ಕೆ ಅರ್ ಪೇಟೆ ಆರೆಸ್ಸೆಸ್ ಕಾರ್ಯಕರ್ತರು ಸಿದ್ದರಾಮಯ್ಯನವರಿಗೆ ಚೆಡ್ಡಿ ಕಳಿಸುವ ಅಭಿಯಾನ ಮುಂದುವರಿಸಿದ್ದಾರೆ
ಬಾಕ್ಸ್ಗಳ ಮೇಲೆ ಸಿದ್ದರಾಮಯ್ಯನವರ ಅಡ್ರೆಸ್ ಬರೆದಿರುವುದನ್ನೂ ನೀವು ಕಾಣಬಹುದು. ಚೆಡ್ಡಿಗಳನ್ನು ಸಂಗ್ರಹಿಸುವಾಗ ಕಾರ್ಯಕರ್ತರು ಭಾರತ್ ಮಾತಾ ಕೀ ಜೈ ಅಂತ ಘೋಷಣೆಯನ್ನೂ ಕೂಗುತ್ತಿದ್ದಾರೆ.
ಕೆಅರ್ ಪೇಟೆ: ಮಂಡ್ಯದ ಕೆ ಅರ್ ಪೇಟೆಯ ಆರೆಸ್ಸೆಸ್ ಕಾರ್ಯಕರ್ತರಿಂದ (RSS Workers) ಸಿದ್ದರಾಮಯ್ಯನವರಿಗೆ (Siddaramaiah) ಚೆಡ್ಡಿ ಕಳಿಸುವ ಅಭಿಯಾನ ಎರಡನೇ ದಿನವೂ ಮುಂದುವರಿದಿದೆ. ಕೆ ಆರ್ ಪೇಟೆಯ (KR Pete) ಬೀದಿ ಬೀದಿಗಳಲ್ಲಿ ತಿರುಗುತ್ತಾ ಕಾರ್ಯಕರ್ತರು ಮನೆಗಳಲ್ಲಿ ಉಪಯೋಗಿಸಲು ಬಾರದ ಹಳೆಯ ಮತ್ತು ಹರಿದಿರುವ ಚೆಡ್ಡಿಗಳನ್ನು ಕಾರ್ಟನ್ ಗಳಲ್ಲಿ ಸಂಗ್ರಹಿಸುತ್ತಿದ್ದಾರೆ. ಬಾಕ್ಸ್ಗಳ ಮೇಲೆ ಸಿದ್ದರಾಮಯ್ಯನವರ ಅಡ್ರೆಸ್ ಬರೆದಿರುವುದನ್ನೂ ನೀವು ಕಾಣಬಹುದು. ಚೆಡ್ಡಿಗಳನ್ನು ಸಂಗ್ರಹಿಸುವಾಗ ಕಾರ್ಯಕರ್ತರು ಭಾರತ್ ಮಾತಾ ಕೀ ಜೈ ಅಂತ ಘೋಷಣೆಯನ್ನೂ ಕೂಗುತ್ತಿದ್ದಾರೆ.
ಮಾಜಿ ಮುಖ್ಯಮಂತ್ರಿಗಳು ಆರೆಸ್ಸೆಸ್ ಕಾರ್ಯಕರ್ತರ ಚೆಡ್ಡಿ ಸಂಗ್ರಹ ಅಭಿಯಾನಕ್ಕೆ ಇನ್ನೂ ಪ್ರತಿಕ್ರಿಯೆ ನೀಡಿಲ್ಲ.
ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.