ಮರೆಗುಳಿ ರೋಹಿತ್ ಈಗ ಏನು ಮರೆತ್ರು ನೀವೇ ನೋಡಿ
Rohit Sharma's Forgetting Habit: ರೋಹಿತ್ ಶರ್ಮಾಗೆ ವಸ್ತುಗಳನ್ನು ಮರೆಯುವ ಅಭ್ಯಾಸವಿದ್ದು, ಇತ್ತೀಚೆಗೆ ತಮ್ಮ ಏರ್‌ಪಾಡ್ಸ್ ಕೇಸ್ ಅನ್ನು ಬಸ್‌ನಲ್ಲಿ ಮರೆತು ವಿಮಾನ ನಿಲ್ದಾಣದಲ್ಲಿ ಅದನ್ನು ಮರಳಿ ಪಡೆದರು. ಪಾಸ್‌ಪೋರ್ಟ್, ಸೂಟ್‌ಕೇಸ್ ಮರೆತ ಘಟನೆಗಳೂ ನಡೆದಿವೆ. ಈ ಮರೆಗುಳಿಯ ಹೊರತಾಗಿಯೂ, ರೋಹಿತ್ ತಮ್ಮ ಆಕ್ರಮಣಕಾರಿ ಬ್ಯಾಟಿಂಗ್ ಶೈಲಿಯನ್ನು ಎಂದಿಗೂ ಮರೆಯುವುದಿಲ್ಲ. ರಾಂಚಿಯಲ್ಲಿ ಅವರು ವಿರಾಟ್ ಜೊತೆ ಶತಕದ ಪಾಲುದಾರಿಕೆಯಲ್ಲಿ 57 ರನ್ ಗಳಿಸಿ ಮಿಂಚಿದ್ದರು.
ರೋಹಿತ್ ಶರ್ಮಾ ಒಬ್ಬ ಅದ್ಭುತ ಬ್ಯಾಟ್ಸ್‌ಮನ್ ಎಂಬುದು ನಮಗೆಲ್ಲರಿಗೂ ಗೊತ್ತಿರುವ ವಿಚಾರವೇ. ಆದರೆ ಅವರಿಗೆ ಇನ್ನೊಂದು ಅಭ್ಯಾಸವಿದೆ ಎಂಬುದು ನಿಮಗ್ಯಾರಿಗಾದರೂ ಗೊತ್ತಾ?. ಹೌದು ನಾಯಕನಾಗಿ ಟೀಂ ಇಂಡಿಯಾವನ್ನು ಯಶಸ್ಸಿನತ್ತ ಕೊಂಡೊಯ್ದ ರೋಹಿತ್ಗೆ ಮರೆಯುವ ಅಭ್ಯಾಸ ಇದ್ದಂತೆ ತೋರುತ್ತದೆ. ರೋಹಿತ್ ತಮ್ಮ ವಸ್ತುಗಳನ್ನು ಮರೆತು ಬಂದು ಆ ನಂತರ ನೆನಪಿಸಿಕೊಂಡಿರುವ ಸಾಕಷ್ಟು ಘಟನೆಗಳನ್ನು ನಾವು ನೋಡಿದ್ದೇವೆ. ಇದೀಗ ಎರಡನೇ ಏಕದಿನ ಪಂದ್ಯಕ್ಕಾಗಿ ರಾಂಚಿಯಿಂದ ರಾಯ್ಪುರಕ್ಕೆ ಪ್ರಯಾಣ ಬೆಳೆಸಿದ್ದ ರೋಹಿತ್, ತಮ್ಮ ಏರ್‌ಪಾಡ್ಸ್ ಕೇಸ್ ಅನ್ನು ಮರೆತು ಬಸ್ನಲ್ಲಿಯೇ ಬಿಟ್ಟು ಬಂದಿದ್ದಾರೆ. ಆ ಬಳಿಕ ವಿಮಾನ ನಿಲ್ದಾಣದಲ್ಲಿ ಕುಳಿತಿದ್ದ ರೋಹಿತ್ಗೆ ಟೀಂ ಇಂಡಿಯಾದ ಸಹಾಯಕ ಸಿಬ್ಬಂದಿಯೊಬ್ಬರು ಏರ್‌ಪಾಡ್ಸ್ ಕೇಸ್ ಅನ್ನು ತಂದುಕೊಟ್ಟಿದ್ದಾರೆ.
ಮೇಲೆ ಹೇಳಿದಂತೆ ರೋಹಿತ್ ಶರ್ಮಾಗೆ ಮರೆಯುವ ಅಭ್ಯಾಸವಿದೆ. ವಿರಾಟ್ ಕೊಹ್ಲಿ ಮತ್ತು ಶಿಖರ್ ಧವನ್ ಅವರ ಈ ಅಭ್ಯಾಸದ ಬಗ್ಗೆ ಹಲವಾರು ಸಂದರ್ಶನಗಳಲ್ಲಿ ಮಾತನಾಡಿದ್ದಾರೆ. ಅವರು ಹೋಟೆಲ್‌ಗಳಲ್ಲಿ ತಮ್ಮ ಪಾಸ್‌ಪೋರ್ಟ್ ಮತ್ತು ಸೂಟ್‌ಕೇಸ್ ಅನ್ನು ಸಹ ಮರೆತುಬಿಡುತ್ತಾರೆ. ಈ ಬಾರಿ, ಅವರು ಬಸ್‌ನಲ್ಲಿ ತಮ್ಮ ಏರ್‌ಪಾಡ್ಸ್ ಕೇಸ್ ಅನ್ನು ಮರೆತಿದ್ದಾರೆ. ರೋಹಿತ್ ಶರ್ಮಾ ವಿಷಯಗಳನ್ನು ಮರೆತರೂ, ಅವರು ಯಾವಾಗಲೂ ಆಕ್ರಮಣಕಾರಿಯಾಗಿ ಬ್ಯಾಟಿಂಗ್ ಮಾಡಲು ನೆನಪಿಸಿಕೊಳ್ಳುತ್ತಾರೆ. ರಾಂಚಿಯಲ್ಲಿ ರೋಹಿತ್ 51 ಎಸೆತಗಳಲ್ಲಿ ಐದು ಬೌಂಡರಿ ಮತ್ತು ಮೂರು ಸಿಕ್ಸರ್‌ಗಳೊಂದಿಗೆ 57 ರನ್ ಗಳಿಸಿದರು. 135 ರನ್‌ಗಳನ್ನು ಸೇರಿಸಿದ್ದ ವಿರಾಟ್ ಜೊತೆ ರೋಹಿತ್ ಶತಕದ ಪಾಲುದಾರಿಕೆಯನ್ನು ಹಂಚಿಕೊಂಡರು.

