Belagavi News: ಸತೀಶ್ ಜಾರಕಿಹೊಳಿ ಮತ್ತು ಲಕ್ಷ್ಮಿ ಹೆಬ್ಬಾಳ್ಕರ್ ನಡುವೆ ಯಾವುದೇ ವೈಮನಸ್ಸಿಲ್ಲ ಅಂತ ಸಾಬೀತಾಯಿತು!
ಸಭೆಯಲ್ಲಿ ಅವರಿಬ್ಬರು ಅಕ್ಕಪಕ್ಕ ಕೂತಿದ್ದರು ಮತ್ತು ಮುಗುಳ್ನಗುತ್ತಾ ಸೌಹಾರ್ದಯುತವಾಗಿ ಮಾತಾಡುತ್ತಿದ್ದರು
ಬೆಳಗಾವಿ: ಹಿಂದಿಯಲ್ಲಿ ಒಂದು ಮಾತಿದೆ, ಚೀಲ್ ಉಡಿ ತೋ ಬೈಂಸ್ ಉಡಿ ಅಂತ, ಅದರರ್ಥ ಒಬ್ಬ ಹದ್ದು ಹಾರಿತು ಅಂತ ಹೇಳಿದ್ರೆ ಇನ್ನೊಬ್ಬ ಎಮ್ಮೆ ಹಾರಿತು ಅಂದಿದ್ದನಂತೆ. ಸುಖಾಸುಮ್ಮನೆ ಸುಳ್ಳು ಸುದ್ದಿಗಳನ್ನು ಹರಡುವ ಜನರ ಮನಸ್ಥಿತಿ ಹಾಗಿರುತ್ತದೆ ಅಂತ ಇದರ ತಾತ್ಪರ್ಯ. ಇದನ್ನು ಯಾಕೆ ಹೇಳಬೇಕಾಗಿದೆಯೆಂದರೆ, ಕೆಲ ದಿನಗಳ ಹಿಂದೆ ಬೆಳಗಾವಿಯ ಪ್ರಭಾವಿ ನಾಯಕರು ಮತ್ತು ಸಿದ್ದರಾಮಯ್ಯ (Siddaramaiah) ಸರ್ಕಾರದಲ್ಲಿ ಸಚಿವರಾಗಿರುವ ಸತೀಶ್ ಜಾರಕಿಹೊಳಿ (Satish Jarkiholi) ಮತ್ತು ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ನಡುವೆ ಯಾವುದೋ ಕಾರಣಕ್ಕೆ ವೈಮನಸ್ಸು ಉಂಟಾಗಿದೆ, ಮಾತುಕತೆ ನಿಂತು ಹೋಗಿದೆ ಅಂತ ಸುದ್ದಿ ಹರಡಿತ್ತು. ರಮೇಶ್ ಜಾರಕಿಹೊಳಿ ಮತ್ತು ಲಕ್ಷ್ಮಿಯವರ ನಡುವೆ ರಾಜಕೀತ ವೈರತ್ವ ಇರೋದು ಬೇರೆ ಗ್ರಹದವರಿಗೂ ಗೊತ್ತಿರಬಹುದು! ಈಗ ಸತೀಶ್ ಜಾರಕಿಹೊಳಿ ಜೊತೆಯೂ ಅಂತ ಕನ್ನಡಿಗರು ಹುಬ್ಬೇರಿಸಿದ್ದರು. ಆದರೆ, ವಿಷಯ ಇದಕ್ಕೆ ತದ್ವಿರುದ್ಧವಾಗಿದೆ. ಬೆಳಗಾವಿಯಲ್ಲಿ ಇಂದು ನಡೆದ ಕೆಡಿಪಿ ಸಭೆಯಲ್ಲಿ ಇದು ಸಾಬೀತಾಯಿತು. ಸಭೆಯಲ್ಲಿ ಅವರಿಬ್ಬರು ಅಕ್ಕಪಕ್ಕ ಕೂತಿದ್ದರು ಮತ್ತು ಮುಗುಳ್ನಗುತ್ತಾ ಸೌಹಾರ್ದಯುತವಾಗಿ ಮಾತಾಡುತ್ತಿದ್ದರು. ಹಾಗಾಗಿ ಆಗಲೇ ಹೇಳಿಲಿಲ್ಲವೇ, ಚೀಲ್ ಉಡಿ ತೋ…
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ