Yamuna Floods: ಉಕ್ಕಿ ಹರಿದ ಯಮುನೆ ದೆಹಲಿ ರಸ್ತೆಗಳನ್ನು ಮುಳುಗಿಸಿದಳು, ಪ್ರವಾಹ ತಗ್ಗಿದರೂ ರಸ್ತೆಗಳು ಜಲಾವೃತ!

ಅರುಣ್​ ಕುಮಾರ್​ ಬೆಳ್ಳಿ

Updated on: Jul 15, 2023 | 10:44 AM

ಯಮುನಾ ನದಿಯಲ್ಲಿ ಪ್ರವಾಹದ ತೀವ್ರತೆ ಕಮ್ಮಿಯಾಗಿದೆಯಾದರೂ ದೆಹಲಿಯ ಪ್ರಮುಖ ರಸ್ತೆಗಳಲ್ಲಿ ನೀರು ಈಗಲೂ ಹರಿಯುತ್ತಿದೆ

ದೆಹಲಿ: ನಿಮಗಿಲ್ಲಿ ಕಾಣುತ್ತಿರುವ ದೃಶ್ಯ ದೆಹಲಿಯಲ್ಲಿ (Delhi) ಕಂಡಿದ್ದು ಅಂತ ಹೇಳಿದರೆ ನೀವು ನಂಬಲೇ ಬೇಕು. ಇಲ್ಲ ನೀವಂದುಕೊಳ್ಳುತ್ತಿರುವ ಹಾಗೆ ದೆಹಲಿಯಲ್ಲಿ ಮಳೆ ಧಾರಾಕಾರವಾಗಿ ಏನೂ ಸುರಿದಿಲ್ಲ ಅಥವಾ ಸುರಿಯುತ್ತಿಲ್ಲ. ಹಿಮಾಚಲ ಪ್ರದೇಶ, ಉತ್ತರಾಖಂಡ್, ಹರಿಯಾಣ ಮತ್ತು ಪಂಜಾಬ್ ರಾಜ್ಯಗಳಲ್ಲಿ ಸುರಿದ ಭಾರೀ ಮಳೆಯಿಂದಾಗಿ ಯಮುನೆ ಉಕ್ಕಿ ಹರಿಯುತ್ತಿದ್ದು ಪ್ರವಾಹದ ನೀರು ದೆಹಲಿಗೂ ನುಗ್ಗಿ ರಸ್ತೆಗಳೆಲ್ಲ ಜಲಾವೃತ. ರಾಷ್ಟ್ರದ ರಾಜಧಾನಿಯ (National Capital) ಸ್ಥಿತಿಯೇ ಹೀಗಿರಬೇಕಾದರೆ, ರಾಜ್ಯದ ರಾಜಧಾನಿಯದು ಯಾವ ಲೆಕ್ಕ ಅಂತ ಬೆಂಗಳೂರಿಗರು (Bengalureans) ಸಮಾಧಾನಪಟ್ಟುಕೊಳ್ಳಬಹುದು. ಯಮುನಾ ನದಿಯಲ್ಲಿ ಪ್ರವಾಹದ ತೀವ್ರತೆ ಕಮ್ಮಿಯಾಗಿದೆಯಾದರೂ ದೆಹಲಿಯ ಪ್ರಮುಖ ರಸ್ತೆಗಳಲ್ಲಿ ನೀರು ಈಗಲೂ ಹರಿಯುತ್ತಿದೆ. ದೆಹಲಿ ಮತ್ತು ಕೇಂದ್ರ ಸರ್ಕಾರಗಳು ಪರಸ್ಪರ ದೋಷಾರೋಪಣೆಯಲ್ಲಿ ತೊಡಗಿವೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಅರುಣ್​ ಕುಮಾರ್​ ಬೆಳ್ಳಿ

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.