Redmi 12 5G: ಶಓಮಿ ರೆಡ್ಮಿ ಹೊಸ ಫೋನ್ ರಿಲೀಸ್​ಗೆ ರೆಡಿ, ಬಜೆಟ್ ಬೆಲೆಗೆ ಲಭ್ಯ

Updated on: Aug 01, 2023 | 8:30 AM

ಮಾರುಕಟ್ಟೆಯಲ್ಲಿ ಮತ್ತೆ ಅತಿ ಹೆಚ್ಚು ಮಾರಾಟ ದಾಖಲೆಯನ್ನು ಪಡೆದುಕೊಳ್ಳಲು ರೆಡ್ಮಿ ಕಸರತ್ತು ನಡೆಸಿದೆ. ಪ್ರಸ್ತುತ ಭಾರತದ ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿರುವ ಸ್ಯಾಮ್​ಸಂಗ್ ಕಂಪನಿಗೆ ಶಓಮಿ ರೆಡ್ಮಿ ಸ್ಪರ್ಧೆ ಒಡ್ಡಲು ಮುಂದಾಗಿದೆ.

ಚೀನಾ ಮೂಲದ ಪ್ರಸಿದ್ಧ ಶಓಮಿ ಸಂಸ್ಥೆ ತನ್ನ ರೆಡ್ಮಿ ಬ್ರ್ಯಾಂಡ್​ ಮೂಲಕ ಒಂದರ ಹಿಂದೆ ಒಂದರಂತೆ ಆಕರ್ಷಕ ಸ್ಮಾರ್ಟ್​ಫೋನ್​ಗಳನ್ನು ಬಿಡುಗಡೆ ಮಾಡುತ್ತಿದೆ. ಇದೀಗ ಆಗಸ್ಟ್ 1 ರಂದು ಭಾರತದಲ್ಲಿ ಹೊಸ ರೆಡ್ಮಿ 12 ಫೋನ್‌ ಲಾಂಚ್‌ ಮಾಡುವುದಾಗಿ ಹೇಳಿದೆ. ವಿಶೇಷ ಎಂದರೆ ರೆಡ್ಮಿ 12 ಸ್ಮಾರ್ಟ್​ಫೋನಿನ ಬೆಲೆ ₹9,999 ಎನ್ನಲಾಗುತ್ತಿದ್ದು, ಇದು 5G ಬೆಂಬಲ ಪಡೆದುಕೊಂಡಿದೆ. ಇಷ್ಟು ಕಡಿಮೆ ದರಕ್ಕೆ 5G ಸಪೋರ್ಟ್ ಮಾಡುವ ಮೊದಲ ರೆಡ್ಮಿ ಫೋನ್ ಇದಾಗಿದೆ. ಅಲ್ಲದೆ, ಮಾರುಕಟ್ಟೆಯಲ್ಲಿ ಮತ್ತೆ ಅತಿ ಹೆಚ್ಚು ಮಾರಾಟ ದಾಖಲೆಯನ್ನು ಪಡೆದುಕೊಳ್ಳಲು ರೆಡ್ಮಿ ಕಸರತ್ತು ನಡೆಸಿದೆ. ಪ್ರಸ್ತುತ ಭಾರತದ ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿರುವ ಸ್ಯಾಮ್​ಸಂಗ್ ಕಂಪನಿಗೆ ಶಓಮಿ ರೆಡ್ಮಿ ಸ್ಪರ್ಧೆ ಒಡ್ಡಲು ಮುಂದಾಗಿದೆ.

Follow Us
Kiran Kumar IG

ಕಿರಣ್ ಐ.ಜಿ., ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪತ್ರಿಕೋದ್ಯಮದಲ್ಲಿ ಎಂ.ಎ (MCJ) ಮಾಡಿದ್ದೇನೆ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದು, ಟೆಕ್ ಮತ್ತು ಗ್ಯಾಜೆಟ್ ಆಸಕ್ತಿಯ ಕ್ಷೇತ್ರ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್ ತಂಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ.

Read More