‘ನಿಜ ಜೀವನದಲ್ಲೂ ಕಟಕಟೆ ಹತ್ತಿದ್ದೀನಿ’ ಹಳೆ ಕೇಸು ನೆನಪಿಸಿಕೊಂಡ ರವಿಚಂದ್ರನ್

‘ನಿಜ ಜೀವನದಲ್ಲೂ ಕಟಕಟೆ ಹತ್ತಿದ್ದೀನಿ’ ಹಳೆ ಕೇಸು ನೆನಪಿಸಿಕೊಂಡ ರವಿಚಂದ್ರನ್

|

Updated on: May 25, 2024 | 10:17 PM

ಕ್ರೇಜಿಸ್ಟಾರ್ ರವಿಚಂದ್ರನ್ ನಟಿಸಿರುವ ‘ದಿ ಜಡ್ಜ್​ಮೆಂಟ್’ ಸಿನಿಮಾ ಉತ್ತಮ ಪ್ರತಿಕ್ರಿಯೆಗಳನ್ನು ಗಳಿಸುತ್ತಿದೆ. ಸಿನಿಮಾದಲ್ಲಿ ರವಿಚಂದ್ರನ್ ವಕೀಲನ ಪಾತ್ರದಲ್ಲಿ ನಟಿಸಿದ್ದಾರೆ. ತಮ್ಮ ಮೇಲೆ ಈ ಹಿಂದೆ ಹಾಕಲಾಗಿದ್ದ ಕೇಸುಗಳನ್ನು ರವಿಚಂದ್ರನ್ ಈ ಸಂದರ್ಭದಲ್ಲಿ ನೆನಪಿಸಿಕೊಂಡಿದ್ದಾರೆ.

ಕ್ರೇಜಿಸ್ಟಾರ್ ರವಿಚಂದ್ರನ್ (Ravichandran) ನಟಿಸಿರುವ ‘ದಿ ಜಡ್ಜ್​ಮೆಂಟ್’ ಕೆಲ ದಿನಗಳ ಹಿಂದಷ್ಟೆ ಬಿಡುಗಡೆ ಆಗಿದ್ದು, ಸಿನಿಮಾದಲ್ಲಿ ವಕೀಲನ ಪಾತ್ರದಲ್ಲಿ ರವಿಚಂದ್ರನ್ ಮಿಂಚಿದ್ದಾರೆ. ‘ದಿ ಜಡ್ಜ್​ಮೆಂಟ್’ ಸಿನಿಮಾ ರಾಜ್ಯದ ಹಲೆವೆಡೆ ಉತ್ತಮ ಪ್ರದರ್ಶನ ಕಾಣುತ್ತಿದೆ. ಸಿನಿಮಾಕ್ಕೆ ಸಿಗುತ್ತಿರುವ ಒಳ್ಳೆಯ ಪ್ರತಿಕ್ರಿಯೆಯಿಂದ ಸಂಭ್ರಮಗೊಂಡು ಯಶಸ್ಸು ಆಚರಿಸಲೆಂದು ಚಿತ್ರತಂಡ ಸೇರಿತ್ತು. ಈ ವೇಳೆ ಮಾಧ್ಯಮಗಳೊಟ್ಟಿಗೆ ಮಾತನಾಡಿದ ರವಿಚಂದ್ರನ್ ತಮ್ಮ ಮೇಲೆ ಹಾಕಲಾಗಿದ್ದ ಕೆಲವು ಹಳೆಯ ಪ್ರಕರಣಗಳನ್ನು ನೆನಪಿಸಿಕೊಂಡರು. ‘ಚಿನ್ನ’ ಸಿನಿಮಾದ ಸಂದರ್ಭದಲ್ಲಿ ನನ್ನ ಮೇಲೆ ‘ಟಾಡಾ’ ಪ್ರಕರಣ ದಾಖಲಿಸಿದ್ದರು, ಆದರೆ ಅದು ಸುಳ್ಳು ಕೇಸೆಂದು ಖಾತ್ರಿಯಾಯಿತು. ಇನ್ನೂ ಕೆಲವು ಕೇಸುಗಳನ್ನು ನನ್ನ ಮೇಲೆ ಹಾಕಿದ್ದರು, ಚೆಕ್ ಬೌನ್ಸ್ ಕೇಸಿಗೂ ನ್ಯಾಯಾಲಯಕ್ಕೆ ಹೋಗಿದ್ದೀನಿ, ನ್ಯಾಯಾಲಯದ ಅನುಭವ ನನಗೆ ಚೆನ್ನಾಗಿದೆ’ ಎಂದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ