ರೈಲಿನಡಿ ಬಿದ್ದು ಸಾಯುತ್ತಿದ್ದ ಮಹಿಳೆಯ ಜೀವ ಕಾಪಾಡಿದ ಆರ್​ಪಿಎಫ್​ ಸಿಬ್ಬಂದಿ

Updated on: Nov 10, 2026 | 3:10 PM

ಜೈಪುರ-ಉದಯಪುರ ರೈಲು ಕಿಶನ್‌ಗಢ ನಿಲ್ದಾಣ ತಲುಪಿದಾಗ, ಸೋನು ಕುಮಾವತ್ ಎಂಬ ಮಹಿಳೆ ರೈಲಿನಿಂದ ಇಳಿಯಲು ಪ್ರಯತ್ನಿಸಿದರು. ಆದರೆ, ಆಕೆಯ ಕಾಲು ಆಕಸ್ಮಿಕವಾಗಿ ಪ್ಲಾಟ್‌ಫಾರ್ಮ್ ಮತ್ತು ರೈಲಿನ ಫುಟ್‌ಬೋರ್ಡ್ ನಡುವೆ ಸಿಲುಕಿಕೊಂಡಿತು. ಪರಿಣಾಮವಾಗಿ, ಆಕೆಯನ್ನು ರೈಲಿನೊಂದಿಗೆ ಸ್ವಲ್ಪ ದೂರದವರೆಗೆ ಎಳೆದುಕೊಂಡು ಹೋಗಿ ಕಿರುಚಲು ಪ್ರಾರಂಭಿಸಿದರು. ಇದು ನಿಲ್ದಾಣದಲ್ಲಿದ್ದ ಪ್ರಯಾಣಿಕರಲ್ಲಿ ತೀವ್ರ ಆತಂಕವನ್ನುಂಟುಮಾಡಿತು. ಅಲ್ಲಿ ಕರ್ತವ್ಯದಲ್ಲಿದ್ದ ಆರ್‌ಪಿಎಫ್ ಕಾನ್‌ಸ್ಟೆಬಲ್ ನಿರಂಜನ್ ಲಾಲ್ ಪರಿಸ್ಥಿತಿಯನ್ನು ಗಮನಿಸಿ ಯಾವುದೇ ವಿಳಂಬವಿಲ್ಲದೆ ಸ್ಥಳಕ್ಕೆ ಧಾವಿಸಿದರು.

ಜೈಪುರ, ನವೆಂಬರ್ 10: ರಾಜಸ್ಥಾನದ ಕಿಶನ್‌ಗಢ ರೈಲು ನಿಲ್ದಾಣದಲ್ಲಿ ಒಂದು ದೊಡ್ಡ ಅಪಘಾತವು ಕೂದಲೆಳೆಯ ಅಂತರದಲ್ಲಿ ತಪ್ಪಿದೆ. ರೈಲಿನಿಂದ ಇಳಿಯುವಾಗ ಆಕಸ್ಮಿಕವಾಗಿ ಮಹಿಳೆಯ ಕಾಲು ಪ್ಲಾಟ್‌ಫಾರ್ಮ್ ಮತ್ತು ಫುಟ್‌ಬೋರ್ಡ್ ನಡುವೆ ಸಿಲುಕಿಕೊಂಡು ರೈಲು ಸ್ವಲ್ಪ ದೂರ ಎಳೆದೊಯ್ದಿತು. ಆ ಸಮಯದಲ್ಲಿ ಕರ್ತವ್ಯದಲ್ಲಿದ್ದ ಆರ್‌ಪಿಎಫ್ ಕಾನ್‌ಸ್ಟೆಬಲ್ ನಿರಂಜನ್ ಲಾಲ್ ಅಸಾಧಾರಣ ಧೈರ್ಯ ಮತ್ತು ಸಮಯಪ್ರಜ್ಞೆಯಿಂದ ಆಕೆಯ ಜೀವವನ್ನು ಉಳಿಸಿದರು.

ಜೈಪುರ-ಉದಯಪುರ ರೈಲು ಕಿಶನ್‌ಗಢ ನಿಲ್ದಾಣ ತಲುಪಿದಾಗ, ಸೋನು ಕುಮಾವತ್ ಎಂಬ ಮಹಿಳೆ ರೈಲಿನಿಂದ ಇಳಿಯಲು ಪ್ರಯತ್ನಿಸಿದರು. ಆದರೆ, ಆಕೆಯ ಕಾಲು ಆಕಸ್ಮಿಕವಾಗಿ ಪ್ಲಾಟ್‌ಫಾರ್ಮ್ ಮತ್ತು ರೈಲಿನ ಫುಟ್‌ಬೋರ್ಡ್ ನಡುವೆ ಸಿಲುಕಿಕೊಂಡಿತು. ಪರಿಣಾಮವಾಗಿ, ಆಕೆಯನ್ನು ರೈಲಿನೊಂದಿಗೆ ಸ್ವಲ್ಪ ದೂರದವರೆಗೆ ಎಳೆದುಕೊಂಡು ಹೋಗಿ ಕಿರುಚಲು ಪ್ರಾರಂಭಿಸಿದರು. ಇದು ನಿಲ್ದಾಣದಲ್ಲಿದ್ದ ಪ್ರಯಾಣಿಕರಲ್ಲಿ ತೀವ್ರ ಆತಂಕವನ್ನುಂಟುಮಾಡಿತು. ಅಲ್ಲಿ ಕರ್ತವ್ಯದಲ್ಲಿದ್ದ ಆರ್‌ಪಿಎಫ್ ಕಾನ್‌ಸ್ಟೆಬಲ್ ನಿರಂಜನ್ ಲಾಲ್ ಪರಿಸ್ಥಿತಿಯನ್ನು ಗಮನಿಸಿ ಯಾವುದೇ ವಿಳಂಬವಿಲ್ಲದೆ ಸ್ಥಳಕ್ಕೆ ಧಾವಿಸಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಸುಷ್ಮಾ ಚಕ್ರೆ

ಸುಷ್ಮಾ ಚಕ್ರೆ ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವರು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದಾರೆ.

Read More