ತುಮಕೂರು: ಮೃತನೊಬ್ಬನ ಅಂತ್ಯಕ್ರಿಯೆ ನಡೆಸಲು ಜಾಗವಿಲ್ಲದ ಕಾರಣ ಕುಟುಂಬಸ್ಥರು ಶವವನ್ನು ರಸ್ತೆ ಮೇಲಿಟ್ಟು ಪ್ರತಿಭಟನೆ ನಡೆಸಿದರು

ತುಮಕೂರು: ಮೃತನೊಬ್ಬನ ಅಂತ್ಯಕ್ರಿಯೆ ನಡೆಸಲು ಜಾಗವಿಲ್ಲದ ಕಾರಣ ಕುಟುಂಬಸ್ಥರು ಶವವನ್ನು ರಸ್ತೆ ಮೇಲಿಟ್ಟು ಪ್ರತಿಭಟನೆ ನಡೆಸಿದರು

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jun 07, 2022 | 12:05 PM

ಪಾರ್ಥೀವ ಶರೀರದ ಅಂತ್ಯಸಂಸ್ಕಾರ ನಡೆಸಲು ಊರಲ್ಲಿ ಜಾಗವಿಲ್ಲ, ಹಾಗಾಗೇ, ಅವರು ರಸ್ತೆಯ ಮೇಲೆ ಶವವಿಟ್ಟು ಪ್ರತಿಭಟನೆ ನಡೆಸಿದಾಗ ಕಂದಾಯ ಇಲಾಖೆ ಮತ್ತು ಪೊಲೀಸ್ ಅಧಿಕಾರಿಗಳು ಅವರೊಟ್ಟಿಗೆ ಮಾತಾಡಿ ಸಮಸ್ಯೆ ಪರಿಹರಿಸಿದ್ದಾರೆ.

ತುಮಕೂರು: ಇದು ಒಂದು ಗ್ರಾಮದ ಕತೆಯಲ್ಲ. ನಮ್ಮ ನಾಡಿನ ಹಲವಾರು ಭಾಗಗಳಲ್ಲಿ ಕಂಡು ಬರುವ ಸಮಸ್ಯೆ ಇದು. ಕೆಲ ಸಮುದಾಯದ ಜನರಿಗೆ ಕುಟುಂಬಸ್ಥರು ಸತ್ತಾಗ ಶವಸಂಸ್ಕಾರಕ್ಕಾಗಿ (final rites) ಊರಲ್ಲಿ ಜಾಗವೇ ಇರಲ್ಲ. ತುಮಕೂರಿನ (Tumakuru) ನಾಗೇಗೌಡನ ಪಾಳ್ಯದಲ್ಲಿ (Nagangowda Palya) ನಡೆದಿದ್ದು ಅದೇ. ಊರಿನ ಕುಟುಂಬವೊಂದರ ಹನಮಂತಯ್ಯ (Hanumanthaiah) ಹೆಸರಿನ ವ್ಯಕ್ತಿ ಮರಣ ಹೊಂದ್ದಿದ್ದಾರೆ ಅದರೆ ಪಾರ್ಥೀವ ಶರೀರದ ಅಂತ್ಯಸಂಸ್ಕಾರ ನಡೆಸಲು ಊರಲ್ಲಿ ಜಾಗವಿಲ್ಲ, ಹಾಗಾಗೇ, ಅವರು ರಸ್ತೆಯ ಮೇಲೆ ಶವವಿಟ್ಟು ಪ್ರತಿಭಟನೆ ನಡೆಸಿದಾಗ ಕಂದಾಯ ಇಲಾಖೆ ಮತ್ತು ಪೊಲೀಸ್ ಅಧಿಕಾರಿಗಳು ಅವರೊಟ್ಟಿಗೆ ಮಾತಾಡಿ ಸಮಸ್ಯೆ ಪರಿಹರಿಸಿದ್ದಾರೆ.

ಮುಂದೆ ಹೀಗಾಗಲಾರದು ಅಂತ ಅಧಿಕಾರಿಗಳಿಂದ ಆಶ್ವಾಸನೆ ಸಿಕ್ಕ ನಂತರ ಹುನುಮಂತಯ್ಯ ಕುಟುಂಬದವರು ಶವಸಂಸ್ಕಾರ ನಡೆಸಲು ಮುಂದಾಗಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.