ಕಿರುತೆರೆ ನಟ ರವಿಕಿರಣ್ ವಿರುದ್ಧ ಕ್ಲಬ್​ನಲ್ಲಿ ಅವ್ಯವಹಾರ ಆರೋಪ; ಸದಸ್ಯರಿಂದ ದೂರು

‘ಟೆಲಿವಿಷನ್ ಕಲ್ಚರಲ್ ಆ್ಯಂಡ್​ ಸ್ಪೋರ್ಟ್ಸ್‌ ಕ್ಲಬ್‌’ ಕಾರ್ಯದರ್ಶಿ ಆಗಿದ್ದ ನಟ, ನಿರ್ದೇಶಕ ರವಿಕಿರಣ್ ವಿರುದ್ಧ ಹಲವು ಆರೋಪಗಳು ಎದುರಾಗಿವೆ. ರವಿಕಿರಣ್​ ಅವರಿಂದ ಕ್ಲಬ್​ನಲ್ಲಿ ಅವ್ಯವಹಾರ ನಡೆದಿದೆ ಎಂದು ಸದಸ್ಯರು ಆರೋಪ ಮಾಡಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಸುಬ್ರಹ್ಮಣ್ಯಪುರ ಪೊಲೀಸ್​ ಠಾಣೆಗೆ ದೂರು ಸಲ್ಲಿಸಲಾಗಿದೆ. ಆ ಬಗ್ಗೆ ಇಲ್ಲಿದೆ ಮಾಹಿತಿ..

ಕಿರುತೆರೆ ನಟ ರವಿಕಿರಣ್ ವಿರುದ್ಧ ಕ್ಲಬ್​ನಲ್ಲಿ ಅವ್ಯವಹಾರ ಆರೋಪ; ಸದಸ್ಯರಿಂದ ದೂರು
ಸುಬ್ರಹ್ಮಣ್ಯಪುರ ಪೊಲೀಸ್​ ಠಾಣೆ, ರವಿಕಿರಣ್​
Follow us
Jagadisha B
| Updated By: ಮದನ್​ ಕುಮಾರ್​

Updated on: Feb 12, 2024 | 10:29 PM

ಕಿರುತೆರೆಯ ನಟ ರವಿಕಿರಣ್ (Ravi Kiran) ಅವರು ‘ಟೆಲಿವಿಷನ್ ಕಲ್ಚರಲ್ ಆ್ಯಂಡ್​ ಸ್ಪೋರ್ಟ್ಸ್‌ ಕ್ಲಬ್‌’ನಲ್ಲಿ ಅವ್ಯವಹಾರ ಎಸಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇದಕ್ಕೆ ಸಂಬಂಧಿಸಿದಂತೆ ಸುಬ್ರಹ್ಮಣ್ಯಪುರ ಪೊಲೀಸ್​ ಠಾಣೆಗೆ ದೂರು ನೀಡಲು ಕ್ಲಬ್ ಸದಸ್ಯರು ಮುಂದಾಗಿದ್ದಾರೆ. ಹಲವು ವರ್ಷಗಳಿಂದ ಕ್ಲಬ್‌ನ (Television Cultural and Sports Club) ಕಾರ್ಯದರ್ಶಿಯಾಗಿದ್ದ ರವಿಕಿರಣ್‌ ಅವರ ಅವ್ಯವಹಾರದ ಬಗ್ಗೆ ಪ್ರಶ್ನಿಸಿದ್ದಕ್ಕೆ ಕ್ಲಬ್‌ನಲ್ಲಿ ಗಲಾಟೆ ನಡೆಸಿದ ಆರೋಪ ಕೇಳಿಬಂದಿದೆ. ಬಳಿಕ ಕ್ಲಬ್​ ಸದಸ್ಯರು ಸುಬ್ರಹ್ಮಣ್ಯಪುರ ಠಾಣೆ (Television Cultural and Sports Club) ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕಳೆದ 20 ವರ್ಷದಿಂದ ಕಿರುತೆರೆ ಕಲಾವಿದರಿಗಾಗಿ ಈ ಕ್ಲಬ್ ಇದೆ.

‘ಸರ್ಕಾರ ಕೊಟ್ಟ ಅನುದಾನದಲ್ಲಿ ಕ್ಲಬ್ ನಿರ್ಮಾಣ ಮಾಡಿದ್ದೇವೆ. ಕ್ಲಬ್​ಗಾಗಿ ಸರ್ಕಾರವೇ 3 ಕೋಟಿಗೂ ಅಧಿಕ ಹಣವನ್ನು ನೀಡಿದೆ. ಕ್ಲಬ್​ನಲ್ಲಿ ಕಿರುತೆರೆಯ ಸಾವಿರಾರು ಕಲಾವಿದರಿದ್ದಾರೆ. ಕ್ಲಬ್ ಆರಂಭದಿಂದಲೂ ರವಿಕಿರಣ್ ಕಾರ್ಯದರ್ಶಿ ಆಗಿದ್ದಾರೆ. GST, ಬಿಬಿಎಂಪಿ ಟ್ಯಾಕ್ಸ್ ಸೇರಿ ಯಾವುದೇ ತೆರಿಗೆ ಪಾವತಿ ಮಾಡಿಲ್ಲ. ಹಣವನ್ನು ಪಾವತಿಸದೇ ಅದರ ಹೆಸರಲ್ಲಿ ಕ್ಲಬ್ ಸದಸ್ಯರಿಂದ ವಸೂಲಿ ಮಾಡಲಾಗಿದೆ’ ಎಂದು ಸದಸ್ಯರು ಆರೋಪಿಸಿದ್ದಾರೆ.

ಇದನ್ನೂ ಓದಿ: ಕಿರುತೆರೆಗೆ ಪ್ರವೇಶಿಸಿದ ‘ಕಾಂತಾರ’ ಚೆಲುವೆ ಸಪ್ತಮಿ ಗೌಡ

‘ಈ ಬಗ್ಗೆ ಚರ್ಚೆ ಹೆಚ್ಚಾದಾಗ ರವಿಕಿರಣ್ ಅವರನ್ನು ಸಸ್ಪೆಂಡ್ ಮಾಡಲಾಗಿತ್ತು. ಕ್ಲಬ್​ಗೆ ಬರದಂತೆ ಆದೇಶ ಇದ್ದರೂ 6 ಲಕ್ಷ ರೂಪಾಯಿ ಹಣ ಪಡೆದಿದ್ದಾರೆ. ಜೊತೆಗೆ ಇಂದು (ಫೆಬ್ರವರಿ 12) ಕ್ಲಬ್​ಗೆ ಅನುಮತಿ ಇಲ್ಲದಿದ್ದರೂ ಬಂದಿದ್ದಾರೆ. ಹಾಗಾಗಿ ಅವರ ವಿರುದ್ಧ ಹೋರಾಟ ಮಾಡುತ್ತೇವೆ’ ಎಂದು ಕಲಾವಿದರು ಹೇಳಿಕೆ ನೀಡಿದ್ದಾರೆ.

ಮನವರಿಕೆ ಯತ್ನ: ರವಿಕಿರಣ್ ವಿರುದ್ಧ ಕ್ಲಬ್​ನಲ್ಲಿ ಅವ್ಯವಹಾರದ ಆರೋಪ ಎದುರಾಗಿದ್ದು, ಕ್ಲಬ್​ ಸದಸ್ಯರು ದೂರು ನೀಡಿದ ಹಿನ್ನೆಲೆಯಲ್ಲಿ ಸುಬ್ರಮಣ್ಯಪುರ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಕೋರ್ಟ್​ನಲ್ಲಿ ಸಮಸ್ಯೆ ಬಗೆಹರಿಸಿಕೊಳ್ಳಿ ಎಂದು ಇನ್ಸ್​ಪೆಕ್ಟರ್ ಅರ್ಜುನ್​ ಮನವರಿಕೆ ಮಾಡಿದ್ದಾರೆ. ಅವರ ಮಾತು ಒಪ್ಪಿ ಸದಸ್ಯರು ತೆರಳಿರುವುದಾಗಿ ಪೊಲೀಸರಿಂದ ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿ: ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟ ಕಿರುತೆರೆ ನಟಿ; ಪೊಲೀಸರಿಂದ ತನಿಖೆ

ಹಲವು ವರ್ಷಗಳಿಂದ ರವಿಕಿರಣ್​ ಅವರು ಬಣ್ಣದ ಲೋಕದಲ್ಲಿ ಸಕ್ರಿಯರಾಗಿದ್ದಾರೆ. ಕಲಾವಿದರ ಕುಟುಂಬದಲ್ಲಿ ಬಂದ ಅವರಿಗೆ ಚಿಕ್ಕ ವಯಸ್ಸಿನಲ್ಲಿಯೇ ನಟನೆ ಬಗ್ಗೆ ಆಸಕ್ತಿ ಮೂಡಿತ್ತು. ಕಿರುತೆರೆಯ ಅನೇಕ ಧಾರಾವಾಹಿಗಳಲ್ಲಿ ಅವರು ನಟಿಸಿ, ನಿರ್ದೇಶನವನ್ನೂ ಮಾಡಿದ್ದಾರೆ. ಕಿರುತೆರೆಯಲ್ಲಿ ಅವರು ಅಪಾರ ಅನುಭವ ಪಡೆದಿದ್ದಾರೆ. ಈಗ ‘ಟೆಲಿವಿಷನ್ ಕಲ್ಚರಲ್ ಆ್ಯಂಡ್​ ಸ್ಪೋರ್ಟ್ಸ್‌ ಕ್ಲಬ್‌’ ವಿಚಾರದಲ್ಲಿ ಅವರ ಮೇಲೆ ಆರೋಪ ಎದುರಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮಾತಿಗೆ ಅಡ್ಡಿಪಡಿಸುತ್ತಿದ್ದ ರಾಯರೆಡ್ಡಿಯವರಿಗೆ ಸುಮ್ಮನಿರಲು ಹೇಳಿದ ಯತ್ನಾಳ್
ಮಾತಿಗೆ ಅಡ್ಡಿಪಡಿಸುತ್ತಿದ್ದ ರಾಯರೆಡ್ಡಿಯವರಿಗೆ ಸುಮ್ಮನಿರಲು ಹೇಳಿದ ಯತ್ನಾಳ್
ಮಂತ್ರಿಗಳಿಗೆ ಪ್ರಶ್ನೆ ಕೇಳಿದರೆ ಕಾಂಗ್ರೆಸ್ ಶಾಸಕರು ನಿಲ್ಲೋದ್ಯಾಕೆ? ಯತ್ನಾ
ಮಂತ್ರಿಗಳಿಗೆ ಪ್ರಶ್ನೆ ಕೇಳಿದರೆ ಕಾಂಗ್ರೆಸ್ ಶಾಸಕರು ನಿಲ್ಲೋದ್ಯಾಕೆ? ಯತ್ನಾ
ವಿರೋಧಫಕ್ಷದವರು ಸಭಾತ್ಯಾಗ ಮಾಡೋದು ವಾಡಿಕೆ, ಆದರೆ ಇಲ್ಲಿ ಸಿಎಂ!
ವಿರೋಧಫಕ್ಷದವರು ಸಭಾತ್ಯಾಗ ಮಾಡೋದು ವಾಡಿಕೆ, ಆದರೆ ಇಲ್ಲಿ ಸಿಎಂ!
ಸಿಎಂ ಕರೆದಿರುವ ವಿಷಯ ಹೇಳಿದಾಗ ಸಿಸಿ ಪಾಟೀಲ್ ಕುಂಟುನೆಪ ಹೇಳಿದರು: ಸಚಿವೆ
ಸಿಎಂ ಕರೆದಿರುವ ವಿಷಯ ಹೇಳಿದಾಗ ಸಿಸಿ ಪಾಟೀಲ್ ಕುಂಟುನೆಪ ಹೇಳಿದರು: ಸಚಿವೆ
ಸ್ವಾಮೀಜಿ ಬಿಜೆಪಿಯವರಾ ಅಂತ ಕೇಳುತ್ತಿರೋದು ಹಾಸ್ಯಾಸ್ಪದ: ಅಶೋಕ
ಸ್ವಾಮೀಜಿ ಬಿಜೆಪಿಯವರಾ ಅಂತ ಕೇಳುತ್ತಿರೋದು ಹಾಸ್ಯಾಸ್ಪದ: ಅಶೋಕ
ಸಾಕಿದ ಮಾವುತ ಬಿಟ್ಟು ಹೊರಟಾಗ ಓಡೋಡಿ ಹೋಗಿ ಎಳೆದು ತಂದ ಆನೆ ಮರಿ
ಸಾಕಿದ ಮಾವುತ ಬಿಟ್ಟು ಹೊರಟಾಗ ಓಡೋಡಿ ಹೋಗಿ ಎಳೆದು ತಂದ ಆನೆ ಮರಿ
ಕೃಷ್ಣ ಅವರ ಅಂತ್ಯಕ್ರಿಯೆ ಸರ್ಕಾರ ನಡೆಸಿಕೊಟ್ಟ ರೀತಿ ಅಭಿನಂದನೀಯ: ವಿಶ್ವನಾಥ್
ಕೃಷ್ಣ ಅವರ ಅಂತ್ಯಕ್ರಿಯೆ ಸರ್ಕಾರ ನಡೆಸಿಕೊಟ್ಟ ರೀತಿ ಅಭಿನಂದನೀಯ: ವಿಶ್ವನಾಥ್
Video: ಹೆದ್ದಾರಿಯಲ್ಲಿ ವಾಹನಗಳ ಮೇಲೆ ಅಪ್ಪಳಿಸಿದ ವಿಮಾನ
Video: ಹೆದ್ದಾರಿಯಲ್ಲಿ ವಾಹನಗಳ ಮೇಲೆ ಅಪ್ಪಳಿಸಿದ ವಿಮಾನ
ಅಪಘಾತದ ಬಳಿಕ ಬ್ಯಾಗ್​ ಎತ್ತಿಕೊಂಡು ಕಿಟಕಿಯಿಂದ ಓಡಿ ಹೋದ ಡ್ರೈವರ್
ಅಪಘಾತದ ಬಳಿಕ ಬ್ಯಾಗ್​ ಎತ್ತಿಕೊಂಡು ಕಿಟಕಿಯಿಂದ ಓಡಿ ಹೋದ ಡ್ರೈವರ್
Pushpa 2 Press Meet Live: ಅಭಿಮಾನಿಗಳಿಗೆ ‘ಪುಷ್ಪ’ರಾಜ್ ಧನ್ಯವಾದ
Pushpa 2 Press Meet Live: ಅಭಿಮಾನಿಗಳಿಗೆ ‘ಪುಷ್ಪ’ರಾಜ್ ಧನ್ಯವಾದ