ಜೈಲಲ್ಲಿ ರೌಡಿಶೀಟರ್ ಅದ್ದೂರಿ ಬರ್ತಡೇ​: ಫೋಟೋಗೆ ಪೋಸ್​ ಕೊಟ್ಟು ಇನ್​ಸ್ಟಾಗ್ರಾಮ್​ನಲ್ಲಿ ಶೇರ್​, ರೌಡಿ ಮೊಬೈಲ್​ ಜಪ್ತಿ

TV9kannada Web Team

TV9kannada Web Team | Edited By: Kiran Hanumant Madar

Updated on: Jan 18, 2023 | 1:11 PM

ಕಿರಣ್​ ಅಲಿಯಾಸ್​ ತಮಟೆ ಎನ್ನುವ ರೌಡಿ ಶೀಟರ್​ ಜೈಲಿನಲ್ಲಿದ್ದುಕೊಂಡೆ ಬರ್ತಡೇಯನ್ನ ಅದ್ದೂರಿಯಾಗಿ ಆಚರಿಸಿಕೊಂಡಿದ್ದಾನೆ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹರಿಬಿಟ್ಟಿದ್ದಾನೆ.

ರಾಮನಗರ: ಕಿರಣ್​ ಕುಮಾರ್​ ಅಲಿಯಾಸ್ ತಮಟೆ ಹಲವಾರು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಇತನನ್ನ ಗೂಂಡಾ ಕಾಯ್ದೆ ಅಡಿ ಪೋಲೀಸರು ಬಂಧನ ಮಾಡಿ ರಾಮನಗರ ಜೈಲಿನಲ್ಲಿಟ್ಟಿದ್ದರು. ಜೈಲಿನಲ್ಲಿದ್ದ ಇತನ ಬರ್ತಡೆಯನ್ನ ಜನವರಿ 14 ರಂದು ಅದ್ದೂರಿಯಾಗಿ ಆಚರಿಸಲಾಗಿದೆ. ವಿವಿಧ ಹೂವುಗಳಿಂದ ಹ್ಯಾಪಿ ಬರ್ತಡೆ ಕಿರಣ್​ ಅಣ್ಣ ಎಂದು ಬರೆಯಲಾಗಿದ್ದು, ದೊಡ್ಡದಾದ ಹಾರವನ್ನ ಹಾಕಿ ಆತನೊಂದಿಗೆ ಇತರ ಜೈದಿಗಳು ಪೋಸ್​ ಕೊಟ್ಟಿದ್ದಾರೆ. ಆ ಫೋಟೋವನ್ನ ಕಿರಣ್​ ತನ್ನ ಇನ್​ಸ್ಟಾಗ್ರಾಮ್​ಲ್ಲಿ ಹಂಚಿಕೊಂಡಿದ್ದಾನೆ. ಈ ವಿಚಾರ ತಿಳಿಯುತ್ತಿದ್ದಂತೆ ರಾಮನಗರ ಎಸ್​ಪಿ ಸಂತೋಷ್​ ಬಾಬು ನೇತೃತ್ವದಲ್ಲಿ ರೇಡ್​ ಮಾಡಿ ಕಿರಣ್ ಅಲಿಯಾಸ್​ ತಮಟೆ ಉಪಯೋಗಿಸುತ್ತಿದ್ದ 2 ಮೊಬೈಲ್​ ಅನ್ನು ವಶಕ್ಕೆ ಪಡೆದುಕೊಂಡು ಕಿರಣ್​, ಕಾರ್ತೀಕ್​, ಲೋಕೇಶ್​, ವೇಣು ಎಂಬುವವರ ವಿರುದ್ದ ಕೇಸ್​ ದಾಖಲು ಮಾಡಲಾಗಿದೆ.

ಇನ್ನಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on

Click on your DTH Provider to Add TV9 Kannada