ರೇಣುಕಾ ಸ್ವಾಮಿ ಕೊಲೆ ತನಿಖೆ, ಪೊಲೀಸರಿಗೆ ನಾಗರೀಕರ ಮೆಚ್ಚುಗೆ

|

Updated on: Jul 28, 2024 | 1:14 PM

ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಹಾಗೂ ಇನ್ನು ಕೆಲವು ಪ್ರಭಾವಿ ಆರೋಪಿಗಳನ್ನು ಬಂಧಿಸಿದ್ದಾರೆ. ಶಿಸ್ತಿನಿಂದ ಕರ್ತವ್ಯ ನಿರ್ವಹಿಸಿ ನೂರೈವತ್ತಕ್ಕೂ ಹೆಚ್ಚು ಸಾಕ್ಷ್ಯಗಳನ್ನು ಕಲೆ ಹಾಕಿದ್ದಾರೆ. ಇದೀಗ ಸಭೆಯೊಂದರಲ್ಲಿ ನಾಗರೀಕರಿಂದ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಒಟ್ಟು 17 ಆರೋಪಿಗಳನ್ನು ಬಂಧಿಸಲಾಗಿದೆ. ಸ್ಟೂನಿ ಬ್ರೂಕ್ ಮಾಲೀಕ ಸೇರಿದಂತೆ ಕೆಲವು ಪ್ರಭಾವಿ ವ್ಯಕ್ತಿಗಳನ್ನು ಪ್ರಕರಣದಲ್ಲಿ ಬಂಧಿಸಲಾಗಿದೆ. ಈ ಪ್ರಕರಣವನ್ನು ಪೊಲೀಸರು ಈ ವರೆಗೆ ನಿಭಾಯಿಸಿರುವ ರೀತಿಗೆ ತೀವ್ರ ಮೆಚ್ಚುಗೆ ವ್ಯಕ್ತವಾಗಿದೆ. ಆರೋಪಿಗಳ ಪರವಾಗಿ ಹಲವು ಪ್ರಭಾವಿಗಳ ಒತ್ತಡ ಬಂದಿದ್ದರೂ ಸಹ ಯಾವುದಕ್ಕೂ ಬಗ್ಗೆ ಶಿಸ್ತಿನಿಂದ ಹಾಗೂ ನಿಷ್ಠೂರತೆಯಿಂದ ಕೆಲಸ ಮಾಡಿರುವ ಪೊಲೀಸರು ಎಲ್ಲ ಆರೋಪಿಗಳನ್ನು ಬಂಧಿಸಿರುವುದಕ್ಕೆ ನೂರೈವತ್ತಕ್ಕೂ ಹೆಚ್ಚು ಸಾಕ್ಷ್ಯಗಳನ್ನು ಪ್ರಕರಣದಲ್ಲಿ ಕಲೆ ಹಾಕಿದ್ದಾರೆ. ಈ ಬಗ್ಗೆ ನಾಗರೀಕರು ಭೇಷ್ ಎಂದಿದ್ದು, ಇಂದು ಕಸ್ತೂರಿ ನಗರದಲ್ಲಿ ಆಯೋಜಿಸಿದ್ದ ಪೂರ್ವ ವಿಭಾಗದ ಮಾಸಿಕ ಜನಸಂಪರ್ಕ ಸಭೆಯಲ್ಲಿ ನಾಗರೀಕರೊಬ್ಬರು ಪೊಲೀಸರು ಇದೇ ವಿಷಯವಾಗಿ ಭೇಷ್ ಎಂದಿದ್ದಾರೆ. ಬೆಂಗಳೂರು ನಗರ ಕಮಿಷನರ್ ದಯಾನಂದ್, ಪೂರ್ವ ವಿಭಾಗ ಡಿಸಿಪಿ ದೇವರಾಜ್, ಟ್ರಾಫಿಕ್ ಡಿಸಿಪಿ ಕುಲದೀಪ್ ಭಾಗಿಯಾಗಿದ್ದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on