ಗದಗ: ಗೋದಾಮಿನಲ್ಲಿ ಲಕ್ಷಾಂತರ ಮೌಲ್ಯದ ಅಕ್ಕಿ, ಗೋಧಿ ಹುಳುಗಳ ಪಾಲು, ನಿರ್ಲಕ್ಷ್ಯಕ್ಕೆ ಗ್ರಾಮಸ್ಥರ ಆಕ್ರೋಶ

| Updated By: ಆಯೇಷಾ ಬಾನು

Updated on: Jun 20, 2024 | 9:06 AM

ಗದಗ ಜಿಲ್ಲೆ ಮುಂಡರಗಿ ಹೊರವಲಯದಲ್ಲಿನ ಗೋದಾಮಿನಲ್ಲಿ ನಡೆದಿದೆ. ಗರ್ಭಿಣಿಯರು, ಮಕ್ಕಳಿಗೆ ನೀಡಬೇಕಿದ್ದ ನೂರಾರು ಕ್ವಿಂಟಾಲ್​ ಅಕ್ಕಿ, ಗೋಧಿ, ಪೌಷ್ಟಿಕ ಆಹಾರ ನಾಶವಾಗಿದೆ. ಲಕ್ಷಾಂತರ ಮೌಲ್ಯದ ಅಕ್ಕಿ, ಗೋಧಿ ಹಾಳಾಗಿದ್ದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಕ್ಷಣ MSPC ರದ್ದು ಮಾಡಬೇಕು. ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ವಿರುದ್ಧ ಕ್ರಮ ಆಗಬೇಕು ಅಂತ ಒತ್ತಾಯಿಸಿದ್ದಾರೆ.

ಗದಗ, ಜೂನ್.20: ಗೋದಾಮಿನಲ್ಲಿ ಲಕ್ಷಾಂತರ ಮೌಲ್ಯದ ಅಕ್ಕಿ, ಗೋಧಿ ಹುಳುಗಳ ಪಾಲಾದ ಘಟನೆ ಗದಗ (Gadag) ಜಿಲ್ಲೆ ಮುಂಡರಗಿ ಹೊರವಲಯದಲ್ಲಿನ ಗೋದಾಮಿನಲ್ಲಿ ನಡೆದಿದೆ. ಗರ್ಭಿಣಿಯರು, ಮಕ್ಕಳಿಗೆ ನೀಡಬೇಕಿದ್ದ ನೂರಾರು ಕ್ವಿಂಟಾಲ್​ ಅಕ್ಕಿ, ಗೋಧಿ, ಪೌಷ್ಟಿಕ ಆಹಾರ ನಾಶವಾಗಿದೆ.

ಎಂಎಸ್​ಪಿಸಿಗೆ ಸೇರಿದ ನೂರಾರು ಕ್ವಿಂಟಲ್ ಅಕ್ಕಿ, ಗೋಧಿ ಕೊಳೆಯುವ ಹಂತ ತಲುಪಿದೆ. ಗರ್ಭಿಣಿಯರು, ಮಕ್ಕಳ ಹೊಟ್ಟೆ ಸೇರಬೇಕಾದ ಪೌಷ್ಠಿಕ ಆಹಾರ ಹುಳುಗಳಿಗೆ ಆಹಾರವಾಗಿದೆ. ಎಂಎಸ್‌ಪಿಸಿ ಸಂಸ್ಥೆ ಮೂಲಕ ಮುಂಡರಗಿ, ಶಿರಹಟ್ಟಿ ತಾಲೂಕಿನ ಅಂಗನವಾಡಿ ಕೇಂದ್ರಕ್ಕೆ ಸರಬರಾಜು ಮಾಡಬೇಕಿದ್ದ ಆಹಾರ ಪದಾರ್ಥ ವ್ಯರ್ಥವಾಗಿದೆ. FCI ದಿಂದ ರಿಯಾಯ್ತಿ ದರದಲ್ಲಿ ಅಕ್ಕಿ ಹಾಗೂ ಗೋಧಿಯನ್ನು ಖರೀದಿ ಮಾಡಲಾಗಿತ್ತು. ಆದರೆ ಅದನ್ನು ಈಗ ಹುಳುಗಳು ತಿಂದು ತೇಗಿವೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಲಕ್ಷಾಂತರ ರೂಪಾಯಿ ಮೌಲ್ಯದ 50 ಟನ್ ಕ್ಕೂ ಅಧಿಕ ಅಕ್ಕಿ ಹಾಗೂ ಗೋಧಿ ನಾಶವಾಗಿದೆ. ಅಕ್ಕಿ ಸಂಗ್ರಹಿಸಿದ ಗೋದಾಮಿನಲ್ಲಿ ಟಿವಿ9 ರಿಯಾಲಿಟಿ ಚೆಕ್ ನಡೆಸಿದ್ದು ಹುಳು‌ ತುಂಬಿ ಅಕ್ಕಿ, ಗೋಧಿ ಉಪಯೋಗಕ್ಕೆ ಬಾರದಂತಾಗಿದೆ.

ಈ ಬಗ್ಗೆ ಟಿವಿ9 ಪ್ರಶ್ನೆಗಳಿಗೆ ಎಂಎಸ್​ಪಿಸಿ ಅಧ್ಯಕ್ಷೆ ತಡಬಡಾಯಿಸಿ ಮಾಹಿತಿ ನೀಡಿದ್ದಾರೆ. ವರ್ಷದ ಹಿಂದೆ ಸರಿಯಾಗಿದ್ವು ಈಗ ಹಾಳಾಗಿದೆ ಅಂತಾ ಹಾರಿಕೆ ಉತ್ತರ ನೀಡಿದ್ದಾರೆ. ಲಕ್ಷಾಂತರ ಮೌಲ್ಯದ ಅಕ್ಕಿ, ಗೋಧಿ ಹಾಳಾದ್ರೂ‌ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ಸೌಜನ್ಯಕ್ಕೂ ಗೋದಾಮಿಗೆ ಭೇಟಿ ನೀಡಿ ಅಧಿಕಾರಿಗಳು ಪರಿಶೀಲನೆ ಮಾಡಿಲ್ಲ. ಲಕ್ಷಾಂತರ ಮೌಲ್ಯದ ಅಕ್ಕಿ, ಗೋಧಿ ಹಾಳಾಗಿದ್ದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಕ್ಷಣ MSPC ರದ್ದು ಮಾಡಬೇಕು. ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ವಿರುದ್ಧ ಕ್ರಮ ಆಗಬೇಕು ಅಂತ ಒತ್ತಾಯಿಸಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇದರ ಮೇಲೆ ಕ್ಲಿಕ್ ಮಾಡಿ

Published on: Jun 20, 2024 09:01 AM