಾತ್ರ ತಾವು ಹೀರೋಯಿನ್​ಗಳನ್ನು ನೋಡೋದು ಎಂದು ಅವರು ಹೇಳಿದ್ದಾರೆ.

ರವಿಚಂದ್ರನ್ (Ravichandran) ಅವರಿಗೆ ಕ್ರೇಜಿ ಸ್ಟಾರ್ ಅನ್ನೋ ಹೆಸರು ಇದೆ. ತೆರೆಮೇಲೆ ಅವರು ಸಖತ್ ರೊಮ್ಯಾಂಟಿಕ್. ಅನೇಕ ನಟಿಯರ ಜೊತೆ ರೊಮ್ಯಾನ್ಸ್ ಮಾಡಿದ್ದಾರೆ. ನಟಿಯರು ಗ್ಲಾಮರಸ್ ಆಗಿದ್ರೆ ರವಿಚಂದ್ರನ್​ಗೆ ಹೆಚ್ಚು ಇಷ್ಟವಂತೆ. ಚಂದನ್ ಶೆಟ್ಟಿ ನಟನೆಯ ‘ಸೂತ್ರಧಾರಿ’ ಸಿನಿಮಾದ ಟ್ರೈಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ನಟರಾದ ರವಿಚಂದ್ರನ್ ಮತ್ತು ಶಿವರಾಜ್ ಕುಮಾರ್ ಅತಿಥಿಯಾಗಿ ಭಾಗವಹಿಸಿದ್ದರು. ಈ ವೇಳೆ ನಾಯಕಿ ಅಪೂರ್ವ ಅವರನ್ನು ಕರೆಯುವಾಗ, ‘ಅಪೂರ್ವ ಯಾವಾಗಲೂ ಗ್ಲಾಮರಸ್​ ಆಗೇ ಇರೋದು. ಅವರು ಗ್ಲಾಮರ್ ಆಗಿದ್ದಿದ್ದಕ್ಕೇ ನನ್ನ ಕಣ್ಣು ಬಿದ್ದಿದ್ದು. ಇಲ್ಲ ಅಂದ್ರೆ ಏಕೆ ಕಣ್ಣು ಹಾಕಲಿ’ ಎಂದು ರವಿಚಂದ್ರನ್ ಕೇಳಿದ್ದಾರೆ. ರವಿಚಂದ್ರನ್ ನಿರ್ದೇಶನದ ‘ಅಪೂರ್ವ’ ಹೆಸರಿನ ಸಿನಿಮಾದಲ್ಲಿ ಅಪೂರ್ವ ನಟಿಸಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More