RBI DIGITA: ಲೋನ್ ಆ್ಯಪ್ ವಂಚನೆಗೆ ಕಡಿವಾಣ ಹಾಕಲು ಆರ್ಬಿಐ DIGITA
ಸಾಲ ನೀಡುತ್ತೇವೆಂದು ವಿವಿಧ ರೀತಿಯಲ್ಲಿ ದೌರ್ಜನ್ಯ ಮತ್ತು ವಂಚನೆ ಎಸಗುವ ಡಿಜಿಟಲ್ ಲೋನ್ ಆ್ಯಪ್ಗಳಿಂದ ಸಾರ್ವಜನಿಕರು ದೂರವಾಗಲು ಆರ್ಬಿಐ ಹೊಸ ಯೋಜನೆ ಹಾಕಿದೆ. ಲೋನ್ ಆ್ಯಪ್ಗಳನ್ನು ವೆರಿಫೈ ಮಾಡುವ ಮತ್ತು ತನಿಖೆ ನಡೆಸುವ ಡಿಜಿಟಾ ಏಜೆನ್ಸಿಯನ್ನು ಆರ್ಬಿಐ ಆರಂಭಿಸುವ ಸಾಧ್ಯತೆ ಇದೆ. ಡಿಜಿಟಾದಿಂದ ಮಾನ್ಯತೆ ಪಡೆಯದ ಲೋನ್ ಆ್ಯಪ್ಗಳನ್ನು ಅನಧಿಕೃತ ಎಂದು ಪರಿಗಣಿಸಲಾಗುತ್ತದೆ.
ಆನ್ಲೈನ್ನಲ್ಲಿ ಆ್ಯಪ್ ಮೂಲಕ ಸಾಲ ನೀಡಿ, ನಂತರ ವಂಚನೆ ನಡೆಸುವ ಮತ್ತು ಸಾಲ ಮರುಪಾವತಿಸಿದ ಬಳಿಕವೂ ಕಿರುಕುಳ ನೀಡುವ ವಿವಿಧ ಆ್ಯಪ್ಗಳಿವೆ. ಈಗಾಗಲೇ ಚೀನಾ ಮೂಲಕ ವಂಚಕ ಸಾಲದ ಆ್ಯಪ್ಗಳ ವಿರುದ್ಧ ಕೇಂದ್ರ ಸರ್ಕಾರ ಕ್ರಮ ಕೈಗೊಂಡಿದೆ. ಸಾಲ ನೀಡುತ್ತೇವೆಂದು ವಿವಿಧ ರೀತಿಯಲ್ಲಿ ದೌರ್ಜನ್ಯ ಮತ್ತು ವಂಚನೆ ಎಸಗುವ ಡಿಜಿಟಲ್ ಲೋನ್ ಆ್ಯಪ್ಗಳಿಂದ ಸಾರ್ವಜನಿಕರು ದೂರವಾಗಲು ಆರ್ಬಿಐ ಹೊಸ ಯೋಜನೆ ಹಾಕಿದೆ. ಲೋನ್ ಆ್ಯಪ್ಗಳನ್ನು ವೆರಿಫೈ ಮಾಡುವ ಮತ್ತು ತನಿಖೆ ನಡೆಸುವ ಡಿಜಿಟಾ ಏಜೆನ್ಸಿಯನ್ನು ಆರ್ಬಿಐ ಆರಂಭಿಸುವ ಸಾಧ್ಯತೆ ಇದೆ. ಡಿಜಿಟಾದಿಂದ ಮಾನ್ಯತೆ ಪಡೆಯದ ಲೋನ್ ಆ್ಯಪ್ಗಳನ್ನು ಅನಧಿಕೃತ ಎಂದು ಪರಿಗಣಿಸಲಾಗುತ್ತದೆ.
Latest Videos