ಕೊಲೆ ಕೇಸ್ ವಿಚಾರಣೆ: ಪವಿತ್ರಾ ಗೌಡ ಮುಖದಲ್ಲಿ ಕಾಣಿಸಿತು ಸಿಕ್ಕಾಪಟ್ಟೆ ಟೆನ್ಷನ್
ನ್ಯಾಯಾಲಯಕ್ಕೆ ಬಂದ ದರ್ಶನ್ ನೋಡಲು ಅನೇಕರು ಮುಗಿಬಿದ್ದರು. ಹೈಪ್ರೊಫೈಲ್ ಕೇಸ್ ಆದ ಕಾರಣ ಹಲವು ವಕೀಲರು ಕೋರ್ಟ್ ಹಾಲ್ನಲ್ಲಿ ಕಿಕ್ಕಿರಿದು ಸೇರಿದ್ದರು. ಹಲಸೂರು ಗೇಟ್ ಠಾಣೆಯ ಪೊಲೀಸರು ಮುಂಜಾಗ್ರತಾ ಕ್ರಮವಾಗಿ ಬಿಗಿ ಭದ್ರತೆ ವಹಿಸಿದ್ದರು. ಪವಿತ್ರಾ ಗೌಡ ಅವರು ಆತಂಕದಲ್ಲೇ ಕೋರ್ಟ್ಗೆ ಬಂದರು.
ನಟ ದರ್ಶನ್ ಗೆಳತಿ ಪವಿತ್ರಾ ಗೌಡ ಅವರು ರೇಣುಕಾಸ್ವಾಮಿ ಕೊಲೆ ಪ್ರಕರಣದ (Renukaswamy Case) ಎ1 ಆಗಿದ್ದಾರೆ. ಇಂದು (ನ.3) ಬೆಂಗಳೂರಿನ 64ನೇ ಸಿಸಿಹೆಚ್ ನ್ಯಾಯಾಲಯದಲ್ಲಿ ದೋಷಾರೋಪಣೆ ನಿಗದಿ ಪ್ರಕ್ರಿಯೆ ನಡೆದಿದೆ. ಈ ವೇಳೆ ಎಲ್ಲ 17 ಆರೋಪಿಗಳು ನ್ಯಾಯಾಲಯಕ್ಕೆ ಹಾಜರಾದರು. ನ್ಯಾಯಾಲಯಕ್ಕೆ ಬರುವಾಗ ಪವಿತ್ರಾ ಗೌಡ (Pavithra Gowda) ಅವರು ತುಂಬ ಆತಂಕದಲ್ಲಿ ಇದ್ದರು. ಅವರ ಮುಖದಲ್ಲಿ ಟೆನ್ಷನ್ ಕಾಣಿಸಿತು. ದರ್ಶನ್ ಸೇರಿದಂತೆ ಎಲ್ಲ ಆರೋಪಿಗಳು ತಮ್ಮ ಮೇಲಿನ ದೋಷಾರೋಪಗಳನ್ನು ನಿರಾಕರಿಸಿದ್ದಾರೆ. ನವೆಂಬರ್ 10ರಂದು ಸಾಕ್ಷಿಗಳ ವಿಚಾರಣೆಗೆ ದಿನಾಂಕ ನಿಗದಿ ಆಗಲಿದೆ. ನ್ಯಾಯಾಲಯಕ್ಕೆ ಬಂದ ದರ್ಶನ್ (Darshan) ಅವರನ್ನು ನೋಡಲು ಸಾಕಷ್ಟು ಜನರು ಮುಗಿಬಿದ್ದರು. ಇದು ಹೈಪ್ರೊಫೈಲ್ ಕೇಸ್ ಆದ್ದರಿಂದ ಅನೇಕ ವಕೀಲರು ಕೂಡ ಕೋರ್ಟ್ ಹಾಲ್ನಲ್ಲಿ ಕಿಕ್ಕಿರಿದಿದ್ದರು. ಮುಂಜಾಗ್ರತಾ ಕ್ರಮವಾಗಿ ಹಲಸೂರು ಗೇಟ್ ಠಾಣೆಯ ಪೊಲೀಸರು ಬಿಗಿ ಭದ್ರತೆ ಒದಗಿಸಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
