ನನ್ನನ್ನು ರಾಜನಾಗಿ ಮೆರೆಸಿದ್ದು ಹಂಸಲೇಖ: ರವಿಚಂದ್ರನ್

Updated on: Jun 24, 2025 | 5:11 PM

V Ravichandran and Hamsalekha: ಹಂಸಲೇಖ ನಿರ್ದೇಶಿಸುತ್ತಿರುವ ಸಿನಿಮಾದ ಟೈಟಲ್ ಲಾಂಚ್​ಗೆ ತಮ್ಮ ದಶಕಗಳ ಗೆಳೆಯ ರವಿಚಂದ್ರನ್ ಅವರನ್ನು ಅತಿಥಿಯಾಗಿ ಆಹ್ವಾನಿಸಿದ್ದರು. ವೇದಿಕೆ ಮೇಲೆ ತಮ್ಮ ಹಾಗೂ ಹಂಸಲೇಖ ಅವರ ಆತ್ಮೀಯತೆಯ ಬಗ್ಗೆ ಮಾತನಾಡಿದ ರವಿಚಂದ್ರನ್, ‘ನಾನು ತೆರೆಯ ಮೇಲೆ ಮೆರೆದಿದ್ದೇನೆ, ನಾನು ಹಾಗೆ ರಾಜನಂತೆ ಮೆರೆಯುವಂತೆ ಮಾಡಿದ್ದು ಹಂಸಲೇಖ’ ಎಂದರು.

ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ (Hamsalekha) ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾಕ್ಕೆ ‘ಓಕೆ’ ಎಂದು ಹೆಸರಿಟ್ಟಿದ್ದು, ಸಿನಿಮಾದ ಟೈಟಲ್ ಲಾಂಚ್​ಗೆ ತಮ್ಮ ದಶಕಗಳ ಗೆಳೆಯ ರವಿಚಂದ್ರನ್ ಅವರನ್ನು ಅತಿಥಿಯಾಗಿ ಆಹ್ವಾನಿಸಿದ್ದರು. ವೇದಿಕೆ ಮೇಲೆ ತಮ್ಮ ಹಾಗೂ ಹಂಸಲೇಖ ಅವರ ಆತ್ಮೀಯತೆಯ ಬಗ್ಗೆ ಮಾತನಾಡಿದ ರವಿಚಂದ್ರನ್, ‘ನಾನು ತೆರೆಯ ಮೇಲೆ ಮೆರೆದಿದ್ದೇನೆ, ನಾನು ಹಾಗೆ ರಾಜನಂತೆ ಮೆರೆಯುವಂತೆ ಮಾಡಿದ್ದು ಹಂಸಲೇಖ’ ಎಂದರು. ತಾವು ಹಾಗೂ ಹಂಸಲೇಖ ಒಟ್ಟಿಗೆ ಕೆಲಸ ಮಾಡಿದ ದಿನಗಳನ್ನು ರವಿಚಂದ್ರನ್ ನೆನಪು ಮಾಡಿಕೊಂಡರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ