VIDEO: ಅದ್ಭುತ… ಅತ್ಯದ್ಭುತ: ರಿಷಭ್ ಪಂತ್ ಸ್ಪೈಡಿ ಕ್ಯಾಚ್ಗೆ ದಂಗಾದ ಪ್ರೇಕ್ಷಕರು
Rishabh Pant Catch: ಮೊಹಮ್ಮದ್ ಶಮಿ ಎಸೆದ ಮೂರನೇ ಓವರ್ನ 5ನೇ ಎಸೆತವನ್ನು ಸರಿಯಾಗಿ ಗುರುತಿಸುವಲ್ಲಿ ಯಶಸ್ವಿ ಜೈಸ್ವಾಲ್ ಎಡವಿದರು. ಪರಿಣಾಮ ಚೆಂಡು ಜೈಸ್ವಾಲ್ ಅವರ ಗ್ಲೌಸ್‌ಗೆ ಬಡಿದು ಕೀಪರ್‌ನ ಮೇಲ್ಭಾಗದಲ್ಲಿ ಹಾರಿ ಹೋಗುತ್ತಿತ್ತು. ಈ ವೇಳೆ ಹದ್ದಿನ ಕಣ್ಣಿಟ್ಟಿದ್ದ ನಾಯಕ ರಿಷಭ್ ಪಂತ್, ಗಾಳಿಯಲ್ಲಿ ಜಿಗಿದು ಕೇವಲ ಒಂದು ಕೈಯಿಂದ ಅದ್ಭುತ ಕ್ಯಾಚ್ ಹಿಡಿದರು.
IPL 2026: ಇಂಡಿಯನ್ ಪ್ರೀಮಿಯರ್ ಲೀಗ್ನ 32ನೇ ಪಂದ್ಯದಲ್ಲಿ ರಿಷಭ್ ಪಂತ್ (Rishabh Pant) ಹಿಡಿದ ಅದ್ಭುತ ಕ್ಯಾಚ್ ವಿಡಿಯೋ ಇದೀಗ ವೈರಲ್ ಆಗಿದೆ. ಲಕ್ನೋನ ಏಕಾನ ಸ್ಟೇಡಿಯಂನಲ್ಲಿ ನಡೆದ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಈ ಪಂದ್ಯದಲ್ಲಿ ಟಾಸ್ ಗೆದ್ದ ಲಕ್ನೋ ಸೂಪರ್ ಜೈಂಟ್ಸ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಯಶಸ್ವಿ ಜೈಸ್ವಾಲ್ ಸ್ಫೋಟಕ ಆರಂಭ ಒದಗಿಸಿದ್ದರು.
ಆದರೆ ಮೊಹಮ್ಮದ್ ಶಮಿ ಎಸೆದ ಮೂರನೇ ಓವರ್ನ 5ನೇ ಎಸೆತವನ್ನು ಸರಿಯಾಗಿ ಗುರುತಿಸುವಲ್ಲಿ ಯಶಸ್ವಿ ಜೈಸ್ವಾಲ್ ಎಡವಿದರು. ಪರಿಣಾಮ ಚೆಂಡು ಜೈಸ್ವಾಲ್ ಅವರ ಗ್ಲೌಸ್‌ಗೆ ಬಡಿದು ಕೀಪರ್‌ನ ಮೇಲ್ಭಾಗದಲ್ಲಿ ಹಾರಿ ಹೋಗುತ್ತಿತ್ತು. ಈ ವೇಳೆ ಹದ್ದಿನ ಕಣ್ಣಿಟ್ಟಿದ್ದ ನಾಯಕ ರಿಷಭ್ ಪಂತ್, ಗಾಳಿಯಲ್ಲಿ ಜಿಗಿದು ಕೇವಲ ಒಂದು ಕೈಯಿಂದ ಅದ್ಭುತ ಕ್ಯಾಚ್ ಹಿಡಿದರು.
ಈ ಮೂಲಕ ರಿಷಭ್ ಪಂತ್ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಮೊದಲ ಯಶಸ್ಸು ತಂದುಕೊಟ್ಟಿದ್ದರು. ಇದರ ಬೆನ್ನಲ್ಲೇ ಮೊಹಮ್ಮದ್ ಶಮಿ ಧ್ರುವ್ ಜುರೆಲ್ (0) ವಿಕೆಟ್ ಕೂಡ ಪಡೆದರು.
ಇದೀಗ ರಿಷಭ್ ಪಂತ್ ಹಿಡಿದ ಅದ್ಭುತ ಕ್ಯಾಚ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಸ್ಪೈಡಿ ಕ್ಯಾಚ್ಗೆ ಭಾರೀ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ.
ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ್ ರಾಯಲ್ಸ್ ತಂಡವು 20 ಓವರ್ಗಳಲ್ಲಿ 159 ರನ್ ಕಲೆಹಾಕುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ 160 ರನ್ಗಳ ಗುರಿ ನೀಡಿದೆ.