ಬಾಗಲಕೋಟೆ: ಪ್ರದೇಶದ ಹಿರಿಯ ಕಾಂಗ್ರೆಸ್ ನಾಯಕ ಬಿಬಿ ಚಿಮ್ಮನಕಟ್ಟಿಯಿಂದ ದೀಪ ಬೆಳಗಿಸಿದ ಡಿಕೆ ಶಿವಕುಮಾರ
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ, ಚಿಮ್ಮನಕಟ್ಟಿ ಅವರಿಂದ ಕಾಂಗ್ರೆಸ್ ಜ್ಯೋತಿಯನ್ನು ಬೆಳಗಿಸಿದ್ದು ಪ್ರಾಯಶಃ ಈ ಮಾತಿಗೆ ಸಾಕ್ಷಿಯಾಗಿತ್ತು.
ಬಾಗಲಕೋಟೆ: ಕಾಂಗ್ರೆಸ್ ಪಕ್ಷದ ಪ್ರಜಾಧ್ವನಿಯಾತ್ರೆ ಬುಧವಾರದಂದು ಬಾಗಲಕೋಟೆ ತಲುಪಿತು. ಜಿಲ್ಲೆಯ ಬಾದಾಮಿ ಕ್ಷೇತ್ರದಿಂದ ಈ ಬಾರಿ ಹಾಲಿ ಶಾಸಕ ಸಿದ್ದರಾಮಯ್ಯ (Siddaramaiah) ಸ್ಪರ್ಧಿಸದಿರುವುದು ಖಚಿತವಾಗಿದೆ. ಹಾಗಾಗಿ, ಕಾಂಗ್ರೆಸ್ ಪಕ್ಷ ಇಲ್ಲಿಂದ ಪಕ್ಷದ ಹಳೇ ಹುಲಿ ಬಿ ಬಿ ಚಿಮ್ಮನಕಟ್ಟಿ (BB Chimmankatti) ಅವರಿಗೆ ಟಿಕೆಟ್ ನೀಡುವ ನಿರ್ಧಾರ ಮಾಡಿಕೊಂಡಂತಿದೆ. ಬಾಗಲಕೋಟೆಯಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ (DK Shivakumar) ಅವರು ಚಿಮ್ಮನಕಟ್ಟಿ ಅವರಿಂದ ಕಾಂಗ್ರೆಸ್ ಜ್ಯೋತಿಯನ್ನು ಬೆಳಗಿಸಿದ್ದು ಪ್ರಾಯಶಃ ಈ ಮಾತಿಗೆ ಸಾಕ್ಷಿಯಾಗಿತ್ತು. ವೇದಿಕೆಯ ಮೇಲೆ ಸಿದ್ದರಾಮಯ್ಯ, ಬಿಕೆ ಹರಿಪ್ರಸಾದ್ ರಂದೀಪ್ ಸಿಂಗ್ ಸುರ್ಜೆವಾಲ ಮತ್ತು ಇನ್ನೂ ಅನೇಕ ನಾಯಕರು ಉಪಸ್ಥಿತರಿದ್ದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Latest Videos