ಜೈಲಲ್ಲಿ ರೌಡಿಶೀಟರ್ ಅದ್ದೂರಿ ಬರ್ತಡೇ: ಫೋಟೋಗೆ ಪೋಸ್ ಕೊಟ್ಟು ಇನ್ಸ್ಟಾಗ್ರಾಮ್ನಲ್ಲಿ ಶೇರ್, ರೌಡಿ ಮೊಬೈಲ್ ಜಪ್ತಿ
ಕಿರಣ್ ಅಲಿಯಾಸ್ ತಮಟೆ ಎನ್ನುವ ರೌಡಿ ಶೀಟರ್ ಜೈಲಿನಲ್ಲಿದ್ದುಕೊಂಡೆ ಬರ್ತಡೇಯನ್ನ ಅದ್ದೂರಿಯಾಗಿ ಆಚರಿಸಿಕೊಂಡಿದ್ದಾನೆ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹರಿಬಿಟ್ಟಿದ್ದಾನೆ.
ರಾಮನಗರ: ಕಿರಣ್ ಕುಮಾರ್ ಅಲಿಯಾಸ್ ತಮಟೆ ಹಲವಾರು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಇತನನ್ನ ಗೂಂಡಾ ಕಾಯ್ದೆ ಅಡಿ ಪೋಲೀಸರು ಬಂಧನ ಮಾಡಿ ರಾಮನಗರ ಜೈಲಿನಲ್ಲಿಟ್ಟಿದ್ದರು. ಜೈಲಿನಲ್ಲಿದ್ದ ಇತನ ಬರ್ತಡೆಯನ್ನ ಜನವರಿ 14 ರಂದು ಅದ್ದೂರಿಯಾಗಿ ಆಚರಿಸಲಾಗಿದೆ. ವಿವಿಧ ಹೂವುಗಳಿಂದ ಹ್ಯಾಪಿ ಬರ್ತಡೆ ಕಿರಣ್ ಅಣ್ಣ ಎಂದು ಬರೆಯಲಾಗಿದ್ದು, ದೊಡ್ಡದಾದ ಹಾರವನ್ನ ಹಾಕಿ ಆತನೊಂದಿಗೆ ಇತರ ಜೈದಿಗಳು ಪೋಸ್ ಕೊಟ್ಟಿದ್ದಾರೆ. ಆ ಫೋಟೋವನ್ನ ಕಿರಣ್ ತನ್ನ ಇನ್ಸ್ಟಾಗ್ರಾಮ್ಲ್ಲಿ ಹಂಚಿಕೊಂಡಿದ್ದಾನೆ. ಈ ವಿಚಾರ ತಿಳಿಯುತ್ತಿದ್ದಂತೆ ರಾಮನಗರ ಎಸ್ಪಿ ಸಂತೋಷ್ ಬಾಬು ನೇತೃತ್ವದಲ್ಲಿ ರೇಡ್ ಮಾಡಿ ಕಿರಣ್ ಅಲಿಯಾಸ್ ತಮಟೆ ಉಪಯೋಗಿಸುತ್ತಿದ್ದ 2 ಮೊಬೈಲ್ ಅನ್ನು ವಶಕ್ಕೆ ಪಡೆದುಕೊಂಡು ಕಿರಣ್, ಕಾರ್ತೀಕ್, ಲೋಕೇಶ್, ವೇಣು ಎಂಬುವವರ ವಿರುದ್ದ ಕೇಸ್ ದಾಖಲು ಮಾಡಲಾಗಿದೆ.
ಇನ್ನಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ