ಗಿಲ್ಲಿ ಮೇಲೆ ಹಲ್ಲೆ ಮಾಡಿದ ರಿಷಾಗೆ ಸಿಗುತ್ತಾ ಗೇಟ್ಪಾಸ್?
‘ಬಿಗ್ ಬಾಸ್ ಕನ್ನಡ ಸೀಸನ್ 12’ರಲ್ಲಿ ಗಿಲ್ಲಿ ನಟ ಅವರು ಸಾಕಷ್ಟು ಕಾನ್ಫಿಡೆನ್ಸ್ನಿಂದ ಆಡುತ್ತಿದ್ದಾರೆ. ಆದರೆ, ಕೆಲವರಿಗೆ ಇದನ್ನು ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದರಲ್ಲಿ ಪ್ರಮುಖವಾಗಿ ಇರುವವರು ರಿಷಾ. ಈಗ ರಿಷಾ ಅವರಿಗೆ ಗೇಟ್ಪಾಸ್ ಸಿಗುತ್ತದೆಯೇ ಎಂಬ ಪ್ರಶ್ನೆ ಮೂಡಿದೆ. ಆ ಬಗ್ಗೆ ಇಲ್ಲಿದೆ ವಿವರ.
ಈ ವಾರದ ಆರಂಭದಲ್ಲಿ ಗಿಲ್ಲಿ ಮೇಲೆ ರಿಷಾ ಗೌಡ ಅವರು ಹಲ್ಲೆ ಮಾಡಿದ್ದರು. ಸಾಮಾನ್ಯವಾಗಿ ಹಲ್ಲೆ ಮಾಡಿದ ತಕ್ಷಣ ಅವರನ್ನು ಮನೆಯಿಂದ ಕಳುಹಿಸಲಾಗುತ್ತದೆ. ಆದರೆ, ಹಲ್ಲೆ ನಡೆದ ದಿನ ಅವರನ್ನು ಮನೆಯಿಂದ ಕಳುಹಿಸಿರಲಿಲ್ಲ. ಇಂದು ಕಿಚ್ಚನ ಪಂಚಾಯ್ತಿಯಲ್ಲಿ ಅವರು ದೊಡ್ಮನೆಯಿಂದ ಹೊರಕ್ಕೆ ಹೊಗುತ್ತಾರಾ ಎನ್ನುವ ಪ್ರಶ್ನೆ ಮೂಡಿದೆ. ಇಂದಿನ ಎಪಿಸೋಡ್ನಲ್ಲಿ ಆ ವಿಚಾರ ಗೊತ್ತಾಗಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

