ಮನೆ ಸಮೀಪ ಕಾಣಿಸಿಕೊಂಡ ಬೃಹತ್ ಕಾಳಿಂಗ ಸರ್ಪ ರಕ್ಷಣೆ; ಇಲ್ಲಿದೆ ವಿಡಿಯೋ

| Updated By: ಕಿರಣ್ ಹನುಮಂತ್​ ಮಾದಾರ್

Updated on: Nov 02, 2023 | 3:12 PM

ಅಂಕೋಲಾ(Ankola)ದ ಕೃಷ್ಣಾಪುರದಲ್ಲಿ ಪ್ರಶಾಂತ್​ ನಾಯ್ಕ ಎಂಬುವವರ ಮನೆಯ ಸಮೀಪ ಬೃಹತ್ ಕಾಳಿಂಗ ಸರ್ಪ(King Cobra)ವೊಂದು ಕಾಣಿಸಿಕೊಂಡಿದೆ. ಕೂಡಲೇ ಸ್ಥಳೀಯ ಉರಗ ತಜ್ಞ ಮಹೇಶ್​ ನಾಯ್ಕ ಎಂಬುವವರನ್ನು ಕರೆಯಿಸಿ ರಕ್ಷಣೆ (Rescue) ಮಾಡಿದ್ದಾರೆ.

ಉತ್ತರ ಕನ್ನಡ, ನ.02: ಜಿಲ್ಲೆಯ ಅಂಕೋಲಾ(Ankola)ದ ಕೃಷ್ಣಾಪುರದಲ್ಲಿ ಪ್ರಶಾಂತ್​ ನಾಯ್ಕ ಎಂಬುವವರ ಮನೆಯ ಸಮೀಪ ಬೃಹತ್ ಕಾಳಿಂಗ ಸರ್ಪ(King Cobra)ವೊಂದು ಕಾಣಿಸಿಕೊಂಡಿದೆ. ಕೂಡಲೇ ಸ್ಥಳೀಯ ಉರಗ ತಜ್ಞ ಮಹೇಶ್​ ನಾಯ್ಕ ಎಂಬುವವರನ್ನು ಕರೆಯಿಸಿ ರಕ್ಷಣೆ (Rescue) ಮಾಡಿದ್ದಾರೆ. ಈ ಕಾಳಿಂಗ ಸರ್ಪವು ಬರೊಬ್ಬರಿ 13 ಅಡಿ ಉದ್ದವಾಗಿದೆ. ಇನ್ನು ಇದನ್ನು ರಕ್ಷಿಸಿ ಅರಣ್ಯಕ್ಕೆ ತೆಗೆದುಕೊಂಡು ಬಿಡಲಾಗಿದೆ.

ಇನ್ನು ಇತ್ತೀಚೆಗಷ್ಟೇ  ಜಿಲ್ಲೆಯ ಕಾರವಾರದ ಮನೆಯೊಂದರಲ್ಲಿ ಅಪರೂಪದ ತೋಳ ಹಾವು ಪತ್ತೆಯಾಗಿತ್ತು. ಕೂಡಲೇ ಗಾಬರಿಗೊಂಡ ಮನೆಯವರು ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಿದ್ದರು. ಈ ವೇಳೆ ಸ್ಥಳಕ್ಕೆ ಧಾವಿಸಿದ ಸಿಬ್ಬಂದಿಗಳು ಎಚ್ಚರಿಕೆಯಿಂದ ಹಾವನ್ನು ಡಬ್ಬವೊಂದರಲ್ಲಿ ಸೆರೆ ಹಿಡಿದು ರಕ್ಷಿಸಿದ್ದಾರೆ.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ