ಸರಿಯಾಗಿ ಔಟ್ ಮಾಡದೇ ಅಂಪೈರ್ ಜೊತೆ ಜಗಳಕ್ಕಿಳಿದ ಪಾಕ್ ಆಟಗಾರ್ತಿಯರು
Australia Women vs Pakistan Women: ಅಂಪೈರ್ ನಿರ್ಧಾರದಿಂದ ಫಾತಿಮಾ ಸನಾ ಈ ನಿರ್ಧಾರದಿಂದ ಅತೃಪ್ತರಾಗಿದ್ದರು. ಅಲ್ಲದೆ ಸಹ ಆಟಗಾರ್ತಿಯರೊಂದಿಗೆ ಅಂಪೈರ್ ಜೊತೆ ವಾದ ಮಾಡಲು ಪ್ರಾರಂಭಿಸಿದರು. ಈ ವಾದ ನಡುವೆ ಥರ್ಡ್ ಅಂಪೈರ್ಗೆ ಮನವಿ ಮಾಡಿ ರೀಪ್ಲೆ ಪರಿಶೀಲಿಸುವಂತೆ ಪಾಕ್ ಆಟಗಾರ್ತಿಯರು ಒತ್ತಾಯಿಸಿದರು.
ಮಹಿಳಾ ಏಕದಿನ ವಿಶ್ವಕಪ್ನ 9ನೇ ಪಂದ್ಯವು ನಾಟಕೀಯ ಕ್ಷಣಗಳಿಗೆ ಸಾಕ್ಷಿಯಾಗಿತ್ತು. ಕೊಲಂಬೊದಲ್ಲಿ ನಡೆದ ಈ ಪಂದ್ಯದಲ್ಲಿ ಪಾಕಿಸ್ತಾನ್ ಹಾಗೂ ಆಸ್ಟ್ರೇಲಿಯಾ ತಂಡಗಳು ಮುಖಾಮುಖಿಯಾಗಿದ್ದವು. ಈ ಮ್ಯಾಚ್ನಲ್ಲಿ ಟಾಸ್ ಗೆದ್ದ ಪಾಕ್ ತಂಡವು ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತಂಡ 78 ರನ್ಗಳಿಗೆ 7 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.
ಈ ಹಂತದಲ್ಲಿ 8ನೇ ವಿಕೆಟ್ ಪಡೆಯಲು ಪಾಕ್ ಆಟಗಾರ್ತಿಯರು ಹರಸಾಹಸ ಪಟ್ಟಿದ್ದರು. ಅದರಲ್ಲೂ 28ನೇ ಓವರ್ನಲ್ಲಿ ಸಿಕ್ಕ ಅವಕಾಶವನ್ನು ಕೈಚೆಲ್ಲಿಕೊಂಡಿದ್ದರು. 28ನೇ ಓವರ್ನ ಐದನೇ ಎಸೆತದಲ್ಲಿ , ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್ ಬೆತ್ ಮೂನಿ ಡೀಪ್ ಮಿಡ್‌ವಿಕೆಟ್ ಕಡೆಗೆ ಶಾಟ್ ಹೊಡೆದು ಎರಡು ರನ್ ಪಡೆಯಲು ಪ್ರಯತ್ನಿಸಿದರು.
ಈ ವೇಳೆ ನಾನ್ ಸ್ಟ್ರೈಕ್ನಲ್ಲಿದ್ದ ಕಿಮ್ ಗಾರ್ತ್ ಅವರನ್ನು ರನೌಟ್ ಮಾಡಲು ಉತ್ತಮ ಅವಕಾಶವಿತ್ತು. ಎರಡನೇ ರನ್ ಓಡುವಾಗ ಫೀಲ್ಡರ್ ಚೆಂಡನ್ನು ಬೌಲರ್ ಫಾತಿಮಾ ಸನಾ ಅವರ ಕೈಗೆ ಎಸೆದರು. ವಿಕೆಟ್ ಮುಂದೆ ಇದ್ದ ಫಾತಿಮಾ ಥ್ರೋ ಅನ್ನು ಹಿಡಿದು ಸ್ಟಂಪ್‌ಗಳ ಕಡೆಗೆ ಗುರಿಯಿಡಲು ಪ್ರಯತ್ನಿಸಿದರು.
ಆದರೆ ತನ್ನ ಆತುರದಲ್ಲಿ, ಫಾತಿಮಾ ಸನಾ ಚೆಂಡನ್ನು ಸ್ಟಂಪ್‌ಗೆ ತಾಗಿಸದೇ ದೊಡ್ಡ ತಪ್ಪು ಮಾಡಿದ್ದಳು . ಈ ತಪ್ಪಿನಿಂದ ಗಾರ್ತ್ ಕ್ರೀಸ್‌ಗೆ ಮರಳಲು ಸಾಧ್ಯವಾಯಿತು. ಇದಾಗ್ಯೂ ಸನಾ ಔಟ್ಗಾಗಿ ಅಂಪೈರ್ನತ್ತ ನೋಡಿದರು . ಅತ್ತ ಅಂಪೈರ್ ನಾಟೌಟ್ ಎಂದರು.
ಅಂಪೈರ್ ನಿರ್ಧಾರದಿಂದ ಫಾತಿಮಾ ಸನಾ ಈ ನಿರ್ಧಾರದಿಂದ ಅತೃಪ್ತರಾಗಿದ್ದರು. ಅಲ್ಲದೆ ಸಹ ಆಟಗಾರ್ತಿಯರೊಂದಿಗೆ ಅಂಪೈರ್ ಜೊತೆ ವಾದ ಮಾಡಲು ಪ್ರಾರಂಭಿಸಿದರು. ಈ ವಾದ ನಡುವೆ ಥರ್ಡ್ ಅಂಪೈರ್ಗೆ ಮನವಿ ಮಾಡಿ ರೀಪ್ಲೆ ಪರಿಶೀಲಿಸುವಂತೆ ಪಾಕ್ ಆಟಗಾರ್ತಿಯರು ಒತ್ತಾಯಿಸಿದರು. ಆದಾಗ್ಯೂ, ಅಂಪೈರ್ ತಮ್ಮ ನಿರ್ಧಾರದಲ್ಲಿ ವಿಶ್ವಾಸವನ್ನು ವ್ಯಕ್ತಪಡಿಸಿದ್ದು, ನಾಟೌಟ್ ಎಂದೇ ತೀರ್ಪು ನೀಡಿದರು. ಇದರಿಂದ ಪಾಕಿಸ್ತಾನಿ ಆಟಗಾರ್ತಿಯರು ಅಸಮಾಧಾನ ಹೊರಹಾಕಿದರು. ಇದೀಗ ಅಂಪೈರ್ ಜೊತೆ ವಾಗ್ವಾದ ನಡೆಸುತ್ತಿರುವ ಪಾಕ್ ಆಟಗಾರ್ತಿಯರ ವಿಡಿಯೋ ವೈರಲ್ ಆಗಿದೆ.
ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತಂಡವು 50 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 221 ರನ್ ಕಲೆಹಾಕಿದರು. ಈ ಗುರಿಯನ್ನು ಬೆನ್ನತ್ತಿದ ಪಾಕಿಸ್ತಾನ್ ತಂಡ 36.3 ಓವರ್ಗಳಲ್ಲಿ 114 ರನ್ಗಳಿಗೆ ಆಲೌಟ್ ಆಗಿದೆ.
ಬಿಗ್ ಬಾಸ್ನಿಂದ ಹೊರ ಬರಲು ಅಶ್ವಿನಿ-ಜಾನ್ವಿ ಕಾರಣವಾದ್ರಾ? ಉತ್ತರಿಸಿದ ಸುಧಿ
ತುಮಕೂರಿನಲ್ಲಿ ಗೋಧಿ ಲಾರಿ ಪಲ್ಟಿ; ಬಿದ್ದ ಗೋಧಿ ಬಾಚಲು ಮುಗಿಬಿದ್ದ ಜನ
ಸೋಷಿಯಲ್ ಮೀಡಿಯಾದಲ್ಲಿ ಅತಿ ಹೆಚ್ಚು ವೀಕ್ಷಣೆ ಪಡೆದಿದ್ದ ವಿಡಿಯೋ ವೈರಲ್
ಕ್ರಾಂತಿ ಕಿಚ್ಚಿನ ಮಧ್ಯೆ ಖರ್ಗೆ ಭೇಟಿಯಾಗಿದ್ಯಾಕೆ? ಗುಟ್ಟುಬಿಚ್ಚಿಟ್ಟ ಡಿಕೆ

