ಜೈಲಿನೊಳಗೆ ಮೊಬೈಲ್ ಬಳಕೆ; ಹಾಸನ ಜಿಲ್ಲಾ ಕೇಂದ್ರ ಕಾರಾಗೃಹದ ಮೇಲೆ ಪೊಲೀಸರ ದಾಳಿ
ರಾಜ್ಯದ ಕೆಲವು ಕಾರಾಗೃಹಗಳಲ್ಲಿ ಕೈದಿಗಳು ಮೋಜು ಮಸ್ತಿಯಲ್ಲಿ ತೊಡಗಿಕೊಂಡ ಆರೋಪಗಳು ಕೇಳಿಬರುತ್ತಿವೆ. ಹೀಗಾಗಿ ಪೊಲೀಸರು ದಾಳಿ ನಡೆಸಿ ಪರಿಶೀಲನೆ ನಡೆಸುವುದರ ಜೊತೆಗೆ ಕೈದಿಗಳಿಗೆ ಬಿಸಿ ಮುಟ್ಟಿಸುತ್ತಿದ್ದಾರೆ.
ಹಾಸನ: ಜೈಲಿನೊಳಗೆ ಮೊಬೈಲ್ ಬಳಕೆ ಮಾಡುತ್ತಿರುವ ಆರೋಪ ಹಿನ್ನಲೆ ಜಿಲ್ಲಾ ಕೇಂದ್ರ ಕಾರಾಗೃಹದ (Hassan district central jail) ಮೇಲೆ ಪೊಲೀಸರು ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ. ಎಎಸ್ಪಿ ತಮ್ಮಯ್ಯ, ಡಿವೈಎಸ್ಪಿ ಉದಯಭಾಸ್ಕರ್ ನೇತೃತ್ವದಲ್ಲಿ 80ಕ್ಕೂ ಹೆಚ್ಚು ಪೊಲೀಸರು ಕಾರಾಗೃಹದ ಮೇಲೆ ದಾಳಿ ನಡೆಸಿದ್ದು, ವಿಚಾರಣಾಧೀನ ಕೈದಿಗಳ ಕೊಠಡಿಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಮಾದಕ ವಸ್ತುಗಳ ಸೇವಿಸುತ್ತಿರುವ ಹಾಗೂ ಮೊಬೈಲ್ ಫೋನ್ಗಳ ಬಳಕೆ ಬಗ್ಗೆ ಮಾಹಿತಿ ಲಭ್ಯವಾದ ಹಿನ್ನಲೆ ಈ ದಾಳಿ (Police Raid) ನಡೆಸಲಾಗಿದೆ. ಈ ಹಿಂದೆ ಆರೋಪಿ ಕಿರಣ್ ಎಂಬಾತ ಜೈಲಿನಲ್ಲಿ ಹುಟ್ಟುಹಬ್ಬ ಆಚರಣೆ ಮಾಡಿಕೊಂಡ ಹಿನ್ನಲೆ ರಾಮನಗರ ಕಾರಾಗೃಹದ ಮೇಲೆ ಪೊಲೀಸರ ದಾಳಿ ನಡೆದಿತ್ತು. ವಿವಿಧ ಹೂವುಗಳಿಂದ ಹ್ಯಾಪಿ ಬರ್ತಡೆ ಕಿರಣ್ ಅಣ್ಣ ಎಂದು ಬರೆಯಲಾಗಿದ್ದು, ದೊಡ್ಡದಾದ ಹಾರವನ್ನ ಹಾಕಿ ಆತನೊಂದಿಗೆ ಇತರ ಜೈದಿಗಳು ಪೋಸ್ ಕೊಟ್ಟಿದ್ದರು.
ಮತ್ತಷ್ಟು ವಿಡಿಯೋ ಸ್ಟೋರಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ
Published on: Jan 19, 2023 09:05 AM
Latest Videos