‘ಬೆಂಗಳೂರು ಸಿನಿಮೋತ್ಸವಕ್ಕೆ ಈಗ ಪೆದ್ರೊ ಚಿತ್ರ ತಗೊಳ್ಳೋದು ಬೇಡ’: ರಿಷಬ್ ಶೆಟ್ಟಿ ಖಡಕ್ ನಿರ್ಧಾರ
‘ಪೆದ್ರೊ’ ಚಿತ್ರದ ನಿರ್ಮಾಪಕ ರಿಷಬ್ ಶೆಟ್ಟಿ ಈ ರೀತಿ ಹೇಳಿದ್ದಕ್ಕೆ ಕಾರಣ ಇದೆ. ಅದೇನು ಎಂಬುದನ್ನು ಅವರು ಈ ವಿಡಿಯೋದಲ್ಲಿ ವಿವರಿಸಿದ್ದಾರೆ.
ಕನ್ನಡದ ‘ಪೆದ್ರೊ’ ಸಿನಿಮಾ (Pedro Movie) ಬೇರೆ ಬೇರೆ ದೇಶಗಳ ಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡು ಮೆಚ್ಚುಗೆ ಗಳಿಸಿದೆ. ಆದರೆ 13ನೇ ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವಕ್ಕೆ ಈ ಚಿತ್ರ ಆಯ್ಕೆ ಆಗಲಿಲ್ಲ. ಇದು ಅನೇಕ ಸಿನಿಪ್ರಿಯರಿಗೆ ಬೇಸರ ಮೂಡಿಸಿತು. ಈ ಬಗ್ಗೆ ನಿರ್ಮಾಪಕ ರಿಷಬ್ ಶೆಟ್ಟಿ, ನಿರ್ದೇಶಕ ನಟೇಶ್ ಹೆಗಡೆ (Natesh Hegde) ಹಾಗೂ ನಟ ರಾಜ್ ಬಿ. ಶೆಟ್ಟಿ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಟಿವಿ9 ನಡೆಸಿದ ಸಂದರ್ಶನದಲ್ಲಿ ಅವರು ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ‘ಪೆದ್ರೊ’ ಚಿತ್ರವನ್ನು ಬೆಂಗಳೂರು ಸಿನಿಮೋತ್ಸವಕ್ಕೆ ಆಯ್ಕೆ ಮಾಡದೇ ಇರುವುದಕ್ಕೆ ಅನೇಕ ಸೆಲೆಬ್ರಿಟಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಒಂದು ವೇಳೆ ಈಗ ಈ ಚಿತ್ರವನ್ನು ಸಿನಿಮೋತ್ಸವಕ್ಕೆ ತೆಗೆದುಕೊಳ್ಳವ ಸಾಧ್ಯತೆ ಬಗ್ಗೆ ಕೆಲವರು ಫೋನ್ ಮಾಡಿ ರಿಷಬ್ ಶೆಟ್ಟಿ ಜೊತೆ ಮಾತನಾಡಿದ್ದುಂಟು. ಆದರೆ ಆ ವಿಚಾರದಲ್ಲಿ ರಿಷಬ್ ಶೆಟ್ಟಿ (Rishab Shetty) ಖಡಕ್ ನಿರ್ಧಾರ ತೆಗೆದುಕೊಂಡಿದ್ದಾರೆ. ‘ಬೆಂಗಳೂರು ಸಿನಿಮೋತ್ಸವಕ್ಕೆ ಈಗ ಪೆದ್ರೊ ಚಿತ್ರ ತಗೊಳ್ಳೋದು ಬೇಡ’ ಎಂದು ಅವರು ಹೇಳಿದ್ದಾರೆ. ರಿಷಬ್ ಶೆಟ್ಟಿ ಈ ರೀತಿ ಹೇಳಿದ್ದಕ್ಕೆ ಕಾರಣ ಇದೆ. ಅದೇನು ಎಂಬುದನ್ನು ಅವರು ಈ ವಿಡಿಯೋದಲ್ಲಿ ವಿವರಿಸಿದ್ದಾರೆ.
ಇದನ್ನೂ ಓದಿ:
‘ಪೆದ್ರೂ’ ಚಿತ್ರಕ್ಕೆ ಬೆಂಗಳೂರು ಸಿನಿಮೋತ್ಸವದಲ್ಲಿ ಇಲ್ಲ ಮನ್ನಣೆ; ಬಹಿರಂಗ ಪತ್ರದಲ್ಲಿ ರಿಷಬ್ ಶೆಟ್ಟಿ ಅಸಮಾಧಾನ
ರಿಷಬ್ ಶೆಟ್ಟಿ ನಿರ್ಮಾಣದ ‘ಪೆದ್ರೊ’ ಟ್ರೇಲರ್ ರಿಲೀಸ್; ನಟೇಶ್ ಹೆಗಡೆ ನಿರ್ದೇಶನಕ್ಕೆ ಮೆಚ್ಚುಗೆ