ಮನೆಯಲ್ಲೇ ಕೋಲಾರ ಸ್ಟೈಲ್ ಚಿಕನ್ ಧಮ್ ಬಿರಿಯಾನಿ ಮಾಡಿ ಸವಿಯಿರಿ

| Updated By: Digi Tech Desk

Updated on: Feb 24, 2023 | 9:35 AM

ಚಿಕನ್ ಬಿರಿಯಾನಿಯನ್ನು ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಮಾಡುತ್ತಾರೆ. ಆದರೆ ಹೋಟೆಲ್ ಅಥವಾ ರೆಸ್ಟೋರೆಂಟ್​ಗಳಲ್ಲಿ ಸಿಗುವ ರುಚಿ ಮನೆಯಲ್ಲಿ ಮಾಡಿದಾಗ ಸಿಗಲ್ಲ ಅಂತಾರೆ.

ಚಿಕನ್ ಧಮ್ ಬಿರಿಯಾನಿ ಅಂದರೆ ಮಾಂಸ ಪ್ರಿಯರ ಬಾಯಲ್ಲಿ ನೀರು ಬರುತ್ತೆ. ಮಾಂಸವನ್ನು ಸೇವಿಸುವ ಬಹುತೇಕರಿಗೆ ಚಿಕನ್ ಧಮ್ ಬಿರಿಯಾನಿ ಇಷ್ಟವಾಗುತ್ತೆ. ಇನ್ನು ಮಾಂಸದ ಅಡುಗೆಯಲ್ಲಿ ಬಿರಿಯಾನಿ ಅಗ್ರಸ್ಥಾನ ಪಡೆದಿದೆ ಅಂದರೆ ತಪ್ಪಾಗಲ್ಲ. ಮಕ್ಕಳಿಂದ ಹಿಡಿದು ದೊಡ್ಡವರ ತನಕ ಇಷ್ಟವಾಗುವ ಅಡುಗೆಯಲ್ಲಿ ಬಿರಿಯಾನಿಯೂ ಒಂದು. ಚಿಕನ್ ಬಿರಿಯಾನಿಯನ್ನು ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಮಾಡುತ್ತಾರೆ. ಆದರೆ ಹೋಟೆಲ್ ಅಥವಾ ರೆಸ್ಟೋರೆಂಟ್​ಗಳಲ್ಲಿ ಸಿಗುವ ರುಚಿ ಮನೆಯಲ್ಲಿ ಮಾಡಿದಾಗ ಸಿಗಲ್ಲ ಅಂತಾರೆ. ಈ ಬಗ್ಗೆ ಚಿಂತೆ ಬೇಡ. ನಾವು ತಿಳಿಸಿದ ಸಾಮಾಗ್ರಿಗಳನ್ನು ಬಳಸಿ ಬಿರಿಯಾನಿ ಮಾಡಿದರೆ ಸಿಗುವ ರುಚಿ ಯಾವ ರೆಸ್ಟೋರೆಂಟ್​ಗಳಿಗೂ ಕಡಿಮೆ ಇರಲ್ಲ.

ಇಲ್ಲಿ ನಾವು ಹೇಳಲು ಹೊರಟಿರುವುದು ಕೋಲಾರ ಸ್ಟೈಲ್ ಚಿಕನ್ ಧಮ್ ಬಿರಿಯಾನಿ. ಕೋಲಾರ ಸ್ಟೈಲ್ ಚಿಕನ್ ಧಮ್ ಬಿರಿಯಾನಿ ಮಾಡಲು ಬೇಕಾಗಿರುವ ಸಾಮಾಗ್ರಿಗಳು ಹೀಗಿವೆ- ಕೋಳಿ ಮಾಂಸ, ಖಾರದ ಪುಡಿ, ಉಪ್ಪು, ಅರಿಶಿನ ಪುಡಿ, ಮೊಸರು, ಅಕ್ಕಿ, ಹಸಿಮೆಣಸಿನ ಕಾಯಿ, ಕರಿಬೇವು, ಪಲಾವ್ ಎಲೆ, ಏಲಕ್ಕಿ, ಕಸ್ತೂರಿ ಮೇಥಿ, ಚಕ್ಕೆ, ಲವಂಗ, ನಕ್ಷತ್ರ ಮೊಗ್ಗು, ನಿಂಬೆ ಹಣ್ಣು, ಈರುಳ್ಳಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಅಡುಗೆ ಎಣ್ಣೆ, ತುಪ್ಪ, ಟೊಮ್ಯಾಟೋ, ಕೊತ್ತಂಬರಿ ಸೊಪ್ಪು, ಪುದೀನಾ ಸೊಪ್ಪು.

ರುಚಿ ರುಚಿಯಾದ ಚಿಕನ್ ಧಮ್ ಬಿರಿಯಾನಿ ಮಾಡುವ ವಿಧಾನವನ್ನು ವಿಡಿಯೋದಲ್ಲಿ ತಿಳಿಸಲಾಗಿದೆ.

Published on: Aug 30, 2021 09:03 AM