ಆರೋಪ ಸಾಬೀತು ಮಾಡಿದರೆ ಮನೆ ಕಾಯುವ ವಾಚ್ಮ್ಯಾನ್ ಆಗುವೆ: ರವಿಕಿರಣ್ ಸವಾಲು
Ravikiran: ನಟ ರವಿಕಿರಣ್ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಲಾಗಿದೆ. ಆರೋಪಗಳಿಗೆ ಪ್ರತಿಕ್ರಿಯಿಸಿರುವ ರವಿಕಿರಣ್, ಒಂದೊಮ್ಮೆ ಆರೋಪಗಳನ್ನು ಸಾಬೀತು ಮಾಡಿದರೆ ವಾಚ್ಮ್ಯಾನ್ ಆಗಿ ಅವರ ಮನೆ ಕಾಯುತ್ತೇನೆ ಎಂದು ಸವಾಲು ಹಾಕಿದ್ದಾರೆ.
ನಟ ರವಿಕಿರಣ್ (Ravikiran) ಭ್ರಷ್ಟಾಚಾರ ಆರೋಪಕ್ಕೆ ಗುರಿಯಾಗಿದ್ದಾರೆ. ಟೆಲಿವಿಷನ್ ಕಲ್ಚರಲ್ ಆಂಡ್ ಸ್ಪೋರ್ಟ್ಸ್ ಕ್ಲಬ್ನಲ್ಲಿ ಕಾರ್ಯದರ್ಶಿ ಆಗಿದ್ದಾಗ ದೊಡ್ಡ ಮೊತ್ತದ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ತೆರಿಗೆ ಕಟ್ಟದೆ ಸರ್ಕಾರಕ್ಕೆ ಲಕ್ಷಾಂತರ ಹಣ ವಂಚನೆ ಮಾಡಿದ್ದಾರೆ, ಸೊಸೈಟಿ ಕಾಯ್ದೆಗಳನ್ನು ಉಲ್ಲಂಘಿಸಿದ್ದಾರೆ ಎಂದು ಕೆಲವರು ಆರೋಪ ಮಾಡಿದ್ದಾರೆ. ತಮ್ಮ ಮೇಲಿನ ಆರೋಪಗಳಿಗೆ ಸ್ಪಷ್ಟನೆ ನೀಡಿರುವ ರವಿಕಿರಣ್, ತಾವು ಯಾವುದೇ ಭ್ರಷ್ಟಾಚಾರ ಮಾಡಿಲ್ಲ, ಬದಲಿಗೆ ಸಾಲ ಮಾಡಿ ಕ್ಲಬ್ಗೆ ಹಣ ಹೂಡಿಕೆ ಮಾಡಿದ್ದೀನಿ. ಅವರು ಮಾಡಿರುವ ಆರೋಪಗಳಲ್ಲಿ ಯಾವುದಾದರೂ ಐದು ಆರೋಪಗಳನ್ನು ಸಾಬೀತು ಮಾಡಿದರೆ ಅವರ ಮನೆ ಕಾಯುವ ವಾಚ್ಮ್ಯಾನ್ ಆಗಿ ಕೆಲಸ ಮಾಡುತ್ತೇನೆ ಎಂದು ರವಿಕಿರಣ್ ಸವಾಲು ಹಾಕಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ