ಬಳ್ಳಾರಿ: ಪವರ್ ಸ್ಟಾರ್ ದಿವಂಗತ ಪುನೀತ್ ರಾಜ್ ಕುಮಾರ್ (Puneeth Rajkumar) ಅವರಿಗೆ ಬಳ್ಳಾರಿ (Ballari) ಜಿಲ್ಲೆಯ ಮೇಲೆ ಜಾಸ್ತಿ ಪ್ರೀತಿಯಿತ್ತು ಮತ್ತು ಅಲ್ಲಿನ ಜನತೆಯೊಂದಿಗೆ ಅವಿನಾಭಾವ ಸಂಬಂಧ ಹೊಂದಿದರೆನ್ನುವುದು ಕನ್ನಡಿಗರಿಗೆ ಗೊತ್ತಿರುವ ವಿಷಯವೇ. ಅವರ ಸ್ಮರಣಾರ್ಥ ಬಳ್ಳಾರಿ ನಗರದ ಜಿಲ್ಲಾ ಕ್ರೀಡಾಂಗಣದ ಬಳಿ 23-ಅಡಿ ಎತ್ತರದ ಪುತ್ಥಳಿಯನ್ನು ನಿರ್ಮಿಸಲಾಗಿದೆ. ಜಿಲ್ಲೆಯ ಖ್ಯಾತ ಶಿಲ್ಪಿ ಜೀವನ್ (Jeevan) ಅವರು ಪುತ್ಥಳಿಯನ್ನು ತಯಾರಿಸಿದ್ದು ಜನೆವರಿ 21 ರಂದು ನಡೆಯುವ ಬಳ್ಳಾರಿ ಉತ್ಸವದ ಸಂದರ್ಭದಲ್ಲಿ ಅದನ್ನು ಲೋಕಾರ್ಪಣೆ ಮಾಡಲಾಗುವುದು ಎಂಬ ಮಾಹಿತಿ ಲಭ್ಯವಾಗಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.