Mumbai Indians: ಮುಂಬೈ ಇಂಡಿಯನ್ಸ್ ಕ್ಯಾಪ್-ಜೆರ್ಸಿಯನ್ನು ಸುಟ್ಟು ಹಾಕಿದ ರೋಹಿತ್ ಶರ್ಮಾ ಅಭಿಮಾನಿಗಳು: ವಿಡಿಯೋ ನೋಡಿ
Rohit Sharma Fans Angry: ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಐಪಿಎಲ್ 2024 ಕ್ಕೂ ಮುನ್ನ ರೋಹಿತ್ ಶರ್ಮಾರನ್ನು ಕ್ಯಾಪ್ಟನ್ಸಿ ಪಟ್ಟದಿಂದ ಕೆಳಗಿಳಿಸಿದೆ. ಇದರಿಂದ ರೋಹಿತ್ ಅಭಿಮಾನಿಗಳು ಆಕ್ರೋಶಗೊಂಡಿದ್ದಾರೆ. ಈ ಅಭಿಮಾನಿಗಳಲ್ಲಿ ಒಬ್ಬರು ಮುಂಬೈ ಇಂಡಿಯನ್ಸ್ ಕ್ಯಾಪ್ ಅನ್ನು ನೆಲಕ್ಕೆ ಬೀಳಿಸಿ ನಂತರ ಅದನ್ನು ತನ್ನ ಕಾಲಿನಿಂದ ತುಳಿದು ಸುಟ್ಟುಹಾಕಿದ್ದಾರೆ.
ಐಪಿಎಲ್‌ನ ಅತ್ಯಂತ ಯಶಸ್ವಿ ನಾಯಕರ ಪಟ್ಟಿಯಲ್ಲಿ ಮಹೇಂದ್ರ ಸಿಂಗ್ ಧೋನಿಗೆ ಪೈಪೋಟಿ ನೀಡಬಲ್ಲ ನಾಯಕ ಎಂದರೆ ಅದು ರೋಹಿತ್ ಶರ್ಮಾ (Rohit Sharma). ರೋಹಿತ್ ನಾಯಕತ್ವದಲ್ಲಿ ಮುಂಬೈ ಇಂಡಿಯನ್ಸ್ ತನ್ನ ಮೊದಲ ಐಪಿಎಲ್ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಅವರ ನಾಯಕತ್ವದಲ್ಲೇ ಒಟ್ಟು ಐದು ಬಾರಿ ಐಪಿಎಲ್ ಟ್ರೋಫಿಯನ್ನು ಎತ್ತಿಹಿಡಿದಿದೆ. ಆದರೆ ಶುಕ್ರವಾರ ಈ ಫ್ರಾಂಚೈಸಿ ದೊಡ್ಡ ನಿರ್ಧಾರವನ್ನು ತೆಗೆದುಕೊಂಡು, ರೋಹಿತ್ರನ್ನು ಕ್ಯಾಪ್ಟನ್ಸಿ ಪಟ್ಟದಿಂದ ಕೆಳಗಿಳಿಸಿ ಗುಜರಾತ್ ಟೈಟಾನ್ಸ್‌ನಿಂದ ಟ್ರೇಡ್ ಮಾಡಿದ್ದ ಹಾರ್ದಿಕ್ ಪಾಂಡ್ಯ ಅವರನ್ನು ತಂಡದ ನಾಯಕನನ್ನಾಗಿ ನೇಮಿಸಿದೆ. ಇದು ಅನೇಕರ ಕೆಂಗಣ್ಣಿಗೆ ಗುರಿಯಾಗಿದೆ. ರೋಹಿತ್ ಅಭಿಮಾನಿಗಳು ಆಕ್ರೋಶಗೊಂಡಿದ್ದಾರೆ. ಈ ಅಭಿಮಾನಿಗಳಲ್ಲಿ ಒಬ್ಬರು ಮುಂಬೈ ಇಂಡಿಯನ್ಸ್ ಕ್ಯಾಪ್ ಅನ್ನು ನೆಲಕ್ಕೆ ಬೀಳಿಸಿ ನಂತರ ಅದನ್ನು ತನ್ನ ಕಾಲಿನಿಂದ ತುಳಿದು ಸುಟ್ಟುಹಾಕಿದ್ದಾರೆ. ಮುಂಬೈ ಜೆರ್ಸಿಯನ್ನು ಕೂಡ ಬೆಂಕಯಿಂದ ಸುಟ್ಟು ಹಾಕಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಮುಂಬೈಯ ಈ ನಿರ್ಧಾರದಿಂದ ಫ್ರಾಂಚೈಸಿ ತನ್ನ ಸಾಮಾಜಿಕ ಜಾಲತಾಣಗಳಲ್ಲಿ ಅನೇಕ ಫಾಲೋವರ್ಸ್ ಅನ್ನು ಕೂಡ ಕಳೆದುಕೊಂಡಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ