ಬಾಳೆಹೊನ್ನೂರಲ್ಲಿ ಕಳಚಿದ ಖಾಸಗಿ ಬಸ್ಸಿನ ಹಿಂಬದಿ ಚಕ್ರ, ಅದೃಷ್ಟವಶಾತ್ ಪ್ರಾಣಹಾನಿ ಇಲ್ಲ

ಅರುಣ್​ ಕುಮಾರ್​ ಬೆಳ್ಳಿ

Updated on: Jul 17, 2024 | 11:29 AM

ಚಲಿಸುವ ವಾಹನ ಯಾವುದೇ ಆಗಿರಲಿ, ಅದರ ಮುಂದಿನ ಚಕ್ರ ಕಳಚಿದರೆ ದೊಡ್ಡ ಅನಾಹುತವಾಗುತ್ತದೆ. ವಾಹನಗಳು ಸಮತೋಲನ ತಪ್ಪಿ ಮುಗುಚಿ ಬೀಳುತ್ತವೆ ಮತ್ತು ವಾಹನ ದೊಡ್ಡದ್ದಾಗಿದ್ದರೆ ಮತ್ತು ಹೆಚ್ಚಿನ ವೇಗದಲ್ಲಿ ಚಲಿಸುತ್ತಿದ್ದರೆ ಪ್ರಾಣಹಾನಿ ನಿಶ್ಚಿತವಾಗಿ ಸಂಭವಿಸುತ್ತದೆ. ಅಂಥ ಹಲವು ದುರ್ಘಟನೆಗಳನ್ನು ನಾವು ವರದಿ ಮಾಡಿದ್ದೇವೆ.

ಚಿಕ್ಕಮಗಳೂರು: ಸಾಮಾನ್ಯವಾಗಿ ಇಂಥ ದೃಶ್ಯಗಳು ಸಿಸಿಟಿವಿ ಕೆಮೆರಾಗಳಲ್ಲಿ ಸೆರೆಯಾಗೋದು ವಿರಳ. ಜಿಲ್ಲೆಯ ಎನ್ ಅರ್ ಪುರ ತಾಲೂಕಿನ ಬಾಳೆಹೊನ್ನೂರಲ್ಲಿರುವ ರೋಟರಿ ಸರ್ಕಲ್ ಮುಂದಿನಿಂದ ಖಾಸಗಿ ಬಸ್ಸೊಂದು ಹಾದುಹೋಗುತ್ತಿದ್ದಾಗ ಅದರ ಹಿಂಬದಿಯ ಟೈರ್ ಗಳು ಕಳಚಿಕೊಂಡು ವಾಹನದಿಂದ ಬೇರ್ಪಟ್ಟು ರಸ್ತೆಯ ಮತ್ತೊಂದು ಬದಿಗೆ ಹೋಗುತ್ತಿರುವುದನ್ನು ದೃಶ್ಯದಲ್ಲಿ ನೋಡಬಹುದು. ಬಸ್ಸು ನಿಧಾನಗತಿಯಲ್ಲಿ ಚಲಿಸುತ್ತಿದ್ದ ಕಾರಣ ಪ್ರಾಣಪಾಯವೇನೂ ಸಂಭವಿಸಿಲ್ಲ. ನಮ್ಮ ಚಿಕ್ಕಮಗಳೂರು ವರದಿಗಾರ ನೀಡಿರುವ ಮಾಹಿತಿ ಪ್ರಕಾರ ಈ ಬಸ್ಸು ಬೆಂಗಳೂರು ನಗರದಿಂದ ಶೃಂಗೇರಿಗೆ ತೆರಳುತ್ತಿತ್ತು. ಹಿಂದಿನ ಟೈರ್ ಕಳಚಿಕೊಳ್ಳುವ ಸ್ಥಿಯಲ್ಲಿರುವುದು ಪ್ರಾಯಶಃ ಚಾಲಕನ ಗಮನಕ್ಕೆ ಬಂದಿರಬಹುದು. ಅಥವಾ ಬಸ್ಸು ಸರ್ಕಲ್ ಮೂಲಕ ಹಾದು ಹೋಗುತ್ತಿದ್ದ ಕಾರಣಕ್ಕೆ ವೇಗ ತಗ್ಗಿಸಿರಬಹುದು. ಅದೇನೆ ಇರಲಿ ಮಾರಾಯ್ರೇ, ಯಾವುದೇ ಅನಾಹುತ ಉಂಟಾಗದಿರುವುದು ಸಮಾಧಾನಕರ ಸಂಗತಿ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:    ಚಲುಸುತ್ತಿರುವಾಗ್ಲೇ ಕಳಚಿದ ಬಸ್​ ಟೈರ್, ಅಬ್ಬಾ..ಬದುಕಿದೆವು ಎಂದು ನಿಟ್ಟುಸಿರು ಬಿಟ್ಟ ಪ್ರಯಾಣಿಕರು: ವಿಡಿಯೋ ವೈರಲ್

Loading...
Unable to load recommendations.
Follow Us
ಅರುಣ್​ ಕುಮಾರ್​ ಬೆಳ್ಳಿ

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.