AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Exclusive: ಮಗನ ಮದುವೆ ಬಳಿಕ ರವಿಚಂದ್ರನ್​ ಮನೆ ಬದಲಿಸಿದ್ದು ಯಾಕೆ? ಇಲ್ಲಿದೆ ನಿಜವಾದ ಕಾರಣ

Ravichandran: ನಟ, ನಿರ್ದೇಶಕ, ನಿರ್ಮಾಪಕನಾಗಿ ಕನ್ನಡ ಚಿತ್ರರಂಗಕ್ಕೆ ರವಿಚಂದ್ರನ್ ನೀಡಿದ ಕೊಡುಗೆ ಅಪಾರ. ಸೋಲು-ಗೆಲುವುಗಳನ್ನು ಅವರು ಸಮನಾಗಿ ಸ್ವೀಕರಿಸಿದ್ದಾರೆ.

Exclusive: ಮಗನ ಮದುವೆ ಬಳಿಕ ರವಿಚಂದ್ರನ್​ ಮನೆ ಬದಲಿಸಿದ್ದು ಯಾಕೆ? ಇಲ್ಲಿದೆ ನಿಜವಾದ ಕಾರಣ
ರವಿಚಂದ್ರನ್
TV9 Web
| Edited By: |

Updated on:Sep 27, 2022 | 9:30 AM

Share

ಬಣ್ಣದ ಲೋಕದಲ್ಲಿ ರವಿಚಂದ್ರನ್​ (Ravichandran) ಅವರು ಅನೇಕ ಏಳು-ಬೀಳುಗಳನ್ನು ಕಂಡಿದ್ದಾರೆ. ಯಾವಾಗಲೂ ಹೊಸ ಪ್ರಯತ್ನಗಳ ಮೂಲಕ ಜನರನ್ನು ತಲುಪಬೇಕು ಎಂಬುದು ಅವರ ಆಶಯ. ಅವರ ವೃತ್ತಿಜೀವನದ ಎಲ್ಲ ಪ್ರಮುಖ ಘಟನೆಗಳಿಗೆ ಸಾಕ್ಷಿಯಾಗಿದ್ದು ಬೆಂಗಳೂರಿನ ರಾಜಾಜಿನಗರದಲ್ಲಿರುವ ಅವರ ನಿವಾಸ. ಆದರೆ ಇತ್ತೀಚೆಗೆ ಅವರು ಆ ಮನೆ (Ravichandran House) ಖಾಲಿ ಮಾಡಿದ್ದಾರೆ ಎಂಬ ಸುದ್ದಿ ಕೇಳಿಬಂತು. ಅದಕ್ಕೆ ಕಾರಣ ಏನು ಎಂಬುದು ಸ್ಪಷ್ಟವಾಗಿರಲಿಲ್ಲ. ಈ ಕುರಿತಾಗಿ ಅನೇಕ ಅಂತೆ-ಕಂತೆಗಳು ಹರಿದಾಡಿದ್ದವು. ಆದರೆ ಅವರು ಮನೆ ಖಾಲಿ ಮಾಡಿ, ಬೇರೆಡೆಗೆ ಶಿಫ್ಟ್​ ಆಗಿದ್ದಕ್ಕೆ ನಿಜವಾದ ಕಾರಣ ಏನು ಎಂಬುದು ಈಗ ಗೊತ್ತಾಗಿದೆ. ಹಲವು ವಿಷಯಗಳನ್ನು ಗಮನದಲ್ಲಿ ಇಟ್ಟುಕೊಂಡು ರವಿಚಂದ್ರನ್​ ಅವರು ಈ ನಿರ್ಧಾರ ಮಾಡಿದ್ದಾರೆ.

ಈ ವರ್ಷ ರವಿಚಂದ್ರನ್​ ಪುತ್ರ ಮನೋರಂಜನ್​ ಮದುವೆ ನೆರವೇರಿತು. ಮದುವೆ ಬಳಿಕ ಅವರು ಬೇರೆ ಮನೆಯಲ್ಲಿ ಇರುತ್ತಾರೆ ಎಂಬುದು ಮೊದಲೇ ನಿರ್ಧಾರ ಆಗಿತ್ತು. ‘ಒಮ್ಮೆಲೇ ಅವರನ್ನು ಬೇರೆಡೆಗೆ ಕಳಿಸಿದರೆ ಚೆನ್ನಾಗಿರುವುದಿಲ್ಲ. ಒಂದಷ್ಟು ದಿನ ನಾವೂ ಅವರ ಜೊತೆಯಲ್ಲೇ ಇರೋಣ’ ಎಂಬುದು ಓರ್ವ ತಂದೆಯಾಗಿ ರವಿಚಂದ್ರನ್​ ಭಾವನೆ. ಆ ಕಾರಣದಿಂದ ಅವರ ಇಡೀ ಕುಟುಂಬ ಮಗ-ಸೊಸೆಯ ಜೊತೆ ಹೊಸ ಮನೆಗೆ ಶಿಫ್ಟ್​ ಆಗಿದೆ.

ರಾಜಾಜಿನಗರದ ಮನೆ ಬಿಡಬೇಕು ಎಂದು ಬಹಳ ಹಿಂದೆಯೇ ರವಿಚಂದ್ರನ್​ ಅವರು ನಿರ್ಧರಿಸಿದ್ದರು. ಆದರೆ ಅವರ ತಾಯಿ ಪಟ್ಟಮ್ಮಾಳ್​ ಅವರು ಭಾವನಾತ್ಮಕವಾಗಿ ಈ ಜಾಗಕ್ಕೆ ಹೆಚ್ಚು ಕನೆಕ್ಟ್​ ಆಗಿದ್ದರು. ಬೇರೆಡೆಗೆ ತೆರಳುವುದು ತಾಯಿಗೆ ಇಷ್ಟ ಇಲ್ಲ ಎಂಬ ಕಾರಣಕ್ಕೆ ರವಿಚಂದ್ರನ್​ ಅವರು ಮನೆ ಬದಲಿಸುವ ನಿರ್ಧಾರವನ್ನು ಈ ಮೊದಲು ತೆಗೆದುಕೊಂಡಿರಲಿಲ್ಲ. ಈ ವರ್ಷ ಪಟ್ಟಮ್ಮಾಳ್​ ಇಹಲೋಕ ತ್ಯಜಿಸಿದರು. ಅದಾಗಿ ಹಲವು ತಿಂಗಳು ಕಳೆದ ಬಳಿಕ ರವಿಚಂದ್ರನ್​ ಅವರು ಈ ತೀರ್ಮಾನಕ್ಕೆ ಬಂದರು. ಸದ್ಯ ಅವರ ಕುಟುಂಬ ಹೊಸ ಮನೆಯಲ್ಲಿ ವಾಸವಾಗಿದೆ.

ಇದನ್ನೂ ಓದಿ
Image
ಮನೋರಂಜನ್​ ರವಿಚಂದ್ರನ್​-ಸಂಗೀತಾ ಮದುವೆಗೆ ಬಂದು ಶುಭಕೋರಿದ ಸೆಲೆಬ್ರಿಟಿಗಳ ಫೋಟೋ ಗ್ಯಾಲರಿ
Image
Ravichandran: ಮಗಳ ಮದುವೆಗೆ ಸಹಾಯ ಮಾಡಿದ ಮೂವರು ಸ್ನೇಹಿತರ ಬಗ್ಗೆ ವೇದಿಕೆಯಲ್ಲಿ ರವಿಚಂದ್ರನ್​ ಓಪನ್​ ಮಾತು
Image
‘ಹುಡುಗಿಯರನ್ನು ಮುಟ್ಟದೇ ನಿಂಗೆ ಸಿನಿಮಾ ಮಾಡೋಕೆ ಬರಲ್ವಾ?’: ರವಿಚಂದ್ರನ್​ಗೆ ನೇರ ಪ್ರಶ್ನೆ ಕೇಳಿದ್ದ ಪತ್ನಿ
Image
ಬೆಂಗಳೂರಲ್ಲಿ ರವಿಚಂದ್ರನ್​ ತಾಯಿ ಅಂತ್ಯಕ್ರಿಯೆ; ಭಾವುಕರಾದ ‘ಕ್ರೇಜಿಸ್ಟಾರ್​’

ವಾಸ್ತು ವಿಚಾರದಲ್ಲಿಯೂ ರವಿಚಂದ್ರನ್​ ಅವರಿಗೆ ಕೆಲವೊಂದು ನಂಬಿಕೆ ಇದೆ. ಅದರ ಅನುಗುಣವಾಗಿ ರಾಜಾಜಿನಗರದ ಮನೆಗೆ ಅನೇಕ ಬಾರಿ ಮಾರ್ಪಾಡು ಮಾಡಲಾಗಿತ್ತು. ಸದ್ಯಕ್ಕೆ ಮನೆ ಬದಲಿಸುವುದೇ ಸೂಕ್ತ ಎಂದು ಅವರಿಗೆ ಎನಿಸಿದೆ. ಇನ್ನು, ಸಿನಿಮಾಗಳ ವಿಚಾರದಲ್ಲಿಯೂ ಅವರು ಹೊಸ ರೀತಿಯಲ್ಲಿ ಆಲೋಚಿಸಲು ನಿರ್ಧರಿಸಿದ್ದಾರೆ. ಹೊಸ ಆಲೋಚನೆಗೆ ಹೊಸ ಜಾಗ, ಹೊಸ ವಾತಾವರಣ ಕೂಡ ಮುಖ್ಯ ಎನಿಸಿದ್ದರಿಂದ ಬೇರೆ ಮನೆಗೆ ಶಿಫ್ಟ್​ ಆಗಿದ್ದಾರೆ.

ನಟನಾಗಿ, ನಿರ್ದೇಶಕನಾಗಿ, ನಿರ್ಮಾಪಕನಾಗಿ ಕನ್ನಡ ಚಿತ್ರರಂಗದಲ್ಲಿ ರವಿಚಂದ್ರನ್ ಮಾಡಿದ ಸಾಧನೆ ಅಪಾರ. ಸೋಲು-ಗೆಲುವುಗಳನ್ನು ಅವರು ಸಮನಾಗಿ ಸ್ವೀಕರಿಸಿದ್ದಾರೆ. ಏನೇ ಕಷ್ಟ-ನಷ್ಟ ಬಂದರೂ ಸಿನಿಮಾ ಮೇಲಿನ ಪ್ರೀತಿಯನ್ನು ಅವರು ಕಳೆದುಕೊಂಡಿಲ್ಲ. ಇಂದಿಗೂ ಹೊಸ ಉತ್ಸಾಹದೊಂದಿಗೆ ಸಿನಿಮಾ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ. ಅಭಿಮಾನಿಗಳಿಗೆ ಭಿನ್ನವಾದದ್ದನ್ನು ನೀಡಬೇಕು ಎಂದು ಅವರ ಮನಸ್ಸು ಸದಾ ತುಡಿಯುತ್ತಿರುತ್ತದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 7:28 am, Tue, 27 September 22

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್