ಸಿದ್ದರಾಮಯ್ಯ ನಂತರ ಸಚಿವ ಎಂಬಿ ಪಾಟೀಲ್​ಗೂ ಸಂಕಷ್ಟ, ರಾಜ್ಯಪಾಲರಿಗೆ ಪ್ರಾಸಿಕ್ಯೂಷನ್ ಅನುಮತಿ ಕೋರಿದ ಆರ್​ಟಿಐ ಕಾರ್ಯಕರ್ತ

|

Updated on: Aug 23, 2024 | 7:46 PM

ಅವ್ಯವಹಾರಕ್ಕೆ ಸಂಬಂಧಿಸಿದ ಎಲ್ಲ ದಾಖಲಾತಿಗಳನ್ನು ರಾಜ್ಯಪಾಲರಿಗೆ ಸಲ್ಲಿಸಿ ಪ್ರಾಸಿಕ್ಯೂಷನ್ ಅನುಮತಿ ಕೋರಾಲಾಗಿದೆ ಎಂದು ಹೇಳುವ ದಿನೇಶ್ ಎರಡು ತಿಂಗಳ ಹಿಂದೆಯೇ ಸಿಎಂ ಸಿದ್ದರಾಮಯ್ಯ ಮತ್ತು ದೇಶದ ಎಲ್ಲ ಭ್ರಷ್ಟಾಚಾರಗಳ ಬಗ್ಗೆ ಮಾತಾಡುವ ರಾಹುಲ್ ಗಾಂಧಿಯವರಿಗೆ ದೂರು ಸಲ್ಲಿಸಿದರೂ ಅವರು ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದರು.

ಬೆಂಗಳೂರು: ಸಿದ್ದರಾಮಯ್ಯ ಸಂಪುಟದಲ್ಲಿ ಬೃಹತ್ ಕೈಗಾರಿಕೆಗಳ ಸಚಿವರಾಗಿರುವ ಎಂಬಿ ಪಾಟೀಲ್ ಗೆ ಸಂಕಷ್ಟ ಎದುರಾಗಿದೆ. ಆರ್​ಟಿಐ ಕಾರ್ಯಕರ್ತ ದಿನೇಶ್ ಕಲ್ಹಳ್ಳಿ ಸಚಿವನ ವಿರುದ್ಧ ಪ್ರಾಸಿಕ್ಯೂಷನ್ ಅನುಮತಿ ಕೋರಿ ರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದಾರೆ. ಇಂದು ಸಾಯಂಕಾಲ ವಿಧಾನ ಸೌಧದ ಬಳಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ವಿಷಯ ಹಂಚಿಕೊಂಡ ದಿನೇಶ್, ಸಚಿವ ಪಾಟೀಲ್ ತಮ್ಮ ಸುಪರ್ದಿಯಲ್ಲಿ ಬರುವ ಕರ್ನಾಟಕ ಕೈಗಾರಿಕೆ ಪ್ರದೇಶಾಭಿವೃದ್ಧಿಯ (ಕೆಐಎಡಿಬಿ) ಸುಮಾರು 100 ಎಕರೆ ಮೂಲೆ ನಿವೇಶನಗಳನ್ನು (ಸಿಎ ಸೈಟುಗಳು) ಸಾಮಾನ್ಯ ದರದಲ್ಲಿ ಹಂಚಿದ್ದಾರೆ ಎಂದು ಹೇಳಿದರು. ನಿಯಮಗಳ ಪ್ರಕಾರ ಮೂಲೆ ನಿವೇಶನಗಳನ್ನು ಹರಾಜು ಪ್ರಕ್ರಿಯೆ ಮೂಲಕ ಹಂಚಬೇಕು. ಹರಾಜಿನಲ್ಲಿ ಖರೀದಿಸುವ ಪಾರ್ಟಿಗಳ ನಡುವೆ ದರ ಸಮರ ಏರ್ಪಟ್ಟು ಸರ್ಕಾರದ ಬೊಕ್ಕಸದಲ್ಲಿ ಹೆಚ್ಚಿನ ಹಣ ಸಂಗ್ರಹವಾಗುತ್ತದೆ.

ಪಾಟೀಲ್ ಅವರು ಸಾಮಾನ್ಯದರದಲ್ಲಿ ಸಿಎ ಸೈಟುಗಳ ಹಂಚಿಕೆ ಮಾಡಿರುವ ಕಾರಣ ಬೊಕ್ಕಸಕ್ಕೆ ಏನಿಲ್ಲವೆಂದರೂ ₹300 ಕೋಟಿ ನಷ್ಟವಾಗಿದೆಯೆಂದು ದಿನೇಶ್ ಹೇಳುತ್ತಾರೆ. ಹಂಚಿಕೆಯಲ್ಲಿ ಭ್ರಷ್ಟಾಚಾರ ನಡೆದಿರುವುದು ಮತ್ತು ಕಿಕ್ ಬ್ಯಾಕ್ ಸಂದಾಯವಾಗಿರುವುದು ಮೇಲ್ನೋಟಕ್ಕೆ ಗೊತ್ತಾಗುತ್ತಿದ್ದು ತನಿಖೆ ನಡೆದರೆ ಎಲ್ಲವೂ ಬಯಲಾಗುತ್ತದೆ ಎಂದು ದಿನೇಶ್ ಹೇಳುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ತಮ್ಮ ಸಮಕ್ಷಮದಲ್ಲಿರುವ ಅರ್ಜಿಗಳಿಗೆ ಪ್ರಾಸಿಕ್ಯೂಷನ್ ಅನುಮತಿ ನೀಡುವಂತೆ ರಾಜ್ಯಪಾಲರಿಗೆ ಸಲಹೆ ನೀಡಲು ಸಚಿವ ಸಂಪುಟ ನಿರ್ಧಾರ

Follow us on