ರಿಷಬ್ ಶೆಟ್ಟಿ ಲುಂಗಿ ಕಟ್ಟೋದು ನೋಡಿ ಅಮಿತಾಭ್ ಶಾಕ್; ಇದನ್ನು ಕಲಿಯಬೇಕು ಎಂದ ಬಿಗ್ ಬಿ
Rishab Shetty: ರಿಷಬ್ ಶೆಟ್ಟಿ ಅವರು ‘ಕಾಂತಾರ: ಚಾಪ್ಟರ್ 1’ ಚಿತ್ರದ ಮೂಲಕ ದೊಡ್ಡ ಗೆಲುವು ಕಂಡಿದ್ದಾರೆ. ಈ ಸಿನಿಮಾ ಗೆಲುವಿನ ಕಾರಣಕ್ಕೆ ಅವರು ‘ಕೌನ್ ಬನೇಗಾ ಕರೋಡ್ಪತಿ’ ಶೋನ ಭಾಗ ಆಗಿದ್ದಾರೆ. ಈ ವಿಚಾರದ ಬಗ್ಗೆ ಅವರಿಗೆ ಖುಷಿ ಇದೆ.
‘ಕಾಂತಾರ’ ರಿಷಬ್ ಶೆಟ್ಟಿಯನ್ನು ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಾಡಿತು. ಈಗ ‘ಕಾಂತಾರ: ಚಾಪ್ಟರ್ 1’ ಚಿತ್ರ ಅವರನ್ನು ಮತ್ತೊಂದು ಹಂತಕ್ಕೆ ಕರೆದುಕೊಂಡು ಹೋಗಿದೆ. ಅವರು ಹಿಂದಿಯ ‘ಕೌನ್ ಬನೇಗಾ ಕರೋಡ್ಪತಿ’ ಶೋನ ಭಾಗ ಆಗಿದ್ದಾರೆ. ಈ ವೇಳೆ ರಿಷಬ್ ಲುಂಗಿ ಕಟ್ಟೋದು ನೋಡಿ ಅಮಿತಾಭ್ ಬಚ್ಚನ್ ಶಾಕ್ ಆಗಿದ್ದಾರೆ. ಅದೊಂದು ಕಲೆ ಎಂದು ಹೊಗಳಿದ್ದಾರೆ. ರಿಷಬ್ ಅವರು ಅಮಿತಾಭ್ ಬಚ್ಚನ್ಗೆ ವಿಶೇಷ ಉಡುಗೊರೆಯನ್ನು ಕೂಡ ನೀಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.