ಹೊಸ ದೇಶದ ಪರ ಇನಿಂಗ್ಸ್ ಆರಂಭಿಸಿದ ರಾಸ್ ಟೇಲರ್
Oman vs Samoa, 1st Match: ರಾಸ್ ಟೇಲರ್ ಕಲೆಹಾಕಿದ 22 ರನ್ಗಳೊಂದಿಗೆ ಸಮೋವಾ ತಂಡವು 20 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 92 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಒಮಾನ್ ತಂಡವು 17 ಓವರ್ಗಳಲ್ಲಿ 95 ರನ್ ಗಳಿಸಿ ಐದು ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ.
ನ್ಯೂಝಿಲೆಂಡ್ ತಂಡದ ಮಾಜಿ ಆಟಗಾರ ರಾಸ್ ಟೇಲರ್ ಸೆಕೆಂಡ್ ಇನಿಂಗ್ಸ್ ಆರಂಭಿಸಿದ್ದಾರೆ. ಅದು ಕೂಡ ಹೊಸ ದೇಶದ ಪರ ಪಾದಾರ್ಪಣೆ ಮಾಡುವ ಮೂಲಕ ಎಂಬುದು ವಿಶೇಷ. ಅಂದರೆ ಕಿವೀಸ್ ಪರ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿರುವ ಟೇಲರ್, ಇದೀಗ ಸಮೋವಾ ದೇಶದ ಪರ ಹೊಸ ಇನಿಂಗ್ಸ್ ಆರಂಭಿಸಿದ್ದಾರೆ.
ಅದರಂತೆ ಟಿ20 ವಿಶ್ವಕಪ್ನ ಪೂರ್ವ ಏಷ್ಯಾ ಪೆಸಿಫಿಕ್ ಅರ್ಹತಾ ಪಂದ್ಯದಲ್ಲಿ ರಾಸ್ ಟೇಲರ್ ಸಮೋವಾ ಪರ ಕಣಕ್ಕಿಳಿದಿದ್ದಾರೆ. ಈ ಮೂಲಕ ಎರಡು ದೇಶಗಳ ಪರ ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ ಆಟಗಾರರ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ.
ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸಮೋವಾ ತಂಡವು ನಿರೀಕ್ಷಿತ ಪ್ರದರ್ಶನ ನೀಡಿರಲಿಲ್ಲ. ಅದರಲ್ಲೂ ಚೊಚ್ಚಲ ಪಂದ್ಯದಲ್ಲಿ ರಾಸ್ ಟೇಲರ್ ಕಮಾಲ್ ಮಾಡುವಲ್ಲಿ ವಿಫಲರಾದರು. 28 ಎಸೆತಗಳನ್ನು ಎದುರಿಸಿದ ಟೇಲರ್ 1 ಫೋರ್ನೊಂದಿಗೆ ಕೇವಲ 22 ರನ್ ಮಾತ್ರ ಕಲೆಹಾಕಿದ್ದರು.
ರಾಸ್ ಟೇಲರ್ ಕಲೆಹಾಕಿದ 22 ರನ್ಗಳೊಂದಿಗೆ ಸಮೋವಾ ತಂಡವು 20 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 92 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಒಮಾನ್ ತಂಡವು 17 ಓವರ್ಗಳಲ್ಲಿ 95 ರನ್ ಗಳಿಸಿ ಐದು ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ.
ಇದಕ್ಕೂ ಮುನ್ನ ರಾಸ್ ಟೇಲರ್ ನ್ಯೂಝಿಲೆಂಡ್ ಪರ 210 ಪಂದ್ಯಗಳನ್ನಾಡಿದ್ದರು. ಈ ವೇಳೆ 8890 ಒಟ್ಟು ರನ್ ಕಲೆಹಾಕಿದ್ದಾರೆ. ಇದೀಗ ಸಮೋವಾ ಪರ ಮೊದಲ ಪಂದ್ಯದಲ್ಲಿ 22 ರನ್ಗಳಿಸಿ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಸೆಕೆಂಡ್ ಇನಿಂಗ್ಸ್ ಆರಂಭಿಸಿದ್ದಾರೆ.
ಸಾಫ್ಟವೇರ್ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ

