Loading video

Rohini Vs Roopa: ಬೀದಿ ರಂಪಾಟ ನಡೆಸಿದ್ದಕ್ಕೆ ಬೆಲೆ ತೆತ್ತ ರೋಹಿಣಿ ಸಿಂಧೂರಿ ಮತ್ತು ಡಿ ರೂಪಾ ಮೌದ್ಗೀಲ್!

|

Updated on: Feb 21, 2023 | 3:54 PM

ರಾಜ್ಯ ಸರ್ಕಾರ ಇವರಿಬ್ಬರನ್ನು ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದೆ. ವರ್ಗಾವಣೆಯಾಗಿರುವ ಸ್ಥಳಗಳ ಬಗ್ಗೆ ಸರ್ಕಾರದಿಂದ ಇನ್ನೂ ಸೂಚನೆಯಿಲ್ಲ,ಇಷ್ಟರಲ್ಲೇ ಗೊತ್ತಾಗಲಿದೆ.

ಬೆಂಗಳೂರು: ಹೆಚ್ಚು ಸುಶಿಕ್ಷಿತರು, ಉನ್ನತ ಹುದ್ದೆಗಳಲ್ಲಿರುವವರು ಮತ್ತು ಜವಾಬ್ದಾರಿಯುತ ಸ್ಥಾನದಲ್ಲಿರುವವರು ಅನ್ನೋದನ್ನು ಮರೆತು ಸೋಮವಾರದಂದು ಬೀದಿ ರಂಪಾಟ ನಡೆಸಿದ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ (Rohini Sindhuri) ಮತ್ತು ಐಪಿಎಸ್ ಅಧಿಕಾರಿ ಡಿ ರೂಪಾ ಮೌದ್ಗೀಲ್ (D Roopa Moudgil) ಅವರಿಗೆ ತಕ್ಕ ಶಾಸ್ತಿಯಾಗಿದೆ ಅಂತ ಕನ್ನಡಿಗರು ಭಾವಿಸಿದ್ದಾರೆ. ವಿಷಯ ನಿಮಗೆ ಗೊತ್ತುಂಟು. ರಾಜ್ಯ ಸರ್ಕಾರ ಇವರಿಬ್ಬರನ್ನು ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದೆ. ವರ್ಗಾವಣೆಯಾಗಿರುವ ಸ್ಥಳಗಳ ಬಗ್ಗೆ ಸರ್ಕಾರದಿಂದ ಇನ್ನೂ ಸೂಚನೆಯಿಲ್ಲ. ಇಷ್ಟರಲ್ಲೇ ಅದು ಗೊತ್ತಾಗಲಿದೆ. ಗಮನಿಸಬೇಕಿರುವ ಸಂಗತಿಯೇನೆಂದರೆ, ಹೂವಿನ ಜೊತೆ ನಾರು ಎಂಬಂತೆ ರೂಪಾ ಅವರ ಪತಿ ಮತ್ತು ಐಎಎಸ್ ಅಧಿಕಾರಿ ಮುನೀಷ್ ಮೌದ್ಗೀಲ್ (Munish Moudgil) ಅವರನ್ನು ಸಹ ಎತ್ತಂಗಡಿ ಮಾಡಲಾಗಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Feb 21, 2023 03:53 PM