ಹೊಸ ದೇಶದ ಪರ ಇನಿಂಗ್ಸ್ ಆರಂಭಿಸಿದ ರಾಸ್ ಟೇಲರ್

Updated on: Oct 09, 2025 | 8:53 AM

Oman vs Samoa, 1st Match: ರಾಸ್ ಟೇಲರ್ ಕಲೆಹಾಕಿದ 22 ರನ್​ಗಳೊಂದಿಗೆ ಸಮೋವಾ ತಂಡವು 20 ಓವರ್​ಗಳಲ್ಲಿ 9 ವಿಕೆಟ್ ಕಳೆದುಕೊಂಡು 92 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಒಮಾನ್ ತಂಡವು 17 ಓವರ್​ಗಳಲ್ಲಿ 95 ರನ್​ ಗಳಿಸಿ ಐದು ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ.

ನ್ಯೂಝಿಲೆಂಡ್ ತಂಡದ ಮಾಜಿ ಆಟಗಾರ ರಾಸ್ ಟೇಲರ್ ಸೆಕೆಂಡ್ ಇನಿಂಗ್ಸ್ ಆರಂಭಿಸಿದ್ದಾರೆ. ಅದು ಕೂಡ ಹೊಸ ದೇಶದ ಪರ ಪಾದಾರ್ಪಣೆ ಮಾಡುವ ಮೂಲಕ ಎಂಬುದು ವಿಶೇಷ. ಅಂದರೆ ಕಿವೀಸ್ ಪರ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿರುವ ಟೇಲರ್, ಇದೀಗ ಸಮೋವಾ ದೇಶದ ಪರ ಹೊಸ ಇನಿಂಗ್ಸ್ ಆರಂಭಿಸಿದ್ದಾರೆ.

ಅದರಂತೆ ಟಿ20 ವಿಶ್ವಕಪ್​ನ ಪೂರ್ವ ಏಷ್ಯಾ ಪೆಸಿಫಿಕ್ ಅರ್ಹತಾ ಪಂದ್ಯದಲ್ಲಿ ರಾಸ್ ಟೇಲರ್ ಸಮೋವಾ ಪರ ಕಣಕ್ಕಿಳಿದಿದ್ದಾರೆ. ಈ ಮೂಲಕ ಎರಡು ದೇಶಗಳ ಪರ ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ ಆಟಗಾರರ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ.

ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸಮೋವಾ ತಂಡವು ನಿರೀಕ್ಷಿತ ಪ್ರದರ್ಶನ ನೀಡಿರಲಿಲ್ಲ. ಅದರಲ್ಲೂ ಚೊಚ್ಚಲ ಪಂದ್ಯದಲ್ಲಿ ರಾಸ್ ಟೇಲರ್ ಕಮಾಲ್ ಮಾಡುವಲ್ಲಿ ವಿಫಲರಾದರು. 28 ಎಸೆತಗಳನ್ನು ಎದುರಿಸಿದ ಟೇಲರ್ 1 ಫೋರ್​ನೊಂದಿಗೆ ಕೇವಲ 22 ರನ್​ ಮಾತ್ರ ಕಲೆಹಾಕಿದ್ದರು.

ರಾಸ್ ಟೇಲರ್ ಕಲೆಹಾಕಿದ 22 ರನ್​ಗಳೊಂದಿಗೆ ಸಮೋವಾ ತಂಡವು 20 ಓವರ್​ಗಳಲ್ಲಿ 9 ವಿಕೆಟ್ ಕಳೆದುಕೊಂಡು 92 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಒಮಾನ್ ತಂಡವು 17 ಓವರ್​ಗಳಲ್ಲಿ 95 ರನ್​ ಗಳಿಸಿ ಐದು ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ.

ಇದಕ್ಕೂ ಮುನ್ನ ರಾಸ್ ಟೇಲರ್ ನ್ಯೂಝಿಲೆಂಡ್ ಪರ 210 ಪಂದ್ಯಗಳನ್ನಾಡಿದ್ದರು. ಈ ವೇಳೆ 8890 ಒಟ್ಟು ರನ್ ಕಲೆಹಾಕಿದ್ದಾರೆ. ಇದೀಗ ಸಮೋವಾ ಪರ ಮೊದಲ ಪಂದ್ಯದಲ್ಲಿ 22 ರನ್​ಗಳಿಸಿ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಸೆಕೆಂಡ್ ಇನಿಂಗ್ಸ್ ಆರಂಭಿಸಿದ್ದಾರೆ.