ತಾಳಿ ಕಟ್ಟಿದ ಗಂಡನ ಬಿಟ್ಟು, ರೀಲ್ಸ್‌ನಲ್ಲಿ ಪರಿಚಯವಾದ ಪ್ರೇಮಿಯ ಜೊತೆ 6ನೇ ಬಾರಿಗೂ ಪರಾರಿಯಾಗಿರುವ ಮಹಿಳೆ

| Updated By: ಸಾಧು ಶ್ರೀನಾಥ್​

Updated on: Jul 21, 2023 | 7:09 PM

ಈ ರೀಲ್ಸ್‌ಗಳಲ್ಲಿ ಮೈ ಬಳುಕಿಸುವ ಈಕೆ ಬೇರ್ಯಾರು ಅಲ್ಲ ಕುಟುಂಬದ ಸಮ್ಮತಿಯಲ್ಲಿ ಅಗ್ನಿಸಾಕ್ಷಿಯಾಗಿ ಶಾಸ್ತ್ರೋಸ್ತವಾಗಿ ಮದುವೆಯಾಗಿರುವ ಮನೋಹರನ ಹೆಂಡತಿ ಅರ್ಪಿತಾ. ಈಕೆ ತನಗೆ ರೀಲ್ಸ್‌ನಲ್ಲಿ ಪರಿಚಯವಾದ ದಿವಾಕರ್‌ನೊಂದಿಗೆ ಈ ಹಿಂದೆ ಐದು ಬಾರಿ ಪರಾರಿಯಾಗಿದ್ದಳು.

ಕುಂತ್ರೆ ಟಿಕ್ ಟಾಕ್, ನಿಂತ್ರೆ ರೀಲ್ಸ್. ಮೊಬೈಲ್ ಕೈಯಲ್ಲಿತ್ತು ಅಂದ್ರೆ ಪೋಸ್ ಕೊಟ್ಟು ಅಪ್ ಲೋಡ್ ಮಾಡೋದು. ಆ ಸುಂದರಿಗೆ ಇದೇ ಖಯಾಲಿ ಆಗಿತ್ತು. ಮದುವೆ ಆಗಿ ಮಕ್ಕಳಾದ್ರೂ ತನ್ನ ಚಟ ಬಿಟ್ಟಿರಲಿಲ್ಲ. ಅವಳ ಈ ಹುಚ್ಚಾಟಕ್ಕೆ ಪಾಪ ಗಂಡ ಪೊಲೀಸ್ ಠಾಣೆಗೆ ಅಲೆಯುತ್ತಿದ್ದಾನೆ. ಮೋಹಕ ನಗೆಯ ಬೀರುತ್ತಾ ರೀಲ್ಸ್ ಮಾಡ್ತಾ ಇರೋ ಇವಳ ಹೆಸರು ಅರ್ಪಿತಾ, ಈಕೆ‌ ಇನ್ಸ್‌ಟಾಗ್ರಾಮ್‌ನಲ್ಲಿ ತನ್ನದೇ ಫಾಲೋವರ್ಸ್ ಹೊಂದಿದ್ಲು, ಈಕೆ ಮೈ ಬಳುಕಿಸುತ್ತಾ ಒಂದು ರೀಲ್ಸ್ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ರೆ ಸಾಕು ನೂರಾರು ಲೈಕ್ಸ್ ಕಮೆಂಟ್ಸ್, ಸಾವಿರಾರು ವೀವ್ಸ್, ರಿಯಲ್ ಲೈಫ್‌ನಲ್ಲಿ ಒಳ್ಳೆಯ ಗಂಡ ಹಾಗೂ ಇಬ್ಬರು ಮುದ್ದಾದ ಮಕ್ಕಳಿದ್ರು ಈಕೆಗೆ ರೀಲ್ಸ್ ಲೈಫ್ ಕೊಟ್ಟು ಕ್ರೇಜ್ ರಿಯಲ್ ಲೈಫ್ ಕೊಟ್ಟಿಲ್ಲ ಅನ್ಸುತ್ತೆ, ಯಾಕಂದ್ರೆ ಈಕೆಗೆ ಕಟ್ಟಿಕೊಂಡ ಗಂಡನಿಗಿಂತ ರೀಲ್ಸ್‌ನಲ್ಲಿ ಪರಿಚಯವಾದ ದಿವಾಕರ್ ಎನ್ನುವವನೇ ಮುಖ್ಯವಾಗಿ, ಗಂಡನನ್ನ ಬಿಟ್ಟು ಆತನೊಂದಿಗೆ ಪರಾರಿಯಾಗಿದ್ದಾಳೆ.

ಹೌದು ಈಗೆ ನೋವಿನಲ್ಲಿ ತನ್ನ ದುಖಃ ತೋಡ್ಕೊಳ್ತಾ ಇರೋದು ಮನೋಹರ್ ಅಂತಾ, ಈತನ ಸದ್ಯ ಸೋಲದೇವನಹಳ್ಳಿ ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ವಾಸಿಸುತಿದ್ದಾನೆ‌. ಈ ರೀಲ್ಸ್‌ಗಳಲ್ಲಿ ಮೈ ಬಳುಕಿಸುತ್ತಿರುವ ಈಕೆ ಬೇರ್ಯಾರು ಅಲ್ಲ ಕುಟುಂಬದ ಸಮ್ಮತಿಯಲ್ಲಿ ಅಗ್ನಿಸಾಕ್ಷಿಯಾಗಿ ಶಾಸ್ತ್ರೋಸ್ತವಾಗಿ ಮದುವೆಯಾಗಿರುವ ಮನೋಹರನ ಹೆಂಡತಿ ಅರ್ಪಿತಾ. ಈಕೆ ತನಗೆ ರೀಲ್ಸ್‌ನಲ್ಲಿ ಪರಿಚಯವಾದ ದಿವಾಕರ್‌ನೊಂದಿಗೆ ಈ ಹಿಂದೆ ಐದು ಬಾರಿ ಪರಾರಿಯಾಗಿದ್ದಳು. ಈ ಬಗ್ಗೆ ಮಂಡ್ಯ, ಬಾಗಲಗುಂಟೆ,ಸೋಲದೇವನಹಳ್ಳಿ ಠಾಣೆಯಲ್ಲಿ ಸಹ ಪ್ರಕರಣಗಳು ದಾಖಲಾಗಿದ್ದು ಮೊದಲ ಬಾರಿ ಪರಾರಿಯಾಗಿದ್ದಾಗ ಮಂಡ್ಯದಲ್ಲಿ ಇಬ್ಬರೂ ಪತ್ತೆಯಾಗಿದ್ದರು.

ಬಳಿಕ ಎರಡು ಕುಟುಂಬಸ್ಥರು ಮಾತುಕತೆ ನಡೆಸಿ ಒಟ್ಟಿಗೆ ಸೇರಿಸಿದ್ದರಂತೆ ಇದಾದ ಬಳಿಕ ನಾಲ್ಕು ಬಾರಿ ಪರಾರಿಯಾಗಿದ್ದರಂತೆ.‌ ಒಟ್ಟು ಐದು ಬಾರಿ ಪರಾರಿಯಾಗಿದ್ದರೂ ಪಾಪ ಗಂಡ ಆಕೆಯನ್ನ ಕ್ಷಮಿಸಿ ಮತ್ತೆ ಮನೆಗೆ ಸೇರಿಸಿಕೊಂಡಿದ್ದಾನೆ. ಬಾಗಲಗುಂಟೆಯಿಂದ ಕಳೆದ ನಾಲ್ಕು ತಿಂಗಳ ಹಿಂದೆ ಸೋಲದೇವನಹಳ್ಳಿಗೆ ಬಂದಿದ್ದರು, ಈಗಲೂ ಬುದ್ದಿ ಕಲಿಯದ ಆಕೆ ಮತ್ತೆ ಆತನೊಂದಿಗೆ ಪರಾರಿಯಾಗಿದ್ದು, ಈಗ ಪತಿ ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಮೆಟ್ಟಿಲೇರಿದ್ದಾನೆ. ಸದ್ಯ ಘಟನೆಗೆ ಸಂಬಂಧಿಸಿದಂತೆ ಸೋಲದೇವನಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮನೋಹರನ ಹೆಂಡತಿ ಅರ್ಪಿತಾಳ ಪತ್ತೆಗಾಗಿ ಬಲೆ ಬೀಸಿದ್ದಾರೆ.

ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Jul 21, 2023 07:08 PM