ಪ್ರಗತಿ, ರಕ್ಷಿತ್ ಹೆಸರು ಮೊಬೈಲ್​ನಲ್ಲಿ ಏನಂತ ಸೇವ್​ ಇದೆ? ರಿಷಬ್ ಶೆಟ್ಟಿ ಕೊಟ್ಟ ಉತ್ತರ ಹೀಗಿತ್ತು

Edited By:

Updated on: Jun 18, 2022 | 5:01 PM

‘ಅತ್ಯಂತ ವಿಚಿತ್ರವಾಗಿ ಯಾರದ್ದಾದರೂ ಹೆಸರನ್ನು ಸೇವ್ ಮಾಡಿಕೊಂಡಿದ್ದೀರಾ?’ ಎನ್ನುವ ಪ್ರಶ್ನೆ ರಿಷಬ್​ಗೆ ಎದುರಾಯಿತು. ಈ ಪ್ರಶ್ನೆಗೆ ಉತ್ತರಿಸುವಾಗ ರಕ್ಷಿತ್ ಹಾಗೂ ಪತ್ನಿ ಪ್ರಗತಿ ಹೆಸರನ್ನು ಏನಂತ ಸೇವ್ ಮಾಡಿಕೊಂಡಿದ್ದೇನೆ ಎನ್ನುವ ಬಗ್ಗೆ ಅವರು ಮಾಹಿತಿ ನೀಡಿದರು.

ನಟ ರಿಷಬ್ ಶೆಟ್ಟಿ (Rishab Shetty) ಅಭಿನಯದ ‘ಹರಿಕಥೆ ಅಲ್ಲ ಗಿರಿಕಥೆ’ ಸಿನಿಮಾದ (Harikathe Alla Girikathe) ಟ್ರೇಲರ್ ಇತ್ತೀಚೆಗೆ ಬಿಡುಗಡೆ ಆಗಿದೆ. ಈ ಟ್ರೇಲರ್ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಜೂನ್ 23ರಂದು ಸಿನಿಮಾ ರಿಲೀಸ್ ಆಗಲಿದೆ. ಈ ಸಿನಿಮಾ ಪ್ರಚಾರಕ್ಕಾಗಿ ನಿರ್ದೇಶಕ ರಿಷಬ್ ಶೆಟ್ಟಿ ಟಿವಿ9ಗೆ ಸ್ಪೆಷಲ್ ಸಂದರ್ಶನ ಕೊಟ್ಟಿದ್ದಾರೆ. ರ‍್ಯಾಪಿಡ್ ಫೈರ್ ಪ್ರಶ್ನೆಗಳಿಗೆ ರಿಷಬ್ ಉತ್ತರ ನೀಡಿದ್ದಾರೆ. ‘ಅತ್ಯಂತ ವಿಚಿತ್ರವಾಗಿ ಯಾರದ್ದಾದರೂ ಹೆಸರನ್ನು ಸೇವ್ ಮಾಡಿಕೊಂಡಿದ್ದೀರಾ?’ ಎನ್ನುವ ಪ್ರಶ್ನೆ ರಿಷಬ್​ಗೆ ಎದುರಾಯಿತು. ಈ ಪ್ರಶ್ನೆಗೆ ಉತ್ತರಿಸುವಾಗ ರಕ್ಷಿತ್ ಹಾಗೂ ಪತ್ನಿ ಪ್ರಗತಿ ಹೆಸರನ್ನು ಏನಂತ ಸೇವ್ ಮಾಡಿಕೊಂಡಿದ್ದೇನೆ ಎನ್ನುವ ಬಗ್ಗೆ ಅವರು ಮಾಹಿತಿ ನೀಡಿದರು. ‘ಊಟವನ್ನು ಮಾಡಿ ಬಡಿಸಬೇಕು ಎಂದು ಕೇಳಿದಾಗ ಯಾವ ನಟಿಯ ಹೆಸರು ನೆನಪಿಗೆ ಬರುತ್ತದೆ’ ಎಂದು ಕೇಳಿದಾಗ ರಮ್ಯಾ ಹೆಸರನ್ನು ರಿಷಬ್ ಹೇಳಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

 

Loading...
Unable to load recommendations.
Follow Us
TV9 Web

TV9 Kannada

Read More