ಕೊನೆಯ ಓವರ್ನಲ್ಲಿ 17 ರನ್, ಅಂತಿಮ ಓವರ್ನಲ್ಲಿ 6 ರನ್: ಪಂದ್ಯ ಗೆಲ್ಲಿಸಿದ ಶೆಫರ್ಡ್
186 ರನ್ಗಳ ಗುರಿ ಬೆನ್ನತ್ತಿದ ಶಾರ್ಜಾ ವಾರಿಯರ್ಸ್ ತಂಡವು 19 ಓವರ್ಗಳ ಮುಕ್ತಾಯದ ವೇಳೆಗೆ 175 ರನ್ ಕಲೆಹಾಕಿದ್ದರು. ಅದರಂತೆ ಕೊನೆಯ ಓವರ್ನಲ್ಲಿ ಗೆಲ್ಲಲು 11 ರನ್ಗಳ ಅವಶ್ಯಕತೆಯಿತ್ತು. ಅಂತಿಮ ಓವರ್ ಎಸೆದ ರೊಮಾರಿಯೊ ಶೆಫರ್ಡ್ ನೀಡಿದ್ದು ಕೇವಲ 6 ರನ್ಗಳು ಮಾತ್ರ. ಈ ಮೂಲಕ ಎಂಐ ಎಮಿರೇಟ್ಸ್ ತಂಡಕ್ಕೆ 4 ರನ್ಗಳ ರೋಚಕ ಜಯ ತಂದು ಕೊಟ್ಟರು.
ಶಾರ್ಜಾದಲ್ಲಿ ನಡೆದ ಇಂಟರ್ನ್ಯಾಷನಲ್ ಲೀಗ್ ಟಿ20 ಟೂರ್ನಿಯ 6ನೇ ಪಂದ್ಯದಲ್ಲಿ ಎಂಐ ಎಮಿರೇಟ್ಸ್ ತಂಡ 4 ರನ್ಗಳ ರೋಚಕ ಜಯ ಸಾಧಿಸಿದೆ. ಈ ಗೆಲುವಿನ ರೂವಾರಿ ರೊಮಾರಿಯೊ ಶೆಫರ್ಡ್. ಈ ಪಂದ್ಯದಲ್ಲಿ ಟಾಸ್ ಗೆದ್ದ ಶಾರ್ಜಾ ವಾರಿಯರ್ಸ್ ತಂಡವು ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಎಂಐ ಎಮಿರೇಟ್ಸ್ ತಂಡವು 17.2 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 149 ರನ್ ಕಲೆಹಾಕಿತು. ಈ ಹಂತದಲ್ಲಿ 8ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ರೊಮಾರಿಯೊ ಶೆಫರ್ಡ್ ಇಡೀ ಪಂದ್ಯದ ಚಿತ್ರಣ ಬದಲಿಸಿ ಬಿಟ್ಟರು.
ಅಂತಿಮ 10 ಎಸೆತಗಳನ್ನು ಎದುರಿಸಿದ ರೊಮಾರಿಯೊ ಶೆಫರ್ಡ್ 4 ಭರ್ಜರಿ ಸಿಕ್ಸ್ ಹಾಗೂ 1 ಫೋರ್ನೊಂದಿಗೆ ಅಜೇಯ 31 ರನ್ ಬಾರಿಸಿದರು. ಈ ಭರ್ಜರಿ ಬ್ಯಾಟಿಂಗ್ ನೆರವಿನೊಂದಿಗೆ ಎಂಐ ಎಮಿರೇಟ್ಸ್ ತಂಡವು 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 185 ರನ್ ಕಲೆಹಾಕಿತು.
186 ರನ್ಗಳ ಗುರಿ ಬೆನ್ನತ್ತಿದ ಶಾರ್ಜಾ ವಾರಿಯರ್ಸ್ ತಂಡವು 19 ಓವರ್ಗಳ ಮುಕ್ತಾಯದ ವೇಳೆಗೆ 175 ರನ್ ಕಲೆಹಾಕಿದ್ದರು. ಅದರಂತೆ ಕೊನೆಯ ಓವರ್ನಲ್ಲಿ ಗೆಲ್ಲಲು 11 ರನ್ಗಳ ಅವಶ್ಯಕತೆಯಿತ್ತು. ಅಂತಿಮ ಓವರ್ ಎಸೆದ ರೊಮಾರಿಯೊ ಶೆಫರ್ಡ್ ನೀಡಿದ್ದು ಕೇವಲ 6 ರನ್ಗಳು ಮಾತ್ರ. ಈ ಮೂಲಕ ಎಂಐ ಎಮಿರೇಟ್ಸ್ ತಂಡಕ್ಕೆ 4 ರನ್ಗಳ ರೋಚಕ ಜಯ ತಂದು ಕೊಟ್ಟರು.
ಅತ್ತ ಕೊನೆಯ ಓವರ್ನಲ್ಲಿ 17 ರನ್ ಸಿಡಿಸಿದ್ದ ರೊಮಾರಿಯೊ ಶೆಫರ್ಡ್, ಇತ್ತ ಅಂತಿಮ ಓವರ್ನಲ್ಲಿ ಕೇವಲ 6 ರನ್ ನೀಡಿ ಪಂದ್ಯವನ್ನು ಗೆಲ್ಲಿಸಿ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.