DK Shivakumar: ‘ನಾನು ಮತ್ತು ರವಿಚಂದ್ರನ್​ ಓದಿದ್ದು ಒಂದೇ ಶಾಲೆಯಲ್ಲಿ’; ‘ರೇಮೊ’ ವೇದಿಕೆಯಲ್ಲಿ ಡಿಕೆಶಿ ಮಾತು

Edited By:

Updated on: Nov 20, 2022 | 10:48 PM

Raymo pre-release event: ಚಿತ್ರರಂಗದ ಜೊತೆ ತಮಗೆ ಇದ್ದ ಹಳೇ ಒಡನಾಟವನ್ನು ಡಿಕೆ ಶಿವಕುಮಾರ್​ ಮೆಲುಕು ಹಾಕಿದರು. ರವಿಚಂದ್ರನ್​ ಜೊತೆಗಿನ ಸ್ನೇಹದ ಬಗ್ಗೆಯೂ ಅವರು ಮಾತನಾಡಿದರು.

ನವೆಂಬರ್​ 25ರಂದು ‘ರೇಮೊ’ ಸಿನಿಮಾ (Raymo Movie) ಬಿಡುಗಡೆ ಆಗಲಿದೆ. ಭಾನುವಾರ (ನ.20) ಈ ಚಿತ್ರದ ಪ್ರೀ ರಿಲೀಸ್​ ಇವೆಂಟ್​ ಅದ್ದೂರಿಯಾಗಿ ನಡೆದಿದೆ. ಈ ಕಾರ್ಯಕ್ರಮಕ್ಕೆ ಡಿಕೆ ಶಿವಕುಮಾರ್​, ಕ್ರೇಜಿ ಸ್ಟಾರ್​ ರವಿಚಂದ್ರನ್​ (Ravichandran) ಮುಂತಾದವರು ಅತಿಥಿಗಳಾಗಿ ಆಗಮಿಸಿದ್ದರು. ಈ ವೇದಿಕೆಯಲ್ಲಿ ಮಾತನಾಡಿದ ಡಿಕೆ ಶಿವಕುಮಾರ್​, ‘ನಾನು ಮತ್ತು ರವಿಚಂದ್ರನ್​ ಬಾಲ್ಯದ ಗೆಳೆಯರು. ನಾವಿಬ್ಬರು ಓದಿದ್ದು ಒಂದೇ ಶಾಲೆಯಲ್ಲಿ’ ಎಂದು ಹೇಳಿದರು. ಚಿತ್ರರಂಗದ ಜೊತೆ ತಮಗೆ ಇದ್ದ ಹಳೇ ಒಡನಾಟವನ್ನು ಅವರು ಮೆಲುಕು ಹಾಕಿದರು. ಕನ್ನಡ ಚಿತ್ರರಂಗದ ಇಂದಿನ ಏಳಿಗೆಯನ್ನು ಡಿಕೆಶಿ (DK Shivakumar) ಕೊಂಡಾಡಿದರು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published on: Nov 20, 2022 10:48 PM
Loading...
Unable to load recommendations.
Follow Us
TV9 Web

TV9 Kannada

Read More