WhatsApp Tricks: ವಾಟ್ಸ್​ಆ್ಯಪ್​ನಿಂದಾಗಿ ಫೋನ್ ಮೆಮೊರಿ ಫುಲ್ ಆಗ್ತಾ ಇದ್ಯಾ?

WhatsApp Tricks: ವಾಟ್ಸ್​ಆ್ಯಪ್​ನಿಂದಾಗಿ ಫೋನ್ ಮೆಮೊರಿ ಫುಲ್ ಆಗ್ತಾ ಇದ್ಯಾ?

ಕಿರಣ್​ ಐಜಿ
|

Updated on: Feb 14, 2024 | 8:15 AM

ದಿನಬೆಳಗಾದ್ರೆ ಕೆಲವರು ಕಳುಹಿಸುವ ಗುಡ್​ ಮಾರ್ನಿಂಗ್ ಮೆಸೇಜ್​ನಿಂದ ತೊಡಗಿ, ವೈರಲ್ ವಿಡಿಯೊಗಳಿಂದಾಗಿ ಫೋನ್​ ಮೆಮೊರಿ ಫುಲ್ ಆಗುತ್ತದೆ. ಹೇಗೆ ಅಂತೀರಾ? ವಾಟ್ಸ್​ಆ್ಯಪ್​ನಲ್ಲಿ ಬರುವ ಎಲ್ಲವನ್ನೂ ಕೆಲವರು ಡೌನ್​ಲೋಡ್ ಮಾಡಿಕೊಂಡು ಫೋನ್​ನಲ್ಲಿ ಸ್ಟೋರ್ ಮಾಡುತ್ತಲೇ ಹೋಗುತ್ತಾರೆ. ಅದರಿಂದಾಗಿ ಫೋನ್ ಮೆಮೊರಿ ಫುಲ್ ಎಂಬ ಮೆಸೇಜ್ ಆಗಾಗ ಕಾಣಿಸತೊಡಗುತ್ತದೆ. ಅದಕ್ಕೆ ಕಾರಣವೇನು?

ವಾಟ್ಸ್​ಆ್ಯಪ್ ಜನಪ್ರಿಯತೆ ಇಂದು ಭಾರತದಲ್ಲಿ ಎಷ್ಟಿದೆ ಎಂದರೆ, ಒಂದರ್ಧ ಗಂಟೆ ಕಾಲ ಏನಾದರೂ ವಾಟ್ಸ್​ಆ್ಯಪ್ ಕೆಲಸ ಮಾಡದಿದ್ದರೆ ಜನರಂತೂ ಪೂರ್ತಿ ಗಲಿಬಿಲಿಗೆ ಒಳಗಾಗುತ್ತಾರೆ. ವಾಟ್ಸ್ಆ್ಯಪ್ ಗ್ರೂಪ್ ಇರಬಹುದು, ಕಮ್ಯೂನಿಟಿ ಅಥವಾ ಚಾನಲ್ ಇರಬಹುದು, ಅದರಲ್ಲಿ ಜನರು ಸದಾ ಸಕ್ರಿಯರಾಗಿರುತ್ತಾರೆ. ಹಾಗಿರುವಾಗ ದಿನಬೆಳಗಾದ್ರೆ ಕೆಲವರು ಕಳುಹಿಸುವ ಗುಡ್​ ಮಾರ್ನಿಂಗ್ ಮೆಸೇಜ್​ನಿಂದ ತೊಡಗಿ, ವೈರಲ್ ವಿಡಿಯೊಗಳಿಂದಾಗಿ ಫೋನ್​ ಮೆಮೊರಿ ಫುಲ್ ಆಗುತ್ತದೆ. ಹೇಗೆ ಅಂತೀರಾ? ವಾಟ್ಸ್​ಆ್ಯಪ್​ನಲ್ಲಿ ಬರುವ ಎಲ್ಲವನ್ನೂ ಕೆಲವರು ಡೌನ್​ಲೋಡ್ ಮಾಡಿಕೊಂಡು ಫೋನ್​ನಲ್ಲಿ ಸ್ಟೋರ್ ಮಾಡುತ್ತಲೇ ಹೋಗುತ್ತಾರೆ. ಅದರಿಂದಾಗಿ ಫೋನ್ ಮೆಮೊರಿ ಫುಲ್ ಎಂಬ ಮೆಸೇಜ್ ಆಗಾಗ ಕಾಣಿಸತೊಡಗುತ್ತದೆ. ಅದಕ್ಕೆ ಕಾರಣವೇನು?