Video: ರೇಣುಕಾಸ್ವಾಮಿ ಕೊಲೆ : ದರ್ಶನ್, ಪವಿತ್ರಾ ಬೇಲ್ ರದ್ದು ಮತ್ತೆ ಜೈಲು ಪಾಲು, ಸರ್ಕಾರಿ ವಕೀಲರು ಹೇಳಿದ್ದೇನು?
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿ ದರ್ಶನ್, ಪವಿತ್ರಾ ಗೌಡ ಸೇರಿ 7 ಆರೋಪಿಗಳ ಜಾಮೀನನ್ನು ಸುಪ್ರೀಂಕೋರ್ಟ್ ರದ್ದುಪಡಿಸಿದೆ. ಆ ಕುರಿತು ಸರ್ಕಾರಿ ವಕೀಲರು ಏನು ಹೇಳಿದ್ದಾರೆ ಕೇಳೋಣ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿ ದರ್ಶನ್ ಮತ್ತು ಸಹಚರರಿಗೆ ಹೈಕೋರ್ಟ್ ನೀಡಿದ್ದ ಜಾಮೀನು ಪ್ರಶ್ನಿಸಿ ಸರ್ಕಾರ ಸಲ್ಲಿಸಿದ್ದ ಮೇಲ್ಮವಿಯನ್ನು ಒಪ್ಪಿ ಸುಪ್ರೀಂಕೋರ್ಟ್ ಜಾಮೀನು ರದ್ದುಗೊಳಿಸಿದೆ ಎಂದು ಸರ್ಕಾರಿ ವಕೀಲರು ಹೇಳಿದ್ದಾರೆ.
ಬೆಂಗಳೂರು, ಆಗಸ್ಟ್ 14: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿ ದರ್ಶನ್, ಪವಿತ್ರಾ ಗೌಡ ಸೇರಿ 7 ಆರೋಪಿಗಳ ಜಾಮೀನನ್ನು ಸುಪ್ರೀಂಕೋರ್ಟ್ ರದ್ದುಪಡಿಸಿದೆ. ಆ ಕುರಿತು ಸರ್ಕಾರಿ ವಕೀಲರು ಏನು ಹೇಳಿದ್ದಾರೆ ಕೇಳೋಣ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿ ದರ್ಶನ್ ಮತ್ತು ಸಹಚರರಿಗೆ ಹೈಕೋರ್ಟ್ ನೀಡಿದ್ದ ಜಾಮೀನು ಪ್ರಶ್ನಿಸಿ ಸರ್ಕಾರ ಸಲ್ಲಿಸಿದ್ದ ಮೇಲ್ಮವಿಯನ್ನು ಒಪ್ಪಿ ಸುಪ್ರೀಂಕೋರ್ಟ್ ಜಾಮೀನು ರದ್ದುಗೊಳಿಸಿದೆ ಎಂದು ಸರ್ಕಾರಿ ವಕೀಲರು ಹೇಳಿದ್ದಾರೆ.
ಹಿರಿಯ ವಕೀಲ ಸಿದ್ಧಾರ್ಥ್ ಲೂತ್ರಾ, ವಕೀಲರಾದ ಅನಿಲ್ ಸಿ. ನಿಶಾನಿ ಮತ್ತು ಡಿ.ಎಲ್. ಚಿದಾನಂದ ಅವರ ಮೂಲಕ ರಾಜ್ಯ ಸರ್ಕಾರ ಸಲ್ಲಿಸಿದ್ದ ವಿಶೇಷ ಮೇಲ್ಮನವಿ ಅರ್ಜಿಯ ತೀರ್ಪನ್ನು ನ್ಯಾಯಾಲಯ ಜುಲೈ 24ರಂದು ಕಾಯ್ದಿರಿಸಿತ್ತು.
ವಕೀಲ ಸಿದ್ದಾರ್ಥ್ ಲೂತ್ರ ಹಾಗೂ ಅಡ್ವೊಕೇಟ್ ಜನರಲ್ ಶಶಿ ಕಿರಣ್ ಶೆಟ್ಟಿ ಅವರ ಮಾರ್ಗದರ್ಶನದಲ್ಲಿ ಈ ಪ್ರಕರಣದಲ್ಲಿ ನಾವು ತನಿಖೆಯ ಸಮಯದಲ್ಲಿ ಕಲೆಹಾಕಿದಂತಹ ಎಲ್ಲಾ ಸಾಕ್ಷ್ಯಾಧಾರಗಳನ್ನು ದಾಖಲೆ ಸಹಿತ ನ್ಯಾಯಾಲಯದ ಮುಂದೆ ಇಟ್ಟು ನಮ್ಮ ವಾದವನ್ನು ಮಂಡಿಸಿದ್ವಿ. ನಮ್ಮ ವಾದವನ್ನು ಒಪ್ಪಿ ಇಂದು ಸುಪ್ರೀಂಕೋರ್ಟ್ ದರ್ಶನ್ ಮತ್ತು ಸಹಚರರಿಗೆ ನೀಡಿದ ಜಾಮೀನನ್ನು ರದ್ದುಗೊಳಿಸಿದೆ. ಇದೊಂದು ಮಹತ್ವವಾದ ನಿರ್ಣಯ.
ಕೊಲೆಯಂತ ಘೋರ ಅಪರಾಧ ಎಸಗಿದಂತಹ ಅಪರಾಧಿಗಳ ಜಾಮೀನು ಅರ್ಜಿ ಪರಿಶೀಲಿಸುವ ಸಮಯದಲ್ಲಿ ನ್ಯಾಯಾಲಯ ಯಾವ ಅಂಶಗಳನ್ನು ಗಮನಿಸಬೇಕು ಹಾಗೂ ಯಾವ ಕಾನೂನು ತತ್ವಗಳನ್ನು ಪಾಲಿಸಬೇಕು ಅನ್ನುವ ವಿಚಾರವನ್ನು ಈ ತೀರ್ಪಿನಲ್ಲಿ ಪುನರುಚ್ಚರಿಸಿದ್ದಾರೆ ಎಂದು ಹೇಳಿದ್ದಾರೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
