‘ಸೊಸೆಗೆ ಸರ್ಕಾರ ಖಾಯಂ ನೌಕರಿ ನೀಡಲಿ’: ರೇಣುಕಾಸ್ವಾಮಿ ತಂದೆ ಮನವಿ

Updated on: Dec 06, 2024 | 9:14 PM

ಡಿ ಗ್ಯಾಂಗ್​ನಿಂದ ಹತ್ಯೆಗೆ ಒಳಗಾದ ಚಿತ್ರದುರ್ಗದ ರೇಣುಕಾಸ್ವಾಮಿ ಮನೆಯಲ್ಲಿ ರಂಭಾಪುರಿಶ್ರೀ ಪೂಜೆ ನೆರವೇರಿಸಿದ್ದಾರೆ. ಆತ್ಮ ಶಾಂತಿ, ವಾಸ್ತು ಶಾಂತಿಗಾಗಿ ಪೂಜೆ ಮಾಡಲಾಗಿದೆ. ಈ ಬಗ್ಗೆ ರೇಣುಕಾಸ್ವಾಮಿ ತಂದೆ ಕಾಶೀನಾಥಯ್ಯ ಅವರು ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ. ‘ಶ್ರೀಗಳ ಆಶೀರ್ವಾದದಿಂದ ಒಳಿತಾಗುವ ನಂಬಿಕೆಯಿದೆ. ಸೊಸೆಗೆ ಸರ್ಕಾರದಿಂದ ಖಾಯಂ ನೌಕರಿ ನೀಡಲಿ’ ಎಂದು ಕಾಶೀನಾಥಯ್ಯ ಮನವಿ ಮಾಡಿದ್ದಾರೆ.

ಚಿತ್ರದುರ್ಗದ ರೇಣಕಾಸ್ವಾಮಿ ಮನೆಯಲ್ಲಿ ರಂಭಾಪುರಿಶ್ರೀ ಪೂಜೆ ನೆರವೇರಿಸಿದ್ದಾರೆ. ಆತ್ಮಶಾಂತಿ, ವಾಸ್ತುಶಾಂತಿಗಾಗಿ ಪೂಜೆ ಮಾಡಲಾಗಿದೆ. ಈ ಬಗ್ಗೆ ರೇಣುಕಾಸ್ವಾಮಿ ಅವರ ತಂದೆ ಕಾಶೀನಾಥಯ್ಯ ಅವರು ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ. ‘ಈ ವೇಳೆ ಸೊಸೆ ಮತ್ತು‌ ಮೊಮ್ಮಗ ಮನೆಯಲ್ಲಿ ಇರಬೇಕಿತ್ತು. ಅವರು ತವರೂರಲ್ಲಿದ್ದಾರೆ. ರಂಭಾಪುರಿಶ್ರೀಗಳು ಮೊನ್ನೆಯೇ ಬಂದು ವಾಸ್ತವ್ಯವಿದ್ದು ಬೆಳಗ್ಗೆ ಪೂಜೆ ಮಾಡಿದ್ದಾರೆ. ಶ್ರೀಗಳ ಪೂಜೆ, ಆಶೀರ್ವಾದದಿಂದ ಒಳಿತಾಗುವ ನಂಬಿಕೆಯಿದೆ. ಸೊಸೆಗೆ ಸರ್ಕಾರದಿಂದ ಖಾಯಂ ನೌಕರಿ ನೀಡಲಿ’ ಎಂದು ಕಾಶೀನಾಥಯ್ಯ ಮನವಿ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More