ದರ್ಶನ್ ಕಾರಣಕ್ಕೆ ಅರೆಸ್ಟ್ ಆದ ಅನು ಮನೆ ಎಂಥಾ ದುಸ್ಥಿತಿಯಲ್ಲಿದೆ ನೋಡಿ..
ದರ್ಶನ್ ಜೊತೆ ಫೋಟೋ ತೆಗೆಸಿಕೊಳ್ಳಬೇಕು ಎಂಬ ಆಸೆಯಿಂದ ಚಿತ್ರದುರ್ಗದ ಅನು ಬೆಂಗಳೂರಿಗೆ ಬಂದಿದ್ದ. ಪಟ್ಟಣಗೆರೆ ಶೆಡ್ ಬಳಿ ಹೋಗಿದ್ದ ಆತ ಈಗ ಕೊಲೆ ಪ್ರಕರಣದಲ್ಲಿ ಆರೋಪಿ ಆಗಿದ್ದಾನೆ. ಆತನ ತಂದೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಆತನದ್ದು ತುಂಬ ಬಡ ಕುಟುಂಬ. ಮನೆಯ ಪರಿಸ್ಥಿತಿ ಬಹಳ ಹೀನಾಯವಾಗಿದೆ. ರೇಣುಕಾ ಸ್ವಾಮಿ ಹತ್ಯೆ ಪ್ರಕರಣದಲ್ಲಿ ತನಿಖೆ ತೀವ್ರಗೊಂಡಿದೆ.
ನಟ ದರ್ಶನ್ (Darshan) ಅವರನ್ನು ಆರಾಧಿಸುವ ಅಪಾರ ಸಂಖ್ಯೆಯ ಅಭಿಮಾನಿಗಳು ಇದ್ದಾರೆ. ಅಂಥವರಲ್ಲಿ ಕೆಲವರ ಪರಿಸ್ಥಿತಿ ಈಗ ಹೀನಾಯವಾಗಿದೆ. ದರ್ಶನ್ರನ್ನು ನೋಡಬೇಕು ಎಂದು ಚಿತ್ರದುರ್ಗದಿಂದ ಬೆಂಗಳೂರಿಗೆ ಬಂದಿದ್ದ ಅನು ಅಲಿಯಾಸ್ ಅನುಕುಮಾರ್ (Anukumar) ಈಗ ಪೊಲೀಸರ ಬಲೆಗೆ ಬಿದ್ದಿದ್ದಾನೆ. ದರ್ಶನ್ ಜೊತೆ ಫೋಟೋ ತೆಗೆಸಿಕೊಳ್ಳಬೇಕು ಎಂಬುದು ಅನುಕುಮಾರ್ ಆಸೆ ಆಗಿತ್ತು. ಆ ಕಾರಣಕ್ಕಾಗಿ ಆತ ಚಿತ್ರದುರ್ಗದಿಂದ ಪಟ್ಟಣಗೆರೆ ಶೆಡ್ಗೆ ಬಂದಿದ್ದ. ಅಲ್ಲಿಯೇ ರೇಣುಕಾ ಸ್ವಾಮಿ ಹತ್ಯೆ (Renuka Swamy Murder) ನಡೆಯಿತು. ಈ ಕೇಸ್ನಲ್ಲಿ ಹಲವರು ಆರೋಪಿಗಳಾಗಿ ವಿಚಾರಣೆ ಎದುರಿಸುತ್ತಿದ್ದಾರೆ. ಅವರ ಪೈಕಿ ಅನು ಮನೆಯ ಪರಿಸ್ಥಿತಿ ತೀರಾ ಹೀನಾಯವಾಗಿದೆ. ತುಂಬ ಬಡ ಕುಟುಂಬದ ಯುವಕನಾದ ಅನು ಬಾಳಿನಲ್ಲಿ ಈಗ ಅಂಧಕಾರ ಕವಿದಿದೆ. ಆತ ಅರೆಸ್ಟ್ ಆಗುತ್ತಿದ್ದಂತೆಯೇ ತಂದೆ ಚಂದ್ರಣ್ಣ ಹೃದಯಾಘಾತದಿಂದ ನಿಧನರಾದರು. ಅನು ಮನೆಯಲ್ಲಿ ಈಗ ಶೋಕದ ವಾತಾವರಣ ನಿರ್ಮಾಣ ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Loading...
Unable to load recommendations.
Follow Us