ಬೆಂಗಳೂರಲ್ಲಿ ರವಿಚಂದ್ರನ್ ತಾಯಿ ಅಂತ್ಯಕ್ರಿಯೆ; ಭಾವುಕರಾದ ‘ಕ್ರೇಜಿಸ್ಟಾರ್’
ಬೆಂಗಳೂರಿನ ಹರಿಶ್ಚಂದ್ರ ಘಾಟ್ನ ಚಿತಾಗಾರದಲ್ಲಿ ಪಟ್ಟಮ್ಮಾಳ್ ವೀರಸ್ವಾಮಿ ಅವರ ದೇಹಕ್ಕೆ ಅಗ್ನಿಸ್ಪರ್ಶ ಮಾಡುವ ಮೂಲಕ ಅಂತ್ಯಕ್ರಿಯೆ ಮಾಡಲಾಗಿದೆ. ಅಂತಿಮ ಯಾತ್ರೆ ವೇಳೆ ನಟ ರವಿಚಂದ್ರನ್ ಅವರು ತುಂಬಾನೇ ಭಾವುಕರಾಗಿದ್ದರು.
ಇಂದು (ಫೆ.28) ನಿಧನರಾದ ಖ್ಯಾತ ನಟ ರವಿಚಂದ್ರನ್ ಅವರ (Ravichandran) ತಾಯಿ ಪಟ್ಟಮ್ಮಾಳ್ ವೀರಸ್ವಾಮಿ ಅವರ (Pattammal Veeraswamy) ಅಂತ್ಯಕ್ರಿಯೆ ಸಂಜೆ ವೇಳೆಗೆ ನೆರವೇರಿದೆ. ಬೆಂಗಳೂರಿನ ಹರಿಶ್ಚಂದ್ರ ಘಾಟ್ನ ಚಿತಾಗಾರದಲ್ಲಿ ಪಟ್ಟಮ್ಮಾಳ್ ವೀರಸ್ವಾಮಿ ಅವರ ದೇಹಕ್ಕೆ ಅಗ್ನಿಸ್ಪರ್ಶ ಮಾಡುವ ಮೂಲಕ ಅಂತ್ಯಕ್ರಿಯೆ ಮಾಡಲಾಗಿದೆ. ಅಂತಿಮ ಯಾತ್ರೆ ವೇಳೆ ನಟ ರವಿಚಂದ್ರನ್ ಅವರು ತುಂಬಾನೇ ಭಾವುಕರಾಗಿದ್ದರು. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಪಟ್ಟಮ್ಮಾಳ್ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿ ಆಗದೇ ಪಟ್ಟಮ್ಮಾಳ್ ವೀರಸ್ವಾಮಿ ಅವರು ಕೊನೆಯುಸಿರು ಎಳೆದಿದ್ದಾರೆ. ರವಿಚಂದ್ರನ್ ತಾಯಿ ನಿಧನಕ್ಕೆ ಚಿತ್ರರಂಗದ ಅನೇಕರು ಕಂಬನಿ ಮಿಡಿದ್ದಾರೆ. ಪಟ್ಟಮ್ಮಾಳ್ ವೀರಸ್ವಾಮಿ ಅವರನ್ನು ಫೆ.28ರ ಮುಂಜಾನೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. 6.30ರ ಸುಮಾರಿಗೆ ಅವರು ನಿಧನ ಹೊಂದಿದ್ದರು.
ಇದನ್ನೂ ಓದಿ: Breaking News: ರವಿಚಂದ್ರನ್ ತಾಯಿ ನಿಧನ: ಪಟ್ಟಮ್ಮಾಳ್ ವೀರಸ್ವಾಮಿ ಇನ್ನಿಲ್ಲ
‘ಅಮ್ಮ ಇಲ್ಲದಿದ್ದರೆ ಎಷ್ಟು ಕಷ್ಟ ಅಂತ ನಮಗೆ ಗೊತ್ತು’: ರವಿಚಂದ್ರನ್ ತಾಯಿಯ ಅಂತಿಮ ದರ್ಶನ ಪಡೆದ ರಾಘಣ್ಣ
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ವಿಜಯ್ ಜೊತೆ ನಟಿಸಿರುವ ಕನ್ನಡದ ನಟ ವಜ್ರಾಂಗ್ ದಳಪತಿ ಬಗ್ಗೆ ಹೇಳಿದ್ದೇನು?
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ

