ಉಡುಪಿ ಶ್ರೀಕೃಷ್ಣ ಮಠದ ಬಳಿ ಬಾವಿಗೆ ಬಿದ್ದ ಪ್ರವಾಸಿಗ
ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಲೆಂದು ಆಗಮಿಸಿದ್ದ ಪ್ರವಾಸಿಗನೊಬ್ಬ ಆಯತಪ್ಪಿ ಬಾವಿಗೆ ಬಿದ್ದ ಘಟನೆ ನಡೆದಿದೆ. ನೀರು ಕಡಿಮೆ ಇದ್ದಿದ್ದರಿಂದ ಪ್ರವಾಸಿಗ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಕೂಡಲೇ ಸ್ಥಳೀಯರು ಪ್ರವಾಸಿಗನನ್ನು ರಕ್ಷಿಸಿದ್ದಾರೆ.
ಉಡುಪಿ, ಜ.13: ಶ್ರೀಕೃಷ್ಣ ಮಠಕ್ಕೆ (Udupi Krishna Math) ಭೇಟಿ ನೀಡಲೆಂದು ಆಗಮಿಸಿದ್ದ ಪ್ರವಾಸಿಗನೊಬ್ಬ ಆಯತಪ್ಪಿ ಬಾವಿಗೆ ಬಿದ್ದ ಘಟನೆ ನಡೆದಿದೆ. ಬಾಗಲಕೋಟೆ ಮೂಲದ ಸಂತೋಷ್ ಎಂಬಾತ ಮಠದ ಸಮೀಪದ ಶಿರಬೀಡು ಬಳಿ ಇರುವ ಬಾವಿ ಮೇಲೆ ಕುಳಿತುಕೊಂಡಿದ್ದಾಗ ಆಯತಪ್ಪಿ ಬಾವಿಯೊಳಗೆ ಬಿದ್ದಿದ್ದಾನೆ. ನೀರು ಕಡಿಮೆ ಇದ್ದಿದ್ದರಿಂದ ಸಂತೋಷ್ ಪ್ರಾಣಾಪಾಯದಿಂದ ಪಾರಾಗಿದ್ದು, ಸಮಾಜಿಕ ಕಾರ್ಯಕರ್ತ ನಿತ್ಯಾನಂದ ಒಳಕಾಡು ಮತ್ತು ಸ್ಥಳೀಯರು ಹಗ್ಗದ ಸಯಾದಿಂದ ಸಂತೋಷ್ನನ್ನು ಮೇಲಕ್ಕೆತ್ತಿದ್ದಾರೆ.
ಮತ್ತಷ್ಟು ವಿಡಿಯೋ ಸ್ಟೋರಿ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ
Latest Videos