ರಾಜ್ಯದ ಹಲವೆಡೆ RSS ಪಥಸಂಚಲನಕ್ಕೆ ಸಿದ್ಧತೆ: ಕೆಲವೆಡೆ ಷರತ್ತುಬದ್ಧ ಅನುಮತಿ; ಕೆಲವೆಡೆ ನಕಾರ

Updated on: Oct 24, 2026 | 8:55 PM

ರಾಜ್ಯದ ಹಲವೆಡೆ RSS ಪಥಸಂಚಲನಕ್ಕೆ ಸಿದ್ಧತೆ ನಡೆದಿರುವ ಬೆನ್ನಲ್ಲೇ ಅನುಮತಿ ವಿವಾದ ತಾರಕಕ್ಕೇರಿದೆ. ಕೆಲವೆಡೆ ಷರತ್ತುಬದ್ಧ ಅನುಮತಿ ದೊರೆತಿದ್ದರೆ, ಹಲವೆಡೆ ನಿರಾಕರಿಸಲಾಗಿದೆ. ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅನುಮತಿ ಪಡೆಯುವಂತೆ ಎಚ್ಚರಿಸಿದ್ದರೆ, ವಿಪಕ್ಷ ನಾಯಕ ಆರ್. ಅಶೋಕ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು, ಅಕ್ಟೋಬರ್​​ 24: ರಾಜ್ಯದ ಹಲವು ಜಿಲ್ಲೆಗಳಲ್ಲಿ RSS ಪಥಸಂಚಲನಕ್ಕೆ ಸಿದ್ಧತೆ ನಡೆಯುತ್ತಿದ್ದು, ಪೊಲೀಸ್ ಅನುಮತಿ ಕುರಿತು ರಾಜಕೀಯ ವಾಗ್ವಾದ ತಾರಕಕ್ಕೇರಿದೆ. ಕೆಲವು ಕಡೆ ಷರತ್ತುಬದ್ಧ ಅನುಮತಿ ನೀಡಿದರೆ, ಇನ್ನು ಕೆಲವು ಕಡೆ ಪಥಸಂಚಲನಕ್ಕೆ ಅವಕಾಶ ನೀಡಿಲ್ಲ. ಈ ಕುರಿತಾಗಿ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯಿಸಿದ್ದು, ‘ಮಾಹಿತಿ ನೀಡಿದರೆ ಸಾಕಾಗುವುದಿಲ್ಲ, ಪಥಸಂಚಲನಕ್ಕೆ ಅನುಮತಿ ಪಡೆಯಬೇಕು. ಪೊಲೀಸರು ಯಾರಿಗೂ ಅಧೀನರಲ್ಲ’ ಎಂದಿದ್ದಾರೆ. ಇನ್ನು ಇದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ವಿಪಕ್ಷ ನಾಯಕ ಆರ್. ಅಶೋಕ್, ‘RSS ಟೀಕಿಸದಿದ್ದರೆ ಖರ್ಗೆ ಅವರಿಗೆ ಅನ್ನ ಜೀರ್ಣವಾಗುವುದಿಲ್ಲ. ತಮ್ಮ ತಂದೆಯವರು ಗೃಹ ಸಚಿವರಾಗಿದ್ದಾಗ ಏಕೆ ಪಥಸಂಚಲನ ನಿಲ್ಲಿಸಲಿಲ್ಲ’ ಎಂದು ಪ್ರಶ್ನಿಸಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Loading...
Unable to load recommendations.
Follow Us
ಗಂಗಾಧರ​ ಬ. ಸಾಬೋಜಿ

ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ರಬಕವಿ ನನ್ನೂರು. ಡಿಗ್ರಿ ಬಳಿಕ ಮನಸ್ಸು ವಾಲಿದ್ದು ಮಾಧ್ಯಮ ಕ್ಷೇತ್ರದ ಕಡೆ. ಹಾಗಾಗಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂಎ ಪತ್ರಿಕೋದ್ಯಮ ಪದವಿ ಮಾಡಿದೆ. ಆ ಸಂದರ್ಭದಲ್ಲಿಯೇ ಲೋಕಲ್ ಚಾನೆಲ್​ನಲ್ಲಿ ಸುದ್ದಿ ಬರವಣಿಗೆ, ಆ್ಯಂಕರಿಂಗ್​, ವೈಯಿಸ್​ ಓವರ್​, ಎಡಿಟಿಂಗ್​ ಕಲಿಕೆ. ಬಳಿಕ ಟಿವಿ6 ಸುದ್ದಿ ವಾಹಿನಿಯಲ್ಲಿ ಇಂಟರ್ನ್‌ಶಿಪ್. ನಂತರ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಬೋಧನಾ ಸಹಾಯಕನಾಗಿ ನನ್ನ ಜ್ಞಾನವನ್ನು ಇತತರಿಗೆ ಹಂಚುವ ಕೆಲಸ. ಇದೀಗ ‘ಉತ್ತಮ ಸಮಾಜಕ್ಕಾಗಿ’ ನನ್ನ ಕಾಯಕ. ಓದು, ಬರವಣಿಗೆ, ಸಿನಿಮಾ ನನ್ನ ಆಸಕ್ತಿ.

Read More