ಮುಸ್ಲಿಂಮರಿಗೆ ಸಿಗುತ್ತಿರುವ ಮೀಸಲಾತಿಯನ್ನು ರದ್ದುಮಾಡಿ ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ನೀಡಬೇಕು: ಅರವಿಂದ್ ಬೆಲ್ಲದ್
ಹಿಂದಿನ ಕಾಂಗ್ರೆಸ್ ಸರ್ಕಾರ ಧರ್ಮಾಧಾರಿತ ಮೀಸಲಾತಿಯನ್ನು ಜಾರಿಗೆ ತಂದ ಕಾರಣ ಮುಸಲ್ಮಾನರು 2ಎ ಮತ್ತು 2ಬಿ-ಎರಡೂ ಕೆಟೆಗಿರಿಗಳಲ್ಲಿ ಮೀಸಲಾತಿ ಪಡೆಯುತ್ತಿದ್ದಾರೆ ಎಂದು ಶಾಸಕ ಹೇಳಿದರು
ಹುಬ್ಬಳ್ಳಿ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಮೀಸಲಾತಿಯನ್ನು ಹೆಚ್ಚಿಸಿದ ಬಸವರಾಜ ಬೊಮ್ಮಾಯಿ (Basavaraj Bommai) ಸರ್ಕಾರದ ಕ್ರಮವನ್ನು ಬಿಜೆಪಿ ಶಾಸಕ ಅರವಿಂದ್ ಬೆಲ್ಲದ್ (Arvind Bellad) ಸ್ವಾಗತಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಟಿವಿ9 ಕನ್ನಡ ವಾಹಿನಿಯ ವರದಿಗಾರನ ಜೊತೆ ಮಾತಡಿದ ಶಾಸಕರು ಹಿಂದಿನ ಕಾಂಗ್ರೆಸ್ ಸರ್ಕಾರ ಧರ್ಮಾಧಾರಿತ (religion-based) ಮೀಸಲಾತಿಯನ್ನು ಜಾರಿಗೆ ತಂದ ಕಾರಣ ಮುಸಲ್ಮಾನರು 2ಎ ಮತ್ತು 2ಬಿ-ಎರಡೂ ಕೆಟೆಗಿರಿಗಳಲ್ಲಿ ಮೀಸಲಾತಿ ಪಡೆಯುತ್ತಿದ್ದಾರೆ. ಅದನ್ನು ರದ್ದು ಮಾಡಿ ಬಹಳ ದಿನಗಳಿಂದ ಮೀಸಲಾತಿಗಾಗಿ ಆಗ್ರಹಿಸಿತ್ತಿರುವ ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ನೀಡಬೇಕೆಂದು ಅರವಿಂದ್ ಬೆಲ್ಲದ್ ಹೇಳಿದರು.