ಪೃಥ್ವಿ ಶಾ – ಮುಶೀರ್ ಖಾನ್ ಜಗಳಕ್ಕೆ ಇದುವೇ ಅಸಲಿ ಕಾರಣ..!
Prithvi Shaw fight with Musheer Khan: ಪೃಥ್ವಿ ಶಾ ವಿಕೆಟ್ ಸಿಗುತ್ತಿದ್ದಂತೆ ಮುಶೀರ್ ಖಾನ್ 'ಥ್ಯಾಂಕ್ಯೂ' ಎಂದಿದ್ದರು. ಈ ಮಾತಿನಿಂದ ತಾಳ್ಮೆ ಕಳೆದುಕೊಂಡ ಪೃಥ್ವಿ ಶಾ ಯುವ ಆಟಗಾರನತ್ತ ಬ್ಯಾಟ್ ಬೀಸಿದ್ದರು. ಅಲ್ಲದೆ ಜಗಳಕ್ಕಿಳಿಯುವ ಮೂಲಕ ವಿವಾದವನ್ನು ಮೈ ಮೇಲೆ ಎಳೆದುಕೊಂಡಿದ್ದರು.
ಎಂಸಿಎ ಸ್ಟೇಡಿಯಂನಲ್ಲಿ ನಡೆದ ಮಹಾರಾಷ್ಟ್ರ ಹಾಗೂ ಮುಂಬೈ ತಂಡಗಳ ನಡುವಣ ಅಭ್ಯಾಸ ಪಂದ್ಯದ ವೇಳೆ ಪೃಥ್ವಿ ಶಾ ಹಾಗೂ ಮುಶೀರ್ ಖಾನ್ ನಡುವೆ ಮಾತಿನ ಚಕಮಕಿ ನಡೆದಿತ್ತು. ಈ ಪಂದ್ಯದಲ್ಲಿ ಮಹಾರಾಷ್ಟ್ರ ಪರ ಕಣಕ್ಕಿಳಿದಿದ್ದ ಪೃಥ್ವಿ ಶಾ 220 ಎಸೆತಗಳಲ್ಲಿ 22 ಫೋರ್ ಹಾಗೂ 3 ಸಿಕ್ಸರ್ಗಳೊಂದಿಗೆ 181 ರನ್ ಬಾರಿಸಿದ್ದರು. ಈ ಹಂತದಲ್ಲಿ ದಾಳಿಗಿಳಿದ ಸರ್ಫರಾಝ್ ಖಾನ್ ಸಹೋದರ ಮುಶೀರ್ ಖಾನ್ ಪೃಥ್ವಿ ಶಾ ವಿಕೆಟ್ ಕಬಳಿಸಿದ್ದರು.
ಪ್ರಮುಖ ಆಟಗಾರನ ವಿಕೆಟ್ ಸಿಗುತ್ತಿದ್ದಂತೆ ಮುಶೀರ್ ಖಾನ್ ಸಂಭ್ರಮಿಸಿದ್ದಾರೆ. ಇದರಿಂದ ಕೋಪಗೊಂಡ ಪೃಥ್ವಿ ಶಾ ಯುವ ಆಟಗಾರನೊಂದಿಗೆ ವಾಗ್ವಾದಕ್ಕಿಳಿದಿದ್ದರು. ಹೀಗೆ ಏಕಾಏಕಿ ಜಗಳಕ್ಕಿಳಿಯಲು ಕಾರಣವೇನು ಎಂಬುದು ಇದೀಗ ಬಹಿರಂಗವಾಗಿದೆ.
ಪೃಥ್ವಿ ಶಾ ವಿಕೆಟ್ ಸಿಗುತ್ತಿದ್ದಂತೆ ಮುಶೀರ್ ಖಾನ್ ‘ಥ್ಯಾಂಕ್ಯೂ’ ಎಂದಿದ್ದರು. ಈ ಮಾತಿನಿಂದ ತಾಳ್ಮೆ ಕಳೆದುಕೊಂಡ ಪೃಥ್ವಿ ಶಾ ಯುವ ಆಟಗಾರನತ್ತ ಬ್ಯಾಟ್ ಬೀಸಿದ್ದರು. ಅಲ್ಲದೆ ಜಗಳಕ್ಕಿಳಿಯುವ ಮೂಲಕ ವಿವಾದವನ್ನು ಮೈ ಮೇಲೆ ಎಳೆದುಕೊಂಡಿದ್ದರು. ಇದೀಗ ಈ ವಿಡಿಯೋ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಅಭ್ಯಾಸ ಪಂದ್ಯದಲ್ಲೇ ಆಕ್ರಮಣಕಾರಿಯಾಗಿ ವರ್ತಿಸಿರುವ ಪೃಥ್ವಿ ವಿರುದ್ಧ ಭಾರೀ ಆಕ್ರೋಶಗಳು ವ್ಯಕ್ತವಾಗುತ್ತಿದೆ.

