ಕಾಂಗ್ರೆಸ್ ಸಾವರ್ಕರ್ ಫೋಟೋವನ್ನು ವಿಧಾನ ಸೌಧದಿಂದ ತೆಗೆದರೆ ನಾವು ನೆಹರೂ ಫೋಟೋ ತೆಗೆದುಬಿಡುತ್ತೇವೆ: ಬಸನಗೌಡ ಯತ್ನಾಳ್

ಕಾಂಗ್ರೆಸ್ ಸಾವರ್ಕರ್ ಫೋಟೋವನ್ನು ವಿಧಾನ ಸೌಧದಿಂದ ತೆಗೆದರೆ ನಾವು ನೆಹರೂ ಫೋಟೋ ತೆಗೆದುಬಿಡುತ್ತೇವೆ: ಬಸನಗೌಡ ಯತ್ನಾಳ್

ಅರುಣ್​ ಕುಮಾರ್​ ಬೆಳ್ಳಿ
|

Updated on: Dec 15, 2023 | 7:31 PM

ಇಸ್ಲಾಂ ಯಾವತ್ತೂ ಬೇರೆ ಧರ್ಮದ ಜನರನ್ನು ಸಹೋದರರಂತೆ ಕಾಣೋದಿಲ್ಲ ಅಂತ ಖುದ್ದು ಬಾಬಾ ಸಾಹೇಬ್ ಅಂಬೇಡ್ಕರ್ ಹೇಳಿದ್ದಾರೆ. ಮೈಸೂರಿನ ವಿಮಾನ ನಿಲ್ದಾಣಕ್ಕೆ ಮೈಸೂರು ಮಹಾರಾಜರ ಹೆಸರಿಡಬೇಕೆ ಹೊರತು ಹಿಂದೂಗಳ ಕಗ್ಗೊಲೆ ಮಾಡಿದ ಟಿಪ್ಪು ಸುಲ್ತಾನ್ ಹೆಸರಲ್ಲ, ಹಿಂದೂಗಳ ಬಗ್ಗೆ ಮಾತಾಡುವ ನೈತಿಕ ಅಧಿಕಾರವನ್ನು ಪ್ರಿಯಾಂಕ್ ಖರ್ಗೆ ಕಳೆದುಕೊಂಡಿದ್ದಾರೆ ಎಂದು ಯತ್ನಾಳ್ ಹೇಳಿದರು.

ಬೆಳಗಾವಿ: ವಿಧಾನ ಸಭೆಯಿಂದ ವೀರ್ ಸಾವರ್ಕರ್ (Veer Savarkar) ಅವರ ಪೋಟೋ ತೆಗೆಯಬೇಕೆಂದು ಹೇಳಿ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಸೃಷ್ಟಿಸಿರುವ ವಿವಾದ ತಣ್ಣಗಾಗುವ ಲಕ್ಷಣಗಳು ಕಾಣುತ್ತಿಲ್ಲ. ಇಂದು ಬೆಳಗಾವಿಯಲ್ಲಿ ಟಿವಿ9 ವರದಿಗಾರನೊಂದಿಗೆ ಮಾತಾಡಿದ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal), ಕಾಂಗ್ರೆಸ್ ನಾಯಕರಿಗೆ ಲಕ್ಷಾಂತರ ಹಿಂದೂಗಳ ಕಗ್ಗೊಲೆ ಮಾಡಿದ ಟಿಪ್ಪು ಸುಲ್ತಾನ್ (Tipu Sultan) ಸ್ವತಂತ್ರ ಸೇನಾನಿಯಂತೆ ಕಾಣುತ್ತಾನೆ, 4,000 ಕ್ಕೂ ಹೆಚ್ಚು ದೇವಸ್ಥಾನಗಳನ್ನು ಧ್ವಂಸ ಮಾಡಿದ ಅವನು ಸ್ವಾತಂತ್ರ್ಯಕ್ಕಾಗಿ ಹೋರಾಡಿದವನಲ್ಲ ಎಂದು ಹೈಕೋರ್ಟ್ ಹೇಳಿದೆ. ಅಂಥವನ ಹೆಸರನ್ನು ಮೈಸೂರು ವಿಮಾನ ನಿಲ್ದಾಣಕ್ಕೆ ಇಡುವ ಯೋಚನೆ ಕಾಂಗ್ರೆಸ್ ಸರ್ಕಾರ ಮಾಡುತ್ತಿರುವುದು ದುರದೃಷ್ಟಕರ. ಆದರೆ ಅವರೇನಾದರೂ ವಿಧಾನ ಸೌಧದಿಂದ ಸಾವರ್ಕರ್ ಫೋಟೋ ತೆಗೆದರೆ ಬಿಜೆಪಿ ಸದಸ್ಯರು ಜವಾಹರಲಾಲ ನೆಹರೂ ಅವರ ಫೋಟೋ ತೆಗೆದುಹಾಕುತ್ತಾರೆ ಎಂದು ಯತ್ನಾಳ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ