ಬೆಂಗಳೂರು: ಕೇವಲ ನಾಲ್ಕು ನಿಮಿಷದಲ್ಲಿ 24 ಕೋಟಿ ರೂ. ಮೌಲ್ಯದ ಡ್ರಗ್ಸ್ ಪತ್ತೆ ಮಾಡಿದ ಶ್ವಾನಗಳು!
ಶ್ವಾನ ದಳದ ಸೂಕ್ಷ್ಮ ಕಾರ್ಯಾಚರಣೆಯಿಂದ ಬೃಹತ್ ಡ್ರಗ್ ಕಳ್ಳಸಾಗಾಟ ಪ್ರಕರಣವೊಂದು ಬೆಂಗಳೂರಿನಲ್ಲಿ ಭೇದಿಸಲ್ಪಟ್ಟಿದೆ. ಅಲ್ಲದೆ, ಬರೋಬ್ಬರಿ 24 ಕೋಟಿ ರೂ. ಮೌಲ್ಯದ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ. ಶ್ವಾನಗಳ ಸೂಕ್ಷ್ಮ ಸಂವೇದನೆಯ ಸೇವೆಗೆ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಶ್ವಾದ ದಳದ ಕಾರ್ಯಾಚರಣೆಯ ವಿಡಿಯೋ ಇಲ್ಲಿದೆ.
ಬೆಂಗಳೂರು, ಅಕ್ಟೋಬರ್ 9: ಬೆಂಗಳೂರಿನ ಚಾಮರಾಜಪೇಟೆಯ ಪೋಸ್ಟ್ ಆಫೀಸ್‌ನಲ್ಲಿ ಸಿಸಿಬಿ ಮತ್ತು ಕೊತ್ತನೂರು ಪೊಲೀಸರು ಶ್ವಾನ ದಳದ ನೆರವಿನಿಂದ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ 24 ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ. ವಿದೇಶದಿಂದ ಬಂದಿದ್ದ ಪಾರ್ಸೆಲ್‌ಗಳಲ್ಲಿ ಅಫೀಮು, ಎಂಡಿಎಂಎ ಕ್ರಿಸ್ಟಲ್ ಮತ್ತು ಹೈಡ್ರೋ ಗಾಂಜಾ ಸೇರಿ ಅಪಾರ ಪ್ರಮಾಣದ ಮಾದಕ ವಸ್ತುಗಳು ಅಡಗಿಸಲಾಗಿತ್ತು. ಪಾರ್ಸೆಲ್ ತೆರೆದು ನೋಡಲು ಕಾನೂನಿ ಅಡಿ ಅನುಮತಿ ಇರದ ಕಾರಣ, ಶ್ವಾನ ದಳದ ನೆರವು ಪಡೆಯಲಾಯಿತು. ಶ್ವಾನಗಳಾದ ರಾಮು ಮತ್ತು ಪ್ರಿನ್ಸ್ ಕೇವಲ ನಾಲ್ಕು ನಿಮಿಷಗಳಲ್ಲಿ ಡ್ರಗ್ಸ್ ಪತ್ತೆ ಹಚ್ಚಿದವು. ಶ್ವಾನಗಳ ಚಾಕಚಕತ್ಯೆಯಿಂದ ಪೊಲೀಸರಿಗೆ ಭಾರೀ ಡ್ರಗ್ಸ್ ಮಾಲು ಪತ್ತೆ ಸಾಧ್ಯವಾಯಿತು.
ಸಾಕು ಪ್ರಾಣಿಗಳ ಆಹಾರದ ಪ್ಯಾಕೆಟ್‌ನಂತೆ ಪ್ಯಾಕ್ ಮಾಡಲಾಗಿದ್ದ ಡ್ರಗ್ಸ್ ಪಾರ್ಸೆಲ್ ಥೈಲ್ಯಾಂಡ್‌ನಿಂದ ಬಂದಿದ್ದು, ಅಂತರರಾಷ್ಟ್ರೀಯ ಮಟ್ಟದ ಮಾದಕ ವಸ್ತು ಕಳ್ಳಸಾಗಣೆ ಜಾಲದ ಸಂಚು ಇರಬಹುದು ಎಂದು ಶಂಕಿಸಲಾಗಿದೆ. ಈ ಪ್ರಕರಣದ ತನಿಖೆ ಮುಂದುವರಿಸಿರುವ ಸಿಸಿಬಿ ಅಧಿಕಾರಿಗಳು, ಪಾರ್ಸೆಲ್ ಕಳುಹಿಸಿದವರ ಹಾಗೂ ಸ್ವೀಕರಿಸಲು ಉದ್ದೇಶಿಸಿದ್ದವರ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದಾರೆ.
ವರದಿ ಮತ್ತು ವಿಡಿಯೋ: ವಿಕಾಸ್, ಟಿವಿ9 ಬೆಂಗಳೂರು
ಸಾಫ್ಟವೇರ್ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ

